ಗಾರ್ಮೆಂಟ್ ದಾಸ್ತಾನು ನುಂಗಿ ಹಾಕಿದ ಅಗ್ನಿ
ಬೆಂಗಳೂರು,
ಏ.16: ಬೆಂಕಿಯ ಕೆನ್ನಾಲಗೆಗೆ ಸಿಕ್ಕಿ, ಗಾರ್ಮೆಂಟ್ ನ ಗೋದಾಮಿನಲ್ಲಿ ದಾಸ್ತಾನು ಮಾಡಿದ್ದ ಬೃಹತ್ ಜವಳಿ ರಾಶಿ ನಾಶವಾದ ಘಟನೆ ಇಂದು ಯಶವಂತಪುರ ಬಳಿ ನಡೆದಿದೆ. ಆದರೆ, ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿಯಾಗಿಲ್ಲ. id="toptextpromo">ಇಂದು
ಮುಂಜಾನೆ 3.20 ರ ವೇಳೆಗೆ ಗೋರಗುಂಟೆಪಾಳ್ಯದಲ್ಲಿರುವ ಗೋಕಲ್ ದಾಸ್ ಎಕ್ಸ್ ಪೋರ್ಟ್ ಗೆ ಸೇರಿದ ಗಾರ್ಮೆಂಟ್ ನಲ್ಲಿ ಬೆಂಕಿ ಕಾಣಿಸಿಕೊಂಡಿತು. ಸುದ್ದಿ ತಿಳಿದ ತಕ್ಷಣ, ಘಟನಾ ಸ್ಥಳಕ್ಕೆ 30 ಅಗ್ನಿಶಾಮಕದಳದ ವಾಹನಗಳು ಧಾವಿಸಿ ಬಂದವು. ಸುಮಾರು 4 ಗಂಟೆಗಳ ಕಾಲ ಎಡಬಿಡದೆ ಬೆಂಕಿಯ ಮೇಲೆ ಯುದ್ಧ ಸಾರಿದ ಅಗ್ನಿ ಶಾಮಕ ಸಿಬ್ಬಂದಿಗಳು, ಕೊನೆಗೂ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. id='are-slot-1' class='oiad oi-axt oiadv'> id='top-searched-articles'>ವಿದ್ಯುತ್
ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ತಗುಲಿರುವ ಸಾಧ್ಯತೆಯಿದೆ.ಸುಮಾರು 8 ಸಾವಿರದಿಂದ 10 ಸಾವಿರ ಚ.ಅ ವಿಸ್ತೀರ್ಣದ ಗಾರ್ಮೆಂಟ್ ಗೋದಾಮು ಸಂಪೂರ್ಣ ಸುಟ್ಟು ಕರಕಲಾಗಿದೆ. ಬೆಂಕಿ ಆಕಸ್ಮಿಕದಿಂದ ಎಷ್ಟು ನಷ್ಟವಾಗಿದೆ ಎಂದು ಸದ್ಯಕ್ಕೆ ಹೇಳಲಾಗದು ಎಂದು ಅಗ್ನಿಶಾಮಕ ದಳದ ಮುಖ್ಯಸ್ಥ ಚಂಗಪ್ಪ ಹೇಳಿದರು.











Click it and Unblock the Notifications