ಬೈಕ್ ಸ್ಟಂಟ್ ಮಾಡಿ ಪ್ರಾಣತೆತ್ತ ಯುವಕರು
ಬೆಂಗಳೂರು,
ಮಾ.29: ಬೈಕ್ ಸ್ಟಂಟ್, ಡ್ರಾಗ್ ರೇಸ್, ವ್ಹೀಲಿಂಗ್ ಮಾಡುವುದನ್ನು ನಿಷೇಧಿಸಿ, ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸಿದರೂ ನಗರದ ಪ್ರಮುಖ ರಸ್ತೆಗಳಲ್ಲಿ ಬೈಕ್ ಸಾಹಸಗಳು ನಡೆಯುತ್ತಲೇಇವೆ. ಹಾಗೆ , ಯುವಕರು ಸ್ಟಂಟ್ ಮಾಡಲು ಹೋಗಿ ಸಾವಿನ ಮನೆಯ ಕದ ತಟ್ಟುತ್ತಲೇ ಇದ್ದಾರೆ. ಭಾನುವಾರ ಸಂಜೆ ಕೂಡ ಇಂಥಾ ದುರ್ಘಟನೆ ನಡೆಯಿತು. id="toptextpromo">ವ್ಹೀಲಿಂಗ್
ಮಾಡುತ್ತಾ ಜಾಲಿ ರೈಡ್ ನಲ್ಲಿದ್ದ ಬೈಕ್ ನಿಯಂತ್ರಣ ಕಳೆದುಕೊಂಡ ದ್ವಿಚಕ್ರ ವಾಹನ ರಸ್ತೆ ವಿಭಜಕಕ್ಕೆ ಬಡಿದು , ಅಪಘಾತದಲ್ಲಿ ಇಬ್ಬರು ಯುವಕರು ಮೃತಪಟ್ಟಿದ್ದಾರೆ. ದಿನೇಶ್ ಅಲಿಯಾಸ್ ಕೃಷ್ಣೇಗೌಡ (24) ಹಾಗೂ ಸಾಗರ್ (23) ಮೃತರು. ಇಬ್ಬರೂ ಬಿಹಾರ ಮೂಲದವರು ಎನ್ನಲಾಗಿದೆ. ಕಂಠೀರವ ಸ್ಟುಡಿಯೋ ಎದುರು ಈ ಅಪಘಾತ ಸಂಭವಿಸಿದ್ದು, ರಾಜಾಜಿನಗರ ಸಂಚಾರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. id='are-slot-1' class='oiad oi-axt oiadv'> id='top-searched-articles'>ನಂದಿನಿ
ಲೇಔಟ್ ನ ಖಾಸಗಿ ಕಂಪೆನಿಯಲಿ ಕೆಲಸ ನಿರ್ವಹಿಸುತ್ತಿದ್ದ ಸಾಗರ್, ರಾಜಾಜಿನಗರದ ನಿವಾಸಿಯಾಗಿದ್ದರು. ದಿನೇಶ್ ಡೈವರ್ ಆಗಿ ಕೆಲಸ ಮಾಡುತ್ತಿದ್ದರು. ಬಿಬಿಎಂಪಿ ಚುನಾವಣೆಯಂದು ಮತದಾನ ಮಾಡಿ ಹಿಂದುರುಗುವಾಗ ಈ ಘಟನೆ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದರು.











Click it and Unblock the Notifications