ಗುಲ್ಬರ್ಗಾ ವಿವಿಗೆ ಬಸವೇಶ್ವರರ ಹೆಸರಿಡಿ, ಮಹಾಸಭಾ
ಬೆಂಗಳೂರು,
ಏ. 9 : ಗುಲ್ಬರ್ಗಾ ವಿಶ್ವವಿದ್ಯಾಲಯಕ್ಕೆ ಜಗಜ್ಯೋತಿ ಬಸವೇಶ್ವರ ವಿಶ್ವವಿದ್ಯಾಲಯ ಎಂದು ನಾಮಕರಣ ಮಾಡುವಂತೆ ಅಖಿಲ ಭಾರತ ವೀರಶೈವ ಮಹಾಸಭಾ ಸರಕಾರವನ್ನು ಒತ್ತಾಯಿಸಿದೆ. id="toptextpromo"> ಬಾದಾಮಿ ತಾಲ್ಲೂಕಿನ ಶಿವಯೋಗ ಮಂದಿರದಲ್ಲಿ ನಾಳೆಯಿಂದ ನಡೆಯಲಿರುವ ಶತಮಾನೋತ್ಸವದ ಅಂಗವಾಗಿ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಮಹಾಸಭಾದ ರಾಜ್ಯ ಘಟಕದ ಕಾರ್ಯದರ್ಶಿ ಬಿ ಎಸ್ ವಾಗೀಶ್ ಪ್ರಸಾದ್, ಗುಲ್ಬರ್ಗಾ ವಿವಿಗೆ ಬಸವೇಶ್ವರರ ಹೆಸರು, ಬಿಜಾಪುರ ವಿವಿಗೆ ಅಕ್ಕಮಾಹಾದೇವಿ ಹೆಸರು, ಕಿತ್ತೂರಿನ ವೀರ ರಾಣಿ ಚೆನ್ನಮ್ಮನ ಹೆಸರಿನಲ್ಲಿ ರಾಷ್ಟ್ರೀಯ ಪ್ರಶಸ್ತಿ ಹಾಗೂ ಬೆಂಗಳೂರಿನಲ್ಲಿ ಸ್ಮಾರಕ ಸ್ಥಾಪಿಸುವಂತೆ ಅವರು ಸರಕಾರವನ್ನು ಆಗ್ರಹಿಸಿದರು. id='are-slot-1' class='oiad oi-axt oiadv'> id='top-searched-articles'>ಅಖಿಲ
ಭಾರತ ವೀರಶೈವ ಮಹಾಸಭಾ ಮತ್ತು ಮದ್ವೀರಶೈವ ಶಿವಯೋಗ ಮಂದಿರ ಸಂಸ್ಥೆ ಶತಮಾನವೋತ್ಸವವು ಏ 9 ರಿಂದ 13ರವರಗೆ ಬಾದಾಮಿ ತಾಲ್ಲೂಕಿನ ಶಿವಯೋಗ ಮಂದರದಲ್ಲಿ ನಡೆಯಲಿದೆ. ಮುಖ್ಯಮಂತ್ರಿ ಯಡಿಯೂರಪ್ಪ, ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ, ಬಿಜೆಪಿ ಹಿರಿಯ ನಾಯಕ ಎಲ್ ಕೆ ಅಡ್ವಾಣಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.











Click it and Unblock the Notifications