ಬಿಜೆಪಿಗೆ 120 ಸ್ಥಾನ ಗ್ಯಾರಂಟಿ, ಈಶ್ವರಪ್ಪ
ಬೆಂಗಳೂರು,
ಮಾ. 27 : ಬೆಂಗಳೂರು, ಸುತ್ತಮುತಲ ನಗರ, ಪಟ್ಟಣಗಳಿಗೆ ಸಂಪರ್ಕ ಕಲ್ಪಿಸುವ ಲೋಕಲ್ ಟ್ರೈನ್ ಸೌಲಭ್ಯವನ್ನು ಸರಕಾರ ಶೀಘ್ರವೇ ಜನರಿಗೆ ಒದಗಿಸಲಿದೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ. id="toptextpromo">ಬೆಂಗಳೂರು-ತುಮಕೂರು,
ಬೆಂಗಳೂರು-ದೊಡ್ಡಬಳ್ಳಾಪುರ, ಕೃಷ್ಣರಾಜಪುರ-ವೈಟ್ ಫೀಲ್ಡ್ ನಡುವೆ ಈ ರೈಲು ಸಂಚರಿಸಲಿದೆ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ಶುಕ್ರವಾರ ತಿಳಿಸಿದರು. ಮೆಟ್ರೊ ರೈಲು ಯೋಜನೆ ಕಾಮಗಾರಿಯೂ ಸಮರೋಪಾದಿಯಲ್ಲಿ ನಡೆಯುತ್ತಿದ್ದು, ಸರಕಾರ 1,700 ಕೋಟಿ ರೂ. ಒದಗಿಸಿದೆ. ಯೋಜನೆ ಮೊದಲ ಹಂತದ ಕಾಮಗಾರಿ ಡಿಸೆಂಬರ್ ವೇಳೆಗೆ ಪೂರ್ಣಗೊಳ್ಳಲಿದೆ ಎಂದರು. id='are-slot-1' class='oiad oi-axt oiadv'> id='top-searched-articles'>ವಿದ್ಯುತ್
ಸಮಸ್ಯೆ ನಿವಾರಿಸಲು ಬಿಡದಿ ಬಳಿ ಅನಿಲ ಆಧಾರಿತ ವಿದ್ಯುತ್ ಉತ್ಪಾದನೆ ಘಟಕ ಸ್ಥಾಪಿಸಲಿದೆ. ಇದಕ್ಕಾಗಿ ವಿದ್ಯುತ್ ಪ್ರಸರಣ ನಿಗಮಕ್ಕೆ 15 ಎಕರೆ ಜಾಗಕೊಟ್ಟಿದೆ. 2012ರ ವೇಳೆಗೆ ಈ ಘಟಕ ಕಾರ್ಯಾರಂಭ ಮಾಡುವ ನಿರೀಕ್ಷೆಯಿದೆ ಎಂದು ತಿಳಿಸಿದರು. ಪಾಲಿಕೆಯ 198 ವಾರ್ಡ್‌ಗಳಲ್ಲಿ ಬಿಜೆಪಿ ಗೆಲುವಿಗೆ ಕಾರ್ಯಕರ್ತರು ಉತ್ಸಾಹದಿಂದ ಕೆಲಸ ಮಾಡುತ್ತಿದ್ದಾರೆ. 120 ಸ್ಥಾನಗಳೊಂದಿಗೆ ಪಕ್ಷ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸಲಿದೆ ಎಂದು ಈಶ್ವರಪ್ಪ ತಿಳಿಸಿದರು.












Click it and Unblock the Notifications