ಸಾಮಾನ್ಯ ವರ್ಗಕ್ಕೆ ಮೇಯರ್ ಪಟ್ಟ
ಬೆಂಗಳೂರು,
ಏ. 5 : ಬಿಬಿಎಂಪಿಯ 198 ವಾರ್ಡ್ ಗಳಲ್ಲಿ 191 ವಾರ್ಡ್ ಗಳ ಫಲಿತಾಂಶ ಹೊರಬಿದ್ದಿದ್ದು, 110 ರಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ಕಾಂಗ್ರೆಸ್ 60 ಸ್ಥಾನ ಮತ್ತು ಜೆಡಿಎಸ್ 14 ಸ್ಥಾನಗಳಲ್ಲಿ ಜಯಭೇರಿ ಬಾರಿಸಿದೆ. id="toptextpromo"> ಮಾಜಿ ಮೇಯರ್ ಪಿ ಆರ್ ರಮೇಶ್ ವಿಶ್ವೇಶ್ವರಪುರಂ ವಾರ್ಡ್ ನಲ್ಲಿ ಸೋಲನುಭವಿಸಿದ್ದು, ಮಾಜಿ ಮೇಯರ್ ಗಳಾದ ನಾರಾಯಣಸ್ವಾಮಿ ಮತ್ತು ಚಂದ್ರಶೇಖರ್ ಗೆಲುವು ಸಾಧಿಸಿದ್ದಾರೆ. ಕಟ್ಟಾ ಸುಬ್ರಮಣ್ಯ ನಾಯ್ಡು ಅವರ ಮಗ ಕಟ್ಟಾ ಜಗದೀಶ ನಾಯ್ಡು ವಿಜಯದ ನಗೆಬೀರಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಬಿಜೆಪಿ
ಪಾಳೆಯದಲ್ಲಿ ಗೆಲುವಿನ ನಾಗಾಲೋಟ ಮುಂದುವರೆದಿದ್ದು, ಅಧಿಕಾರ ಹಿಡಿಯುವುದು ಖಚಿತವಾಗಿದೆ. ಈ ಮಧ್ಯೆ ಪ್ರತಿಕ್ರಿಯೆ ನೀಡಿರುವ ಕಾನೂನು ಸಚಿವ ಸುರೇಶ್ ಕುಮಾರ್, ಸಾಮಾನ್ಯ ವರ್ಗಕ್ಕೆ ಮೇಯರ್ ಹಾಗೂ ಪರಿಶಿಷ್ಟ ಜಾತಿಗೆ ಉಪಮೇಯರ್ ಹುದ್ದೆ ನೀಡಲಾಗುವುದು ಎಂದು ಘೋಷಿಸಿದ್ದಾರೆ.











Click it and Unblock the Notifications