ಬಳ್ಳಾರಿಯಲ್ಲಿ ಗಣೇಶ್ ಮೇಲೆ ಗೂಂಡಾಗಿರಿ

ಗಡಿ ಸಮೀಕ್ಷೆಗೆ ಸಂಬಂಧಿಸಿದಂತೆ ಇಂದು ನಗರದ ಬಾಲಾ ಹೋಟೆಲ್ ನಲ್ಲಿ ಸಭೆ ನಡೆಯಬೇಕಿತ್ತು. ಇನ್ನೋವಾ ಕಾರಿನಲ್ಲಿ ಬಂದ 8 ಮಂದಿ ದುಷ್ಕರ್ಮಿಗಳು ಏಕಾಏಕಿ ಟಪಾಲು ಗಣೇಶ್ ಮತ್ತು ಅವರ ಸಹೋದರರು ಹಾಗೂ ಸುವರ್ಣ ನ್ಯೂಸ್ ಪ್ರತಿನಿಧಿ ಕುಮಾರ ರೈತ ಅವರ ಮೇಲೆ ದಾಳಿ ನಡೆದಿದೆ. ಗಣಿ ವಿಷಯಕ್ಕೆ ಸಂಬಂಧಿಸಿದಂತೆ ಟಪಾಲು ಗಣೇಶ್ ಅವರು ರೆಡ್ಡಿ ಸಚಿವರ ವಿರುದ್ಧ ಕಳೆದ ದಶಕಗಳಿಂದಲೂ ಹೋರಾಟ ಮಾಡಿಕೊಂಡು ಬಂದಿದ್ದಾರೆ.
ಇದು ಕಾಂಗ್ರೆಸ್ ನ ಷಡ್ಯಂತ್ರ. ನಮ್ಮ ಹೆಸರು ಕೆಡಿಸಲು ದಿವಾಕರ್ ಬಾಬು ನಡೆಸಿದ ತಂತ್ರ. ಕ್ರಿಮಿನಲ್ ಹಿನ್ನೆಲೆ ಹೊಂದಿರುವ ದಿವಾಕರ್ ಬಾಬು ಕುಟುಂಬ ಈಗಾಗಲೇ ಅನೇಕ ಕೊಲೆಗಳನ್ನು ಮಾಡಿದ್ದಾರೆ. ಈ ಕೃತ್ಯವೂ ಅವರಿಂದ ನಡೆದಿದೆ. ತನಿಖೆಯಿಂದ ಎಲ್ಲವೂ ಹೊರಬರಲಿದೆ ಎಂದು ಪ್ರವಾಸೋಧ್ಯಮ ಸಚಿವ ಜನಾರ್ದನ ರೆಡ್ಡಿ ಹೇಳಿದ್ದಾರೆ.
ಹುಚ್ಚು ನಾಯಿ ಬೊಗಳುತ್ತೆ ಅಂದ್ರೆ ಕೇಳುವವರಾರು. ಹಲ್ಲೆ ನಡೆಸಿದವರು ಯಾರು ಎಂದು ಟಪಾಲು ಗಣೇಶ್ ಅವರನ್ನು ಕೇಳಿ. ಬಳ್ಳಾರಿಯಲ್ಲಿ ಗೊಂಡಾಗಿರಿ ಮೀತಿಮೀರಿದೆ. ಜನಾರ್ದನರೆಡ್ಡಿ ಈ ಕೆಲಸ ಮಾಡಿಸಿದ್ದಾನೆ ಎಂದು ಕಾಂಗ್ರೆಸ್ ನಾಯಕ ದಿವಾಕರ್ ಬಾಬು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.












Click it and Unblock the Notifications