ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಲ್ಯರ ಕಂಪೆನಿ ವಿಶ್ವದಲ್ಲೇ ನಂ.2

By Mahesh
|
Google Oneindia Kannada News

Vijay Mallya
ಬೆಂಗಳೂರು, ನ 8 : ಕಳೆದ ಹಣಕಾಸು ವರ್ಷದಲ್ಲಿ ಮದ್ಯದೊರೆ ವಿಜಯ್ ಮಲ್ಯ ಒಡೆತನದ ಯುನೈಟೆಡ್ ಬ್ರೆವರೀಸ್ ಸಂಸ್ಥೆ ಮದ್ಯ ತಯಾರಿಕೆಯಲ್ಲಿ ವಿಶ್ವದಲ್ಲೇ ಎರಡನೇ ಅತಿದೊಡ್ಡ ಕಂಪೆನಿಯಾಗಿ ಹೊರಹೊಮ್ಮಿದೆ. 2009 -10ನೇ ಸಾಲಿನಲ್ಲಿ ಸಂಸ್ಥೆ 10 ಕೋಟಿ ಕೇಸ್ ಮದ್ಯ ಮಾರಾಟ ಮಾಡಿ ದಾಖಲೆ ನಿರ್ಮಿಸಿದೆ.

ತ್ವರಿತವಾಗಿ ಮಾರಾಟವಾಗುವ ಗ್ರಾಹಕರ ಉತ್ಪನ್ನಗಳ ವಿಭಾಗದಲ್ಲಿ ತಮ್ಮ ಸಂಸ್ಥೆಯ ಮದ್ಯವು ಅಮೂಲ್ ಹಾಲು ಮತ್ತು ಟಾಟಾ ಟೀಗಿಂತ ವೇಗವಾಗಿ ಮಾರಾಟವಾಗುತ್ತಿದೆ ಎನ್ನುವ ವಿಷಯವನ್ನು ಮಲ್ಯ ಸುದ್ದಿಗಾರರಿಗೆ ತಿಳಿಸಿದರು. ಯುವತಿಯರು ಹೆಚ್ಚಾಗಿ ವೈನ್ ಇಷ್ಟ ಪಡುತ್ತಾರೆ ಎನ್ನುವ ವಿಷಯ ಗಮನಕ್ಕೆ ಬಂದಿರುವುದರಿಂದ ವೈನ್ ತಯಾರಿಕೆಯತ್ತ ಹೆಚ್ಚು ಗಮನ ಕೇಂದ್ರೀಕರಿಸಿದ್ದೇವೆ ಎಂದು ಅವರು ಹೇಳಿಕೆ ನೀಡಿದ್ದಾರೆ.

ಗುಜರಾತ್ ಸರಕಾರದ ವಿರುದ್ದ ಪರೋಕ್ಷವಾಗಿ ದಾಳಿ ನಡೆಸಿದ ಮಲ್ಯ, ಸರಕಾರ ಮದ್ಯ ತಯಾರಕರ ವಿರುದ್ಧ ವಕ್ರದೃಷ್ಟಿ ಬೀರುತ್ತಿರುವುದು ತಪ್ಪು. ಮದ್ಯ ನಿಷೇಧದಿಂದ ಅದರಮಾರಾಟವೇನು ನಿಲ್ಲುವುದಿಲ್ಲ. ಅಕ್ರಮವಾಗಿಯಾದರೂ ಮಾರಾಟ ನಡೆದೇ ನಡೆಯುತ್ತೆ. ಸರಕಾರ ಅಬಕಾರಿ ಮತ್ತು ಇತರ ತೆರಿಗೆಗಳಿಂದ ವಂಚಿತವಾಗುತ್ತದೆ. ಇದರ ಬದಲು ಕಂಪೆನಿಗಳಿಗೆ ನೇರವಾಗಿ ಮದ್ಯ ತಯಾರಿಸಲು ಅನುಮತಿ ನೀಡಬಹುದು. ಇದರಿಂದ ಸಂಗ್ರಹವಾದ ತೆರಿಗೆ ಹಣವನ್ನು ಸಮಾಜ ಕಲ್ಯಾಣ ಕೆಲಸಕ್ಕೆ ಬಳಸಿಕೊಳ್ಳಲಿ ಎಂದು ಕಿವಿಮಾತು ಹೇಳಿದರು.

ಸಿದ್ದಾರ್ಥ್ ಮಲ್ಯ (ವಿಜಯ್ ಮಲ್ಯ ಪುತ್ರ ) ಉದ್ಯೋಗಿಯಾಗಿ ಯುನೈಟೆಡ್ ಸ್ಪಿರಿಟ್ ಸಂಸ್ಥೆಗೆ ಸೇರಿಕೊಂಡಿದ್ದಾರೆ. ಪ್ರಧಾನ ಉಪ ವ್ಯವಸ್ಥಾಪಕರಾಗಿ ಅವರು ಜೂನ್ ಒಂದರಿಂದ ಅಧಿಕಾರ ಸ್ವೀಕರಿಸಿಕೊಳ್ಳಲಿದ್ದಾರೆ . ಅವರ ಮಾಸಿಕ ಮೂಲವೇತನ ರೂ. 48 ,150 . ಇತರ ಭತ್ಯೆಗಳು ಸೇರಿ 1 .67 ಲಕ್ಷ ಆಗಬಹುದೆಂದು ಸುದ್ದಿಗಾರರಿಗೆ ವಿಜಯ್ ಮಲ್ಯ ತಿಳಿಸಿದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X