ಮಾವೋವಾದಿಗಳಿಗೆ ಹೆದರಿದ ಸರಕಾರ!
ರಾಯಪುರ್,
ಏ. 12 : ಕಳೆದ ಮಂಗಳವಾರ ನಡೆದ ದಂತೇವಾಡ ಭೀಕರ ನರಮೇಧಕ್ಕೆ ನಲುಗಿರುವ ಕೇಂದ್ರ ಸರಕಾರ ಮಾವೋವಾದಿಗಳ ವಿರುದ್ಧ ಹಸಿರು ಕ್ರಾಂತಿ ಕಾರ್ಯಾಚರಣೆಯನ್ನು ಕೈಬಿಟ್ಟಿದೆ. ಈ ಮೂಲಕ ಮಾವೋವಾದಿಗಳಿಗೆ ನರಮೇಧದ ನಂತರ ಮೊದಲ ಜಯ ಸಿಕ್ಕಂತಾಗಿದೆ. id="toptextpromo"> ಮಾವೋವಾದಿಗಳು ನಡೆಸಿದ ಭೀಕರ ಹತ್ಯಾಕಾಂಡದಿಂದ ಯೋಧರಲ್ಲಿ ಭಯ ಹುಟ್ಟಿರುವದಂತೂ ನಿಜ. ಈ ಬಗ್ಗೆ ಸಿಆರ್ ಪಿಎಫ್ ಅಧಿಕಾರಿಗಳು ಪರೋಕ್ಷವಾಗಿ ಒಪ್ಪಿಕೊಳ್ಳುತ್ತಾರೆ. ನಾವು ಈ ಬಗ್ಗೆ ಏನನ್ನೂ ಹೇಳಲು ತಯಾರಿಲ್ಲ. ಇದಕ್ಕೆ ಸಂಬಂಧಿಸಿದಂತೆ ದೆಹಲಿಯಲ್ಲಿರುವ ನಮ್ಮ ಹಿರಿಯ ಅಧಿಕಾರಿಗಳನ್ನು ಕೇಳಿ ಎಂದು ಛತ್ತೀಸ್ ಗಢ್ ದಲ್ಲಿರುವ ಸಿಆರ್ ಪಿಎಫ್ ಪಡೆ ಮುಖ್ಯಸ್ಥರ ಅಭಿಪ್ರಾಯವಾಗಿದೆ. id='are-slot-1' class='oiad oi-axt oiadv'> id='top-searched-articles'> ಛತ್ತೀಸ್ ಗಢ್ ಪೊಲೀಸರು ಮಾವೋವಾದಿಗಳ ವಿರುದ್ಧ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಇದರಲ್ಲಿ ಸಿಆರ್ ಪಿಎಫ್ ಪಾಲ್ಗೊಳ್ಳುತ್ತಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಕಳೆದ ಮಂಗಳವಾರ ಮಾವೋವಾದಿಗಳು 75 ಸಿಆರ್ ಪಿಎಫ್ ಯೋಧರು ಹಾಗೂ ಒಬ್ಬ ಛತ್ತೀಸ್ ಗಢ್ ದ ಪೇದೆಯನ್ನು ನಿರ್ದಯವಾಗಿ ಕೊಂದು ಹಾಕಿದ್ದರು. ಈ ಪ್ರಕರಣದಿಂದ ಇಡೀ ದೇಶವೇ ತಲ್ಲಣಗೊಂಡಿತ್ತು. ಘಟನೆಯ ಹೊಣೆ ಹೊತ್ತಿದ್ದ ಗೃಹ ಸಚಿವ ಪಿ ಚಿದಂಬರಂ ರಾಜೀನಾಮೆ ನೀಡಲು ಮುಂದಾಗಿದ್ದರು.











Click it and Unblock the Notifications