ಬಸವಣ್ಣ ತತ್ವದಡಿ ಕಾಂಗ್ರೆಸ್ ಪಕ್ಷ

Sonia Gandhi
ಶಿವಯೋಗಮಂದಿರ (ಬಾಗಲಕೋಟಿ), ಏ. 13 : ಸಮಪಾಲು ಸಮಬಾಳು ತತ್ವದಡಿ ವರ್ಗರಹಿತ ಸಮಾಜವನ್ನು ನಿರ್ಮಿಸಲು ಬಸವಣ್ಣನವರು ಹಾಕಿಕೊಟ್ಟ ಹಾದಿಯಲ್ಲಿ ಕಾಂಗ್ರೆಸ್ ಪಕ್ಷ ನಡೆಯುತ್ತಿದೆ ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಹೇಳಿದರು.

ಬಾದಾಮಿ ತಾಲ್ಲೂಕಿನ ಶಿವಯೋಗ ಮಂದಿರದಲ್ಲಿ ಏರ್ಪಡಿಸಲಾಗಿದ್ದ ಅಖಿಲ ಭಾರತ ವೀರಶೈವ ಮಹಾಸಭೆ ಹಾಗೂ ಶಿವಯೋಗ ಮಂದಿರದ ಶತಮಾನೋತ್ಸವ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಅವರು ಹಾನಗಲ್ ಕುಮಾರಸ್ವಾಮಿಗಳ ತೈಲ ವರ್ಣ ಚಿತ್ರಗಳನ್ನು ಬಿಡುಗಡೆಗೊಳಿಸಿ ಅವರು ಮಾತನಾಡುತ್ತಿದ್ದರು.

ಎನ್ನ ದೇಹವೇ ದೇಗುಲ ಎಂದು ಪ್ರತಿಪಾದಿಸುವ ಮೂಲಕ ಪ್ರತಿ ಮನುಷ್ಯರೊಳಗೆ ದೇವರನ್ನು ಗುರುತಿಸಿದ ಬಸವಣ್ಣನವರು, 12 ನೇ ಶತಮಾನದಲ್ಲಿ ವಚನಗಳ ಮೂಲಕ ಸಾರಿದ ವೈಚಾರಿಕತೆ ಇಂದಿಗೂ ಪ್ರಸ್ತುತವಾಗಿದೆ ಎಂದರು.

ವೀರಶೈವ ಲಿಂಗಾಯಿತ ಸಮಾಜವನ್ನು ಪ್ರತ್ಯೇಕ ಧರ್ಮವೆಂದು ಪರಿಗಣಿಸಿ,ಹಿಂದೂ, ಮುಸಲ್ಮಾನ, ಜೈನ, ಸಿಖ್ ಧರ್ಮಿಯರಿಗೆ ಜನಗಣತಿಯಲ್ಲಿ ನೀಡಿರುವ ಪ್ರತ್ಯೇಕ ಕಾಲಂ ಒದಗಿಸಬೇಕು ಎಂಬ ವೀರಶೈವ ಮಹಾಸಭೆಯ ಬೇಡಿಕೆ ಬಗ್ಗೆ ಸೋನಿಯಾ ಗಾಂಧಿ ಚಕಾರವೆತ್ತಲಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+