ಸೋತು ಗೆದ್ದ ಸೋಮಣ್ಣ
ಬೆಂಗಳೂರು,
ಏ. 6 : ಕಳೆದ ವಿಧಾನಸಭೆ ಚುನಾವಣೆ ಕಾಂಗ್ರೆಸ್ ನ ಪ್ರಿಯಕೃಷ್ಣ ವಿರುದ್ಧ ಸೋಲನುಭವಿಸಿದ್ದ ವಿ ಸೋಮಣ್ಣ ಬಿಬಿಎಂಪಿ ಚುನಾವಣೆಯಲ್ಲಿ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ. ಬಿಬಿಎಂಪಿ ಚುನಾವಣೆಯ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿರುವ ಸೋಮಣ್ಣ ಅವರಿಗೆ ಮತ್ತೆ ಮಂತ್ರಿಗಿರಿ ಲಭಿಸಲಿದೆ ಎನ್ನುವ ಮಾತುಗಳು ಕೇಳಿಬರತೊಡಗಿವೆ. id="toptextpromo"> ಗೋವಿಂದರಾಜನಗರ ಮತ್ತು ವಿಜಯನಗರ ವಿಧಾನಸಭೆ ವ್ಯಾಪ್ತಿಯಲ್ಲಿನ 17 ವಾರ್ಡ್ ಗಳಲ್ಲಿ ಬಿಜೆಪಿ 14 ವಾರ್ಡ್ ಗಳಲ್ಲಿ ಜಯಸಾಧಿಸಿರುವುದು ಇದಕ್ಕೆ ಸಾಕ್ಷಿಯಾಗಿದೆ. ಆಪರೇಷನ್ ಕಮಲದ ಮೂಲಕ ಕಾಂಗ್ರೆಸ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರ್ಪಡೆಗೊಂಡಿದ್ದ ಸೋಮಣ್ಣ, ಉಪಚುನಾವಣೆಯಲ್ಲಿ ಕಾಂಗ್ರೆಸ್ ಶಾಸಕ ಕೃಷ್ಣಪ್ಪ ಅವರ ಮಗ ಪ್ರಿಯಕೃಷ್ಣ ವಿರುದ್ದ ಸೋಲನುಭವಿಸಿದ್ದರು. id='are-slot-1' class='oiad oi-axt oiadv'> id='top-searched-articles'> ಸೋಲಿಲ್ಲದ ಸರದಾರ ಎಂಬ ಖ್ಯಾತಿಯಾಗಿದ್ದ ಅವರು ಕೈಯಲ್ಲಿ ಮಂತ್ರಿಗಿರಿ ಇಟ್ಟುಕೊಂಡು ಪರಾಭವ ಹೊಂದಿದ್ದು, ಅವರ ರಾಜಕೀಯ ಹಿನ್ನೆಡೆ ಎಂದೇ ವಿಶ್ಲೇಷಿಸಲಾಗಿತ್ತು. ಆದರೆ, ಬಿಬಿಎಂಪಿ ಚುನಾವಣೆಯಲ್ಲಿ ಸೋಮಣ್ಣ ಮತ್ತೆ ತಮ್ಮ ಸಾಮರ್ಥ್ಯವನ್ನು ತೋರಿದ್ದಾರೆ. ಎರಡೂ ವಿಧಾನಸಭೆ ಕ್ಷೇತ್ರಗಳ 17 ವಾರ್ಡ್ ಗಳಲ್ಲಿ 14 ಮಂದಿ ಬಿಜೆಪಿ ಕಾರ್ಪೋರೇಟರ್ ಗಳನ್ನು ಗೆಲ್ಲಿಸುವಲ್ಲಿ ಅವರು ಯಶಸ್ವಿಯಾಗಿದ್ದಾರೆ. 17 ವಾರ್ಡ್ ಗಳಲ್ಲಿ 14 ಬಿಜೆಪಿ, ಎರಡು ಕಾಂಗ್ರೆಸ್, 1 ಜೆಡಿಎಸ್ ಪಕ್ಷಗಳು ಗೆದ್ದುಕೊಂಡಿವೆ.











Click it and Unblock the Notifications