ವಿಧಾನಸೌಧ ಈಗ ಆರ್ಎಸ್ಎಸ್ ಕೇಂದ್ರ
ಬೆಂಗಳೂರು,
ಮಾ. 26 : ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೆ ಸಂಬಂಧಿಸಿದಂತೆ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಮಾಜಿ ಮುಖ್ಯಮಂತ್ರಿ ಎನ್ ಧರಂಸಿಂಗ್, ಮುಖ್ಯಮಂತ್ರಿ ಯಡಿಯೂರಪ್ಪ ಅವರು ವಿಧಾನಸೌಧವನ್ನು ಕೇಶವಕೃಪಾ ಮಾಡಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ. id="toptextpromo">ಮಾಧ್ಯಮ
ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕೆಂಗಲ್ ಹನುಮಂತಯ್ಯ ಅವರು ಕಟ್ಟಿಸಿದ ವಿಧಾನಸೌಧ ಈಗ ಆರ್‌ಎಸ್‌ಎಸ್ ಹೆಡ್ ಕ್ವಾರ್ಟರ್ಸ್ ಆಗಿದೆ ಎಂದರು. ಆರ್ಎಸ್‌ಎಸ್ ಮುಖಂಡರ ಸೂಚನೆಯಂತೆ ಆಡಳಿತ ನಡೆಯುತ್ತಿದೆ. ಯಡಿಯೂರಪ್ಪ ಅವರ ಸರ್ಕಾರ ಅತ್ಯಂತ ಕೋಮುವಾದಿ ಸರ್ಕಾರವಾಗಿದ್ದು, ಇಂತಹ ಸರ್ಕಾರವನ್ನು ನಾನೆಂದೂ ನೋಡಿಲ್ಲ. ಅಲ್ಪಸಂಖ್ಯಾತರನ್ನು ಮಟ್ಟಹಾಕಲು ಗೋ ಹತ್ಯೆ ಮಸೂದೆಯನ್ನು ಜಾರಿಗೆ ತರುವ ಹುನ್ನಾರ ನಡೆಸಿದೆ ಎಂದರು. id='are-slot-1' class='oiad oi-axt oiadv'> id='top-searched-articles'>ಬಿಬಿಎಂಪಿ
ಚುನಾವಣೆ ನಂತರ ಯಡಿಯೂರಪ್ಪ ಅವರ ಸರ್ಕಾರ ಪತನವಾಗಲಿದೆ. ನಾವು ಬೀಳಿಸಲಿಕ್ಕೆ ಹೋಗಲ್ಲ. ಅವರ ಪಕ್ಷದವರೇ ಬೀಳಿಸುತ್ತಾರೆ ಎಂದು ಧರಂಸಿಂಗ್ ಹೇಳಿದರು.











Click it and Unblock the Notifications