ಕನ್ನಡ ಅಭ್ಯರ್ಥಿಗಳಿಗೆ ನೊ ಎಂದ ಬ್ಯಾಂಗಲೋರ್
ಬೆಂಗಳೂರು,
ಏ. 6 :'ಕನ್ನಡವೇ ಉಸಿರು' ಎಂದು ಹೋರಾಟ ನಡೆಸಿಕೊಂಡು ಬಂದಿದ್ದ ಕನ್ನಡಪರ ಸಂಘಟನೆಯ ಅಭ್ಯರ್ಥಿಗಳಿಗೆ ಬೆಂಗಳೂರು ಮತದಾರ ಬೆಲೆ ಕೊಡಲಿಲ್ಲ. ಬಿಬಿಎಂಪಿ ಚುನಾವಣೆಯಲ್ಲಿ ಆಖಾಡಕ್ಕಿಳಿದಿದ್ದ ಕರವೇ ಮತ್ತು ವಾಟಾಳ್ ಪಕ್ಷದ ಅಭ್ಯರ್ಥಿಗಳನ್ನು ಕ್ಯಾರೇ ಎನ್ನದ 'ಮತದಾರಪ್ರಭು' ಭಾಷೆಯ ಹೆಸರಿನಲ್ಲಿ ಮತ ಕೇಳಲು ಬಂದವರನ್ನು ತಿರಸ್ಕರಿಸಿದ್ದಾನೆ. id="toptextpromo"> ನಗರದ ಯಾವುದೇ ಒಂದು ವಾರ್ಡಿನಲ್ಲಿಯೂ ಕನ್ನಡಪರ ಸಂಘಟನೆಯ ಅಭ್ಯರ್ಥಿಗಳು ಗೆಲುವು ಸಾಧಿಸಲಿಲ್ಲ. ಕರ್ನಾಟಕ ರಕ್ಷಣಾ ವೇದಿಕೆ ಬೆಂಬಲಿತ ಒಟ್ಟು 15 ಅಭ್ಯರ್ಥಿಗಳು ಕನ್ನಡ ಚಳುವಳಿ ವಾಟಾಳ್ ಪಕ್ಷದಿಂದ 3 ಅಭ್ಯರ್ಥಿಗಳು ಕಣಕ್ಕೆ ಇಳಿದಿದ್ದರು. ಆದರೆ ವಿಜಯಲಕ್ಷ್ಮಿ ಯಾರಿಗೂ ಒಲಿದಿಲ್ಲ. id='are-slot-1' class='oiad oi-axt oiadv'> id='top-searched-articles'> ಪರಭಾಷಿಕರೆ ಹೆಚ್ಚಿನ ಸಂಖ್ಯೆಯಲ್ಲಿ ಸ್ಪರ್ಧಿಸಿರುವ ಹಿನ್ನಲೆಯಲ್ಲಿ ಕನ್ನಡಿಗರು ತಮ್ಮನ್ನು ಕೈ ಬಿಡುವುದಿಲ್ಲ, ಕನ್ನಡಿಗರು ಕನ್ನಡಪರ ಸಂಘಟನೆಯ ಅಭ್ಯರ್ಥಿಗಳನ್ನು ಗೆಲ್ಲಿಸುತ್ತಾರೆಂದು ಸಂಘಟನೆಯ ಮುಖಂಡರುಗಳು ಚುನಾವಣ ಪ್ರಚಾರದವೇಳೆ ಭರವಸೆ ವ್ಯಕ್ತಪಡಿಸಿದ್ದರು.











Click it and Unblock the Notifications