ತವರಿನತ್ತ ಹೆಜ್ಜೆಯಿರಿಸಿದ ಉಮಾಭಾರತಿ?
ಭೋಪಾಲ್,
ಮಾ. 26 : ಬಿಜೆಪಿಯಲ್ಲಿ ಬಂಡಾಯದ ಕಹಳೆ ಮೊಳಗಿಸಿ ನಾಯಕರ ವಿರುದ್ಧ ಸೆಡ್ಡು ಹೊಡೆದು ಹೊಸ ಪಕ್ಷ ಸ್ಥಾಪಿಸಿದ್ದ ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಉಮಾಭಾರತಿ ತಾವೇ ಸ್ಥಾಪಿಸಿದ್ದ ಪಕ್ಷಕ್ಕೆ ರಾಜೀನಾಮೆ ನೀಡುವ ಅಚ್ಚರಿ ಮೂಡಿಸಿದ್ದಾರೆ. ಅದೀಗ ಮತ್ತೆ ತವರಿನ ಕಡೆಗೆ ಹೆಜ್ಜೆ ಹಾಕುವ ಸಾಧ್ಯತೆಯ ಸುದ್ದಿ ಮಧ್ಯಪ್ರದೇಶದ ತುಂಬೆಲ್ಲಾ ಹರಡಿದೆ. id="toptextpromo">2005ರಲ್ಲಿ
ಬಿಜೆಪಿಯಿಂದ ಉಚ್ಚಾಟನೆಗೊಂಡ ಬಳಿಕ ಉಮಾಭಾರತಿ ತಾವು ಸ್ಥಾಪಿಸಿದ್ದ ಭಾರತೀಯ ಜನಶಕ್ತಿ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಗುರುವಾರ ರಾಜೀನಾಮೆ ನೀಡಿದ್ದಾರೆ. ಆದರೆ ಆಕೆ ಬಿಜೆಪಿ ಹೊಸ ಅಧ್ಯಕ್ಷ ನಿತಿನ್ ಗಡ್ಕರಿ ಅವರೊಂದಿಗೆ ಬಿಜೆಪಿಗೆ ಮರಳುವ ಬಗ್ಗೆ ಯಾವುದೇ ಚರ್ಚೆ ನಡೆಸುವ ಎಲ್ಲ ಸಾಧ್ಯತೆಗಳು ಇವೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ. id='are-slot-1' class='oiad oi-axt oiadv'> id='top-searched-articles'>ಕಳೆದ
ಲೋಕಸಭಾ ಚುನಾವಣೆಗಳಿಗೆ ಮೊದಲು ಉಮಾ, ಬಿಜೆಪಿ ನಾಯಕರನ್ನು ಭೇಟಿಯಾಗಿ ಪಕ್ಷಕ್ಕೆ ಮರಳುವ ಇರಾದೆ ವ್ಯಕ್ತಪಡಿಸಿದ್ದರು. ಫಲಿತಾಂಶದ ತನಕ ಕಾಯಲು ಆವರಿಗೆ ಸೂಚಿಸಲಾಗಿತ್ತು. ಬಿಜೆಪಿ ವೇದಿಕೆಯಲ್ಲಿ ಆಕೆ ಪ್ರಚಾರ ನಡೆಸಿದ್ದರೂ ಕೂಡಾ. ಆದರೆ, ಚುನಾವಣೆಗೆ ಮಾತ್ರ ಸ್ಪರ್ಧಿಸಿರಲಿಲ್ಲ. ಆದರೆ ಬಿಜೆಪಿಗೆ ಹೀನಾಯ ಸೋಲುಂಟಾದ ಹಿನ್ನೆಲೆಯಲ್ಲಿ ಪಕ್ಷದೊಳಗಿನ ಆಂತರಿಕ ಕಚ್ಚಾಟಗಳಿಂದಾಗಿ ಉಮಾಭಾರತಿ ಮರುಸೇರ್ಪಡೆ ವಿಷಯ ನೆನೆಗುದಿಗೆ ಬಿದ್ದಿತ್ತು.











Click it and Unblock the Notifications