ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೇತ್ರಾವತಿ ತಿರುಗಿಸಿದರೆ ಬದುಕು ದುಸ್ತರ : ಹೆಗ್ಗಡೆ

By Mahesh
|
Google Oneindia Kannada News

Veerendra Heggade
ಬೆಳ್ತಂಗಡಿ, ಏ.14:ನೇತ್ರಾವತಿ ನದಿಯನ್ನು ತಿರುಗಿಸಿದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಈ ಜೀವನದಿ ಬತ್ತಿ ಹೋಗಲಿದೆ. ಇದರಿಂದ ಜಿಲ್ಲೆಯಲ್ಲಿ ಈ ನದಿಯನ್ನೇ ನಂಬಿಕೊಂಡಿರುವ ಜನರ ಬದುಕು ದುಸ್ತರವಾಗಲಿದೆ. ಮಾತ್ರವಲ್ಲ, ಧರ್ಮಸ್ಥಳಕ್ಕೆ ಬರುವ ಲಕ್ಷಾಂತರ ಯಾತ್ರಿಕರಿಗೂ ತೊಂದರೆಯಾಗಲಿದೆ ಎಂದು ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಆತಂಕ ವ್ಯಕ್ತಪಡಿಸಿದ್ದಾರೆ.

ಧರ್ಮಸ್ಥಳ ಸಮೀಪದ ನೇತ್ರಾವತಿ ಸ್ನಾನಘಟ್ಟಕ್ಕೆ ಮಂಗಳವಾರ ಆಗಮಿಸಿ, ಅಲ್ಲಿನ ನೀರಿನ ಒಳ ಹರಿವು ಪರಿಸ್ಥಿತಿ ಅವಲೋಕಿಸಿದ ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಸರಕಾರ ನದಿ ತಿರುಗಿಸುವ ಪ್ರಸ್ತಾವನೆಯನ್ನು ಕೈಬಿಟ್ಟು ಮಳೆಗಾಲದಲ್ಲಿ ನೀರನ್ನು ಸಂಗ್ರಹಿಸಿಡುವ ಕೆಲಸ ಮಾಡುವುದೊಳಿತು ಎಂದು ಸಲಹೆ ಮಾಡಿದರು.

ಕಿಂಡಿ ಅಣೆಕಟ್ಟು ಬೇಕು: ನೇತ್ರಾವತಿ ನದಿಗೆ ಕಿರು ಅಣೆಕಟ್ಟುಗಳನ್ನು ಕಟ್ಟಿ ದಕ್ಷಿಣ ಕನ್ನಡ ಜಿಲ್ಲೆಯ ಜಲಕ್ಷಾಮವನ್ನು ಪರಿಹರಿಸಬಹುದು. ಅಣೆಕಟ್ಟುಗಳನ್ನು ಕಟ್ಟುವ ಬಗ್ಗೆ ಸರಕಾರ ಕೂಡಲೇ ಕಾರ್ಯಪ್ರವೃತ್ತರಾಗಬೇಕು. ಈಗಾಗಲೇ ನೇತ್ರಾವತಿ ನದಿಯಲ್ಲಿ ಹರಿವಿನ ಕೊರತೆ ಕಂಡುಬರುತ್ತಿದೆ.

ಮಳೆಗಾಲದಲ್ಲಿ ಈ ನದಿಯ ನೀರನ್ನು ಸಂಗ್ರಹಿಸು ವುದು ಅಗತ್ಯ. ಅದಕ್ಕಾಗಿ ಸಣ್ಣ ಸಣ್ಣ ಅಣೆಕಟ್ಟು ಗಳನ್ನು ಕಟ್ಟಿ ಮಳೆ ನೀರನ್ನು ಸಂಗ್ರಹಿಸಿ ಅದನ್ನು ಬೇಸಿಗೆಯಲ್ಲಿ ಉಪಯೋಗಿಸಲು ವ್ಯವಸ್ಥೆ ಮಾಡಬೇಕು. ಇದಕ್ಕೆಲ್ಲ ಪರಿಹಾರ ಅಣೆಕಟ್ಟು ಮಾತ್ರ. ದೊಡ್ಡ ಅಣೆಕಟ್ಟುಗಳಿಗಿಂತ
ಕಿರು-ಕಿಂಡಿ ಅಣೆಕಟ್ಟುಗಳೇ ಹೆಚ್ಚು ಸೂಕ್ತವಾಗಬಲ್ಲುದು ಮತ್ತು ಇವು ಕಡಿಮೆ ಖರ್ಚುದಾಯಕವೂ ಹೌದು ಎಂದರು.

ಅಣೆಕಟ್ಟುಗಳಿಂದ ಜಲ ಮರು ಪೂರಣಕ್ಕೆ ಪ್ರಯೋಜನವಾದೀತು. ಇದರಿಂದ ನದಿ ಪಾತ್ರದ ನೂರಾರು ಕೃಷಿಕರಿಗೂ ಪ್ರಯೋಜನವಾಗುತ್ತದೆ. ನೇತ್ರಾವತಿ ನದಿಯ ಹರಿವು ಕಡಿಮೆಯಾಗುತ್ತಿರುವುದರಿಂದ ಮರಳಿನ ಅಭಾವವೂ ತಲೆದೋರುತ್ತಿದೆ. ಇದರಿಂದ ವಿವಿಧ ಅಭಿವೃದ್ಧಿ ಕಾರ್ಯಗಳು ಕುಂಠಿತಗೊಳ್ಳಲಿವೆ ಎಂದು ಆತಂಕ ವ್ಯಕ್ತಪಡಿಸಿದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X