ಗೋಹತ್ಯೆ ನಿಷೇಧಿಸಲು ವರುಣ್ ಗಾಂಧಿ ಆಗ್ರಹ
ಲಖನೌ,
ಮಾ. 30 : ಗೋಹತ್ಯೆಯನ್ನು ಸಾಮಾಜಿಕ ಅಪರಾಧಿ ಕೃತ್ಯ ಇದನ್ನು ಕೂಡಲೇ ಸಂಪೂರ್ಣವಾಗಿ ನಿಷೇಧಿಸಬೇಕು ಎಂದು ಬಿಜೆಪಿ ನೂತನ ರಾಷ್ಟ್ರೀಯ ಕಾರ್ಯದರ್ಶಿ ವರುಣ್ ಗಾಂಧಿ ಉತ್ತರ ಪ್ರದೇಶ ಸರಕಾರವನ್ನು ಆಗ್ರಹಿಸಿದ್ದಾರೆ. id="toptextpromo">ಉತ್ತರ
ಪ್ರದೇಶದ ಸಹರಾಂಪುರ ಜಿಲ್ಲೆಯಲ್ಲಿ ಸಮಾವೇಶವೊಂದರಲ್ಲಿ ಮಾತನಾಡುತ್ತಿದ್ದ ಫಿಲಿಬಿತ್ ಸಂಸದ ಗಾಂಧಿ, 'ಗೋವಧೆ ಕಾನೂನುಬದ್ಧ ಮತ್ತು ಸಾಮಾಜಿಕ ಅಪರಾಧಿ ಕೃತ್ಯವಾಗಿದೆ. ಇದು ಕೇವಲ ಹಿಂದೂಗಳಿಗೆ ಮಾತ್ರವಲ್ಲ. ರಾಷ್ಟ್ರದ ಸ್ವಾಭಿಮಾನದ ಪ್ರಶ್ನೆಯಾಗಿರುವುದರಿಂದ ಗೋಹತ್ಯೆಯನ್ನು ನಿಷೇಧಿಸುವ ಅಗತ್ಯವಿದೆ' ಎಂದು ಹೇಳಿದರು. id='are-slot-1' class='oiad oi-axt oiadv'> id='top-searched-articles'>ಹಿಂದೂಗಳು
ಆತ್ಮಗೌರವ ಮತ್ತು ಸ್ವಾಭಿಮಾನಕ್ಕಾಗಿ ಎದ್ದೇಳಬೇಕು ಎಂದು ಕರೆ ನೀಡಿದ ವರುಣ್ ಗಾಂಧಿ, ಗೋಹತ್ಯೆಯ ವಿರುದ್ಧದ ಹೋರಾಟಕ್ಕಾಗಿ ತನ್ನ ಆಸೆಯಂತೆ ಕನಿಷ್ಠ ಒಂದು ಲಕ್ಷ ಮಂದಿಯ ತಂಡವೊಂದನ್ನು ರಚಿಸುವ ಕಾರ್ಯ ಯಶಸ್ವಿಯಾಗಲಿದೆ ಎಂದೂ ಭರವಸೆ ವ್ಯಕ್ತಪಡಿಸಿದರು.











Click it and Unblock the Notifications