ಕಾರವಾರದಲ್ಲಿ ಭಾಷಾ ಭಾವೈಕ್ಯತಾ ಸಮಾವೇಶ

ಕನ್ನಡ, ಕೊಂಕಣಿ, ಮರಾಠಿ, ಉರ್ದು, ನವಾಯಿತಿ, ಹಿಂದಿ, ಸಂಸ್ಕೃತ ಹೀಗೆ ಏಳು ಭಾಷೆಗಳ ನಡುವೆ ಸೌಹಾರ್ದವನ್ನುಂಟುಮಾಡುವ ಹಾಗೂ ಭಾಷೆಗಳ ನಡುವೆ ಇರುವ ಕೊಡುಕೊಳ್ಳುವಿಕೆಯನ್ನು ಜೀವಂತವಾಗಿರಿಸುವ ಅಪರೂಪದ ಕಾರ್ಯಕ್ರಮ ಇದಾಗಿದ್ದು, ಕನ್ನಡ ಸೋದರ ಭಾಷೆಗಳ ಹಬ್ಬವಾಗಿದೆ ಎಂದು ಅವರು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಸಮಾರಂಭದ ಆರಂಭವು ಸಾಂಕೇತಿಕವಾಗಿ ಸದಾಶಿವನಗರದಲ್ಲಿ ನಡೆಯಲಿದೆ. ಸುಮಾರು 150ರಿಂದ 200 ಜನಪದ ಕಲಾವಿದರನ್ನೊಳಗೊಂಡ ಶೋಭಾಯಾತ್ರೆಯಲ್ಲಿ ರಾಜ್ಯಮಟ್ಟದ ಏಳು ಕಲಾತಂಡಗಳೂ ಭಾಗವಹಿಸುತ್ತಿವೆ. ಹಾಲಕ್ಕಿಗಳ ಸುಗ್ಗಿ ಕುಣಿತ, ತಾರ್‍ಲೆ ಕುಣಿತ, ಸಿದ್ದಿಗಳ ಪುಗಡಿ, ಆಗೇರರ ಶಹನಾಯಿ, ಹಳ್ಳೇರ ಸುಗ್ಗಿ, ಕುಮಾರ ಪಂತರ ಸುಗ್ಗಿ ಕೋಲಾಟ, ಕುಣಬಿಗಳ ಕೋಲಾಟ, ಸಿರ್ಸಿ ಭಾಗದ ಬೇಡರ ವೇಷಗಳ ಹೊರತಾಗಿ ಕೊಂಕಣಿ ಮತ್ತು ಮರಾಠಿ ಭಾಷೆಗೆ ಸೇರಿದ ಏಳು ತಂಡಗಳು ಭಾಗವಹಿಸುತ್ತವೆ. ದಕ್ಷಿಣೋತ್ತರ ಕನ್ನಡ ಜಿಲ್ಲೆಯ ಕಲಾವಿದರಿಂದ ಯಕ್ಞಗಾನ ಪ್ರದರ್ಶನ ಏರ್ಪಡಿಸಲಾಗಿದೆ.
ಉದ್ಘಾಟನೆ : ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷರಾದ ಡಾ. ಜಯಮಾಲ ಇವರು ಸಮಾವೇಶದ ಉದ್ಫಾಟನೆಯನ್ನು ನೆರವೇರಿಸಲಿದ್ದಾರೆ. ಮೀನುಗಾರಿಕಾ ಸಚಿವರಾದ ಆನಂದ ವಸಂತ ಅಸ್ನೋಟಿಕರ್ ಅವರು ಅಧ್ಯಕ್ಷತೆಯನ್ನು ವಹಿಸಲಿದ್ದಾರೆ.
ಸಮಾವೇಶದಲ್ಲಿ ಭಾಷಾ ಭಾವೈಕ್ಯ ಚಿಂತನಾಗೋಷ್ಠಿಯು ಡಾ. ನಾ. ಡಿಸೋಜ ಇವರ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಈ ಗೋಷ್ಠಿಯಲ್ಲಿ ಡಾ. ಸಯ್ಯದ್ ಜಮೀರುಲ್ಲಾ ಷರೀಫ್, ವೆಂಕಟೇಶ ಮೇಸ್ತಾ, ಪ್ರೊ. ರಾಮಕೃಷ್ಣ ಮರಾಠೆ ಇವರು ಭಾಗವಹಿಸಲಿದ್ದಾರೆ. ಏಳು ಭಾಷೆಗಳನ್ನು ಪ್ರತಿನಿಧಿಸುವ ಸುಮಾರು 10 ಜನ ಕವಿಗಳೂ ಬಹುಭಾಷಾ ಕವಿಗೋಷ್ಠಿಯಲ್ಲಿ ಭಾಗವಹಿಸಲಿದ್ದು ಇದರ ಅಧ್ಯಕ್ಷತೆಯನ್ನು ಡಾ. ಬಿ.ಎ. ಸನದಿ ಅವರು ವಹಿಸಲಿದ್ದಾರೆ.
ಏಪ್ರಿಲ್ 11ರಂದು ಸಾಯಂಕಾಲ ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ಗೃಹ ಸಚಿವರಾದ ಡಾ. ವಿ.ಎಸ್. ಆಚಾರ್ಯ, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಸಮಾರೋಪ ಸಮಾರಂಭದಲ್ಲಿ ಭಾಷಾ ಭಾವೈಕ್ಯ ಮಾತಿನ ಮಂಟಪ ಕಾರ್ಯಕ್ರಮವನ್ನು ನಡೆಸಲಾಗುವುದು. ಈ ಕಾರ್ಯಕ್ರಮವನ್ನು ಪ್ರೊ. ಎಂ. ಕೃಷ್ಣೇಗೌಡ, ರಿಚರ್ಡ್ ಲೂಯಿಸ್ ಹಾಗೂ ಡಾ. ಮುಖ್ಯಮಂತ್ರಿ ಚಂದ್ರು ನಡೆಸಿಕೊಡಲಿದ್ದಾರೆ.












Click it and Unblock the Notifications