ಕೊಳ್ಳೆಗಾಲ: 20 ಅಕ್ರಮ ಸ್ಯಾಟಲೈಟ್ ಫೋನ್ ವಶ

ದೆಹಲಿಯ ಗೂಢಾಚಾರ ಇಲಾಖೆಯ ಮಾಹಿತಿ ಮೇರೆಗೆ ಪೊಲೀಸರು ಕೊಳ್ಳೆಗಾಲದ ಅರಣ್ಯದ ಒಳ ಪ್ರದೇಶ ದಲ್ಲಿ ಸ್ಯಾಟಲೈಟ್ ಫೋನ್ ಗಳನ್ನು ಉಪಯೋಗಿಸುತ್ತಿರುವವರ ಜಾಡು ಪತ್ತೆ ಹಚ್ಚಲು ಕಾರ್ಯಾಚರಣೆ ಆರಂಭಿಸಿದರು. ಈ ಹಂತದಲ್ಲಿ ಅರಣ್ಯ ಪ್ರದೇಶದ ಒಳಭಾಗದಲ್ಲಿ ಸಾಹಸ
ಕಾರ್ಯಗಳನ್ನು ನಡೆಸುತ್ತಿದ್ದ ಬ್ರಿಟನ್‌ನ 20 ಪ್ರಜೆಗಳಿಂದ 20 ಸ್ಯಾಟಲೈಟ್ ಫೋನ್ ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಅವುಗಳನ್ನು ಕೋರಿಯಾ ದೇಶದ ತುರಾಯಾ ಬ್ರಾಂಡ್‌ನ ಸೆಟೆಲೈಟ್ ಫೋನ್‌ಗಳೆಂದು ಗುರುತಿಸಲಾಗಿದೆ.
ಈ ಶಿಬಿರವನ್ನು ಬ್ರಿಟನ್‌ನ ಸಂಸ್ಥೆಯೊಂದು ನಡೆಸುತ್ತಿದ್ದು, ಈಗಾಗಲೇ ಇದು ಏಷ್ಯಾದ ಹಲವು ದೇಶಗಳಲ್ಲಿ ತನ್ನ ಶಿಬಿರಗಳನ್ನು ನಡೆಸುತ್ತಿದೆ ಎಂದು ತಿಳಿದು ಬಂದಿದೆ. ರಾಲೈ ಇಂಡಿಯಾ ಎಂಬ ಸಂಸ್ಥೆಯು ಈ ಶಿಬಿರವನ್ನು ಕೊಳ್ಳೆಗಾಲದ ಅರಣ್ಯದ ಒಳಭಾಗದಲ್ಲಿ ಆಯೋಜಿಸಿತ್ತು . ಬ್ರಿಟನ್ನಿನ ಅಂಗ ಸಂಸ್ಥೆಯಾದ ಇದು ಭಾರತದಲ್ಲಿ ಅಧಿಕೃತ ದಾಖಲಾತಿ ಪಡೆದಿಲ್ಲ ಎನ್ನಲಾಗಿದೆ.
ರಾಮಾಪುರದಲ್ಲಿ ಬ್ರಿಟನ್ ಸಂಸ್ಥೆಯ ಸದಸ್ಯರುಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿದೆ. 1885ರ ಭಾರತೀಯ ಟೆಲಿಗ್ರಾಫ್ ಕಾಯಿದೆ ಹಾಗೂ 1933 ರ ಭಾರತೀಯ ವಯರ್‌ಲೆಸ್ ಟೆಲಿಗ್ರಾಫ್ ಕಾಯಿದೆಯಡಿಯಲ್ಲಿ ಕೇಂದ್ರ ಸರ್ಕಾರ ಸ್ಯಾಟಲೈಟ್ ಫೋನ್ ಗಳ ಬಳಕೆಯನ್ನು ದೇಶದಲ್ಲಿ ನಿಷೇಧಿಸಲಾಗಿದೆ.












Click it and Unblock the Notifications