ಕೊಡವರಿಗೆ ಕನ್ನಡ ಪುಸ್ತಕದಲ್ಲಿ ಅಪಮಾನ

ಅವರ ಹೆಸರು ಡಾ ಜೆ ಸೋಮಣ್ಣ. ಬಲೆಲೆ ಎಂಬ ಗ್ರಾಮದಲ್ಲಿರುವ ಕಿರಿಯ ಕಾಲೇಜಿನಲ್ಲಿ ಉಪನ್ಯಾಸಕರಾಗಿ ವೃತ್ತಿ. ಅವರು ಬರೆದ ಪುಸ್ತಕದ ಹೆಸರು 'ದಲಿತ-ಕೊಡವ ನೋವು ನಲಿವು'. ಲೇಖಕರು ಕೃತಿ ರಚಿಸಿ, ಪುಸ್ತಕ ಬಿಡುಗಡೆಯಾಗಿ ಮೂರು ವರ್ಷಗಳು ಸಂದಿವೆ. ಇತ್ತೀಚೆಗೆ ಯಾರೋ ಕೊಡವರೊಬ್ಬರು ಆ ಪುಸ್ತಕವನ್ನು ತಿರುವಿ ಹಾಕುತ್ತಿದ್ದಾಗ ಕೊಡವರನ್ನು ಹೀಯಾಳಿಸಿ ಬರೆಯಲಾಗಿದೆ ಎಂಬ ಅಂಶವನ್ನು ಆಕಸ್ಮಾತ್ತಾಗಿ ಪತ್ತೆ ಹಚ್ಚಿದರು.
ಕೊಡವ ಮಹಿಳೆಯರು ಸೀರೆ ಧರಿಸುವ ಶೈಲಿಯನ್ನು ಟೀಕಿಸುವ ಮತ್ತು ಕೊಡವರ ದೇವತೆ ಕಾವೇರಿಯನ್ನು ಅಪಮಾನಗೊಳಿಸುವ ಸಾಲುಗಳು ಆ ಕೃತಿಯಲ್ಲಿ ಇವೆ ಎಂದು ಓದಿದವರು ಆರೋಪಿಸುತ್ತಿದ್ದಾರೆ. ಕೃತಿಯಲ್ಲಿರುವ ಸಂಗತಿಗಳು ಕಪೋಲ ಕಲ್ಪಿತವಾಗಿವೆ. ಸತ್ಯಕ್ಕೆ ದೂರವಾಗಿದೆ ಎಂದು ಬಲೆಲೆ ಕೊಡವ ಸಮಾಜದ ಸದಸ್ಯರು ಆಪೋರ ಮಾಡಿದ್ದಾರೆ.
ಈ ಸಂಬಂಧ ಪ್ರತಿಭಟನೆ ಮಾಡಲು ನಿಶ್ಚಯಿಸಿರುವ ಕೊಡವರು ಮಾರ್ಚ್ 29ರಂದು ಬಲೆಲೆ ಬಂದ್ ಆಚರಣೆಗೆ ಕರೆ ನೀಡಿದ್ದಾರೆ. ಕೊಡವರನ್ನು ಈ ರೀತಿ ಅಪಮಾನ ಮಾಡುವುದನ್ನು ತಾವು ಸಹಿಸುವುದಿಲ್ಲ ಎಂದು ಕೊಡವ ಸಮಾಜದ ಅಧ್ಯಕ್ಷ ಮಲಚಿರ ಬೋಸು ಮಡಿಕೇರಿಯಲ್ಲಿ ಸುದ್ದಿಗಾರರಿಗೆ ತಿಳಿಸಿದರು.












Click it and Unblock the Notifications