ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಪಲ್ ಐಪ್ಯಾಡ್ ಮೈ ಸವರುವ ಮುನ್ನ

By *ಮಲೆನಾಡಿಗ
|
Google Oneindia Kannada News

AppleiPad
ಆಪಲ್ ಸಂಸ್ಥೆಯಿಂದ ಯಾವುದೇ ಉತ್ಪನ್ನ ಹೊರ ಬಂದರೂ ಸಾಕು ಜಗತ್ತೇ ಕಣ್ಣರಳಿಸಿ ನೋಡುತ್ತದೆ. ಇದಕ್ಕೆ ಕಾರಣ, ಆಪಲ್ ಉತ್ಪನ್ನಗಳಲ್ಲಿ ಬಳಸಲಾಗುವ ಉನ್ನತ ತಂತ್ರಜ್ಞಾನ, ಗ್ರಾಹಕ ಸ್ನೇಹಿ ವಿನ್ಯಾಸ, ವಿಸ್ತೃತ ಮಾರುಕಟ್ಟೆ ಹೀಗೆ ಹತ್ತು ಹಲವು ವೈಶಿಷ್ಟ್ಯತೆಯನ್ನು ಹೊಂದಿರುತ್ತದೆ.

ವಿಡಿಯೋ: ಐಪ್ಯಾಡ್ ಮೇಲೆ ಒಮ್ಮೆ ಕಣ್ಣಾಡಿಸಿ

ಅಪಲ್ ನ ಹೊಸ ಉತ್ಪನ್ನ ಐಪ್ಯಾಡ್ ಕೂಡ ಇದೇ ಕುತೂಹಲ, ನಿರೀಕ್ಷೆಯನ್ನು ಗ್ರಾಹಕರಲ್ಲಿ ಮೂಡಿಸಿದೆ. ಆಪಲ್ ಉತ್ಪನ್ನಗಳ ಸಪೂರ ಮೈ ಸವರಿ ರೋಮಾಂಚನಗೊಳ್ಳಲು ಭಾರತೀಯ ಸ್ವಲ್ಪ ಕಾಲ ಕಾಯಬೇಕಾದರೂ ಅಮೆರಿಕದ ಮಾರುಕಟ್ಟೆಗೆ ಲಗ್ಗೆ ಇಟ್ಟಿರುವ ಐಪ್ಯಾಡ್ ನ ಸಾಧಕ ಬಾಧಕಗಳ ಬಗ್ಗೆ ಕೊಂಚ ಗಮನಿಸೋಣ ಬನ್ನಿ. ಐಫೋನ್ ,ಲ್ಯಾಪ್‌ಟಾಪಿಗೆ ಸ್ಪರ್ಧೆ ನೀಡಲು ಸಮರ್ಥ ಎಂಬುದು ಆಪಲ್ ಮುಖ್ಯಸ್ಥ ಸ್ಟೀವ್ ಜಾಬ್ಸ್ ವಾದ.

ಐಪ್ಯಾಡ್ ನ ಗುಣಲಕ್ಷಣಗಳು:

*9.56 ಇಂಚು ಎತ್ತರ, 7.47 ಇಂಚು ಅಗಲ.
*1.5 ಪೌಂಡು ತೂಗುವ ಐಪ್ಯಾಡ್ , ಮಾರುಕಟ್ಟೆಯಲ್ಲಿ ಲಭ್ಯವಿರುವ ಯಾವುದೇ ಕಂಪ್ಯೂಟರ್ ನೋಟ್ ಬುಕ್ (ಲ್ಯಾಪ್ ಟಾಪ್) ತೂಕಕ್ಕಿಂತ ಕಮ್ಮಿ. 3ಜಿ ಮಾದರಿ ಐಪ್ಯಾಡ್ ತೂಕ 1.6 ಪೌಂಡುಗಳು.
*ವೆಬ್ ಸೈಟ್(ಸಫಾರಿ ಬ್ರೋಸರ್ ಬಳಸಿ) ,ಇ ಮೇಲ್ ,ಇ-ಪುಸ್ತಕ,ಸಂಗೀತ(ಐ ಟ್ಯೂನ್ಸ್),ವಿಡಿಯೋ, ಸಿನಿಮಾ ,ಆಟಗಳು ಮತ್ತು ಚಿತ್ರಗಳ ವೀಕ್ಷಣೆ ಸಹಕಾರಿ.
* ಐಫೋನ್ ಹಾಗೂ ಐಪೋಡ್ ಟಚ್ ನ ಎಲ್ಲಾ ಸೌಲಭ್ಯ ಲಭ್ಯ ಮುಖ್ಯವಾಗಿ App store ಇತ್ಯಾದಿ.
*10 ಗಂಟೆಗಳ ಕಾಲ ಬ್ಯಾಟರಿ ಬ್ಯಾಕ್ ಅಪ್.
* 9.7 ಇಂಚು ಎಲ್ ಇಡಿ ಹಿನ್ನೆಲೆಯುಳ್ಳ ಟಚ್ ಸ್ಕ್ರೀನ್ (1024 X768 ಪಿಕ್ಸೆಲ್ ರೆಸೆಲ್ಯೂಷನ್)
*178 ಡಿಗ್ರಿ ದೃಷ್ಟಿಕೋನ ಸಾಧ್ಯ.
* ಗೃಹ ಬಳಕೆಯಲ್ಲಿನ ವೈ ಫೈ ಸೌಲಭ್ಯಕ್ಕೆ ಹೊಂದಿಕೊಳ್ಳುತ್ತದೆ. ಮುಂದೆ 3ಜಿ ಅವೃತ್ತಿಯನ್ನು ಹೊರತರುವ ಸಾಧ್ಯತೆ.
*ಅಮೆಜಾನ್ಸ್, ಕಿಂಡ್ಲೆ ಇ-ಓದುಗರಿಗಾಗಿ, ಆಪಲ್ ಸಂಸ್ಥೆಯ ಡಿಜಿಟಲ್ ಬುಕ್‌ಸ್ಟೋರ್‌ನ ಐಬುಕ್‌ಗಳು ಲಭ್ಯವಿದೆ.
*ಯರ್ಸನ್ ಪ್ಲೇಸಸ್, ಪೆಂಗ್ವಿನ್,ನ್ಯೂಸ್ ಕಾರ್ಪೋರೇಶನ್, ಹಾರ್ಪರ್ ಕೊಲಿನ್ಸ್ ಮತ್ತು ಹ್ಯಾಚೆಟ್ಟೆ ಬುಕ್ ಗ್ರೂಪ್ ಮುಂತಾದ ಪ್ರಕಾಶನದ ಐ ಪುಸ್ತಕಗಳು ಲಭ್ಯ.
*16 ಜಿಬಿ ಮಾದರಿ ಐಪ್ಯಾಡ್ ಬೆಲೆ ಸುಮಾರು 499 ಡಾಲರ್ (ಅಮೆರಿಕದ ಮಾರುಕಟ್ಟೆ ಬೆಲೆ)
*32 ಜಿಬಿ ಮಾದರಿಗೆ 599 ಡಾಲರ್
*64 ಜಿಬಿ ಮಾದರಿಗೆ 699 ಡಾಲರ್

ಐಪ್ಯಾಡ್ ನ ಭಾದಕಗಳು ಇಂತಿವೆ:

* ಇದರಲ್ಲಿ ಮಲ್ಟಿ ಟಾಸ್ಕಿಂಗ್ (ಬಹುಕಾರ್ಯಪಟುತ್ವ)ಸೌಲಭ್ಯವಿಲ್ಲ.
* ನಿಮ್ಮ ಯೋಚನೆಗಿಂತ ಇದು ತೂಕವಿರುವ ಸಾಧ್ಯತೆಯಿದೆ. ಅಲ್ಲದೆ ಅಷ್ಟು ತೂಕದ ಇ-ರೀಡರ್ ಅನ್ನು ಸಾಮಾನ್ಯ ಪುಸ್ತಕದ ರೀತಿ ಹಿಡಿದು ಹೆಚ್ಚು ಹೊತ್ತು ಓದಲು ಕಷ್ಟವೆನಿಸುತ್ತದೆ.
* ಫೋನ್ ಅಥವಾ ಲ್ಯಾಪ್ ಟಾಪ್ ಗೆ ಬದಲಿಯಾಗಿ ಇದನ್ನು ಬಳಸಲು ಬರುವುದಿಲ್ಲ. ಮಾಹಿತಿ ಹಾಗೂ ಮನರಂಜನೆ ಗ್ರಹಿಸಲು ಕಷ್ಟಪಡಬೇಕಾಗುತ್ತದೆ.
*ಕೈಲಿ ಹಿಡಿದು ಟೈಪ್ ಮಾಡುವುದು ಅಷ್ಟು ಸುಲಭವಾಗಿಲ್ಲ. ಉದ್ದುದ್ದದ ಇಮೇಲ್ ಕಳಿಸುವವರಿಗೆ ಇದು ಬೇಡದ ಉಪಕರಣವಾದೀತು.
*ಸದ್ಯದ ನಿಗದಿತ ಐಪಾಡ್ ಬೆಲೆ ಕೊಂಚ ದುಬಾರಿ ಎನಿಸಬಹುದು. ಆದರೆ, ಐಫೋನ್ ಬೆಲೆ ತಗ್ಗಿಸಿದಂತೆ ಐಪ್ಯಾಡ್ ಬೆಲೆ ಕೂಡ ಇಳಿಕೆ ಸಾಧ್ಯತೆಯಿದೆ. ಅಲ್ಲದೆ, ವೆಬ್‌ಕ್ಯಾಮ್ ಅಥವಾ ವಿಡಿಯೋ ಕಾಲ್ ಸೌಲಭ್ಯವನ್ನು ನೀಡುವ ಸೂಚನೆಯೂ ಇದೆ.
* ಇದರಲ್ಲಿ ಉನ್ನತ ಗುಣಮಟ್ಟದ ಅನುಭವ ಸಿಕ್ಕರೂ, ಉತ್ಕೃಷ್ಟತೆ ಮೆರೆಯುವಲ್ಲಿ ವಿಫಲ.
* ಐಟ್ಯೂನ್ಸ್ ಸ್ಟೋರ್ ನಿಂದ ಪಡೆದ ಪುಸ್ತಕಗಳಲ್ಲಿ ಇಲ್ಲಿ ಬಳಸಿ ಓದುವಾಗ ಬೇಕೆನಿಸಿದ ಪ್ಯಾರಾ ಅಥವಾ ಸಾಲುಗಳ ಬಗ್ಗೆ ಟಿಪ್ಪಣಿ ಮಾಡಿಕೊಳ್ಳುವ ಸೌಲಭ್ಯ ಸದ್ಯಕ್ಕಿಲ್ಲ.
*ಅಡೊಬ್ ಉತ್ಪನ್ನಗಳಿಗೆ ಬೆಂಬಲವಿಲ್ಲ. ಮುಖ್ಯವಾಗಿ ಫ್ಲಾಶ್ ಆಧಾರಿತ ವೆಬ್ ಸೈಟ್ ನೋಡಲು ತೊಂದರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X