ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಿಲ್ಲಾ ಉಸ್ತುವಾರಿ: ಪಕ್ಷೇತರರಿಗೆ ಸಿಎಂ ಟಾಂಗ್

By Mahesh
|
Google Oneindia Kannada News

Yeddyurappa
ಬೆಂಗಳೂರು, ಏ.8: ಅಭಿವೃದ್ಧಿ ಕಾರ್ಯಗಳಿಗೆ ವೇಗದ ಚಾಲನೆ ನೀಡಲು ಜಿಲ್ಲಾ ಉಸ್ತುವಾರಿ ಸಚಿವರನ್ನು, ಕಾರ್ಯದರ್ಶಿಗಳನ್ನು ಮರುನೇಮಿಸಿದ್ದಾರೆ. ಭಿನ್ನರಿಗೆ ಮಣೆ ಹಾಕಿರುವ ಯಡಿಯೂರಪ್ಪ, ಪಕ್ಷೇತರರನ್ನು ಅತಂತ್ರರಾಗಿಸಿದ್ದಾರೆ. ಆರ್ ಅಶೋಕ್, ಸುರೇಶ್ ಕುಮಾರ್ ಸೇರಿದಂತೆ ಕೆಲವು ಸಚಿವರಿಗೆ ಹೆಚ್ಚಿನ ಜವಾಬ್ದಾರಿಯನ್ನು ವಹಿಸಿಕೊಡಲಾಗಿದೆ. ಆದರೆ, ಸಚಿವ ಸಂಪುಟ ವಿಸ್ತರಣೆ ಸುದ್ದಿಯನ್ನು ಸಿಎಂ ತಳ್ಳಿಹಾಕಿದ್ದಾರೆ.

ಬಿಬಿಎಂಪಿ ಚುನಾವಣೆಯಲ್ಲಿ ಕಂಡ ಗೆಲುವಿನ ನಾಗಾಲೋಟವನ್ನು ಗ್ರಾಮ ಪಂಚಾಯಿತಿ ಚುನಾವಣೆಯಲ್ಲೂ ಮುಂದುವರೆಸಿಕೊಂಡು ಹೋಗಲುಬೇಕಾದ ಎಲ್ಲ ಬದಲಾವಣೆಗಳನ್ನು ಒಂದೊಂದಾಗಿ ಕಾರ್ಯರೂಪಕ್ಕೆ ಬಿಜೆಪಿ ತರುತ್ತಿದೆ. ಸಾರಿಗೆ ಸಚಿವ ಆರ್ ಅಶೋಕ್ ಅವರನ್ನು ಮಂಡ್ಯ ಜಿಲ್ಲೆಗೆ ಹಾಗೂ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವ ಸುರೇಶ್ ಕುಮಾರ್ ಗೆ ಮೈಸೂರು ಜಿಲ್ಲಾ ಉಸ್ತುವಾರಿ ವಹಿಸಿರುವುದು ಪ್ರಮುಖ ಬದಲಾವಣೆ ಎನ್ನಬಹುದು.

ಜಿಲ್ಲಾವಾರು ಉಸ್ತುವಾರಿ ಸಚಿವರ ವಿವರ ಇಂತಿದೆ:

*ಶಿವಮೊಗ್ಗ: ಬಿ ಎಸ್ ಯಡಿಯೂರಪ್ಪ
*ಮೈಸೂರು-ತುಮಕೂರು: ಎಸ್ ಸುರೇಶ್ ಕುಮಾರ್
*ಮಂಡ್ಯ-ಬೆಂಗಳೂರು ದಕ್ಷಿಣ : ಆರ್ ಅಶೋಕ್
*ಕೋಲಾರ: ಎಂಪಿ ರೇಣುಕಾಚಾರ್ಯ
*ಚಿಕ್ಕಬಳ್ಳಾಪುರ: ಮುಮ್ತಾಜ್ ಅಲಿ ಖಾನ್
*ಧಾರವಾಡ: ಜಗದೀಶ್ ಶೆಟ್ಟರ್
*ಬೆಳಗಾವಿ: ಲಕ್ಷ್ಮಣ ಸವದಿ
*ಚಿಕ್ಕಮಗಳೂರು : ಎಚ್ ಹಾಲಪ್ಪ
*ಮಂಗಳೂರು : ಕೃಷ್ಣಪಾಲೇಮಾರ್
*ಉಡುಪಿ: ವಿಎಸ್ ಆಚಾರ್ಯ
*ಕಾರವಾರ: ವಿಶ್ವೇಶ್ವರ ಹೆಗಡೆ ಕಾಗೇರಿ
*ರಾಮನಗರ: ರಾಮಚಂದ್ರೇಗೌಡ
*ಚಿತ್ರದುರ್ಗ : ಕರುಣಾಕರ ರೆಡ್ಡಿ
*ಗದಗ: ಶ್ರೀರಾಮುಲು
*ಬಳ್ಳಾರಿ: ಜನಾರ್ದನ ರೆಡ್ಡಿ
*ಬಾಗಲಕೋಟೆ: ಮುರುಗೇಶ್ ನಿರಾಣಿ
*ಬೀದರ: ಗೋವಿಂದ ಎಂ ಕಾರಜೋಳ
*ದಾವಣಗೆರೆ: ಎಸ್ ಎ ರವೀಂದ್ರನಾಥ್

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X