ಕ್ರಿಶ್ಚಿಯನ್ ಸಂಸ್ಥೆಗಳ ಮತಾಂತರ ಹಾವಳಿ
ಮಡಿಕೇರಿ,
ಏ. 13 : ಜಿಲ್ಲೆಯ ವಿವಿಧ ಭಾಗಗಳಲ್ಲಿ ನಡೆಯುತ್ತಿರುವ ಮತಾಂತರವನ್ನು ವಿರೋಧಿಸಿ ಜನಜಾಗೃತಿ ಸುರಕ್ಷಾ ವೇದಿಕೆ ನೇತೃತ್ವದಲ್ಲಿ ಹಲವಾರು ಸಂಘಸಂಸ್ಥೆಗಳು ಸೋಮವಾರ ತಿಥಿಮತಿಯಲ್ಲಿ ಅರಣ್ಯ ಪ್ರದೇಶದಾದ್ಯಂತ ಬೃಹತ್ ಪ್ರತಿಭಟನೆ ನಡೆಸಿದವು. id="toptextpromo">ಜಿಲ್ಲೆಯಲ್ಲಿರುವ
ಹಿಂದುಳಿದ ಜನಾಂಗಗಳಿಗೆ ಕೆಲ ಕ್ರಿಶ್ಚಿಯನ್ ಸಂಘಟನೆಗಳು ವಿವಿಧ ಆಮಿಷವೊಡ್ಡಿ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರ ಮಾಡುತ್ತಿದ್ದಾರೆ. ಆರ್ಥಿಕ ಹಿಂದುಳಿದ ಪ್ರದೇಶಗಳನ್ನು ಆಯ್ಕೆ ಮಾಡಿಕೊಂಡಿರುವ ಕ್ರಿಶ್ಚಿಯನ್ ಸಂಘಟನೆಗಳು ಈಗಾಗಲೇ ಸಾಕಷ್ಟು ಸಂಖ್ಯೆಯ ಜನರನ್ನು ಮತಾಂತರಗೊಳಿಸಿದ್ದಾರೆ. ಸರಕಾರ ಈ ಕೂಡಲೇ ಎಚ್ಚತ್ತು ಮತಾಂತರ ತಡೆಯಬೇಕು ಅಲ್ಲದೇ, ಹಿಂದುಳಿದ ಪ್ರದೇಶದ ಜವನರ ಕಲ್ಯಾಣಕ್ಕಾಗಿ ಯೋಜನೆಗಳನ್ನು ರೂಪಿಸಿಬೇಕು ಎಂದು ವೇದಿಕೆ ಮುಖ್ಯಸ್ಥ ಮುನಿಯಪ್ಪ ಸರಕಾರವನ್ನು ಆಗ್ರಹಿಸಿದ್ದಾರೆ. id='are-slot-1' class='oiad oi-axt oiadv'> id='top-searched-articles'> ಕ್ರಿಶ್ಚಿಯನ್ ಸಂಘಟನೆಗಳ ವ್ಯವಸ್ಥಿತ ಕೃತ್ಯ ಇದಾಗಿದ್ದು, ಹಿಂದುಳಿದ ಮತ್ತು ಅರಣ್ಯ ಪ್ರದೇಶದಲ್ಲಿ ವಾಸಿಸುವ ಜನಾಂಗವನ್ನು ಗುರಿಯಾಗಿರಿಸಿಕೊಂಡು ಕ್ರಿಶ್ಚಿಯನ್ ಸಂಘಟನೆಗಳು ಕಾರ್ಯಾಚರಣೆ ನಡೆಸಿವೆ. ಇದಕ್ಕೆ ಸಂಬಂಧಿಸಿದಂತೆ ಈ ಕೃತ್ಯ ತಡೆಯಲು ಸರಕಾರಕ್ಕೆ ಮನವಿ ಮಾಡಿಕೊಳ್ಳಲಾಗಿದೆ. ಪರಿಸ್ಥಿತಿ ಹೀಗೆ ಮುಂದುವರಿದಲ್ಲಿ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಮುನಿಯಪ್ಪ ಎಚ್ಚರಿಕೆ ನೀಡಿದರು.











Click it and Unblock the Notifications