ನನ್ನ ಕಕ್ಷಿದಾರ ಕಸಬ್ ಹಳ್ಳಿ ಹುಡುಗ
ಮುಂಬೈ,
ಮಾ. 26 : ಮುಂಬೈ ಭಯೋತ್ಪಾದನೆ ಸಿಕ್ಕಿಬಿದ್ದಿರುವ ಏಕೈಕ ಉಗ್ರ ಪಾಕಿ ಮೂಲದ ಅಜ್ಮಲ್ ಅಮೀರ್ ಕಸಬ್ ಒಬ್ಬ ಹಳ್ಳಿ ಪೋರ. ಆತನಿಗೆ ಮುಂಬೈ ದಾಳಿಯ ಬಗ್ಗೆ ಕಲ್ಪನೆಯೇ ಇರಲಿಲ್ಲ ಎಂದು ಕಸಬ್ ಪರ ವಕೀಲ ಕೆ ಪಿ ಪವಾರ್ ಅವರು ವಿಶೇಷ ನ್ಯಾಯಾಲಯದ ಎದುರು ವಾದಿಸಿದ್ದಾರೆ. id="toptextpromo">2008ರಲ್ಲಿ
ಮುಂಬೈಯಲ್ಲಿ ನಡೆದ ಭಯೋತ್ಪಾದನೆಗೂ, ನನ್ನ ಕಕ್ಷಿದಾರ ಅಜ್ಮಲ್ ಅಮೀರ್ ಕಸಬ್ ನಿಗೂ ಯಾವುದೇ ಸಂಬಂಧವಿಲ್ಲ. ನನ್ನ ಕಕ್ಷಿದಾರ ಅಮಾಯಕ ಹಳ್ಳಿ ಹುಡುಗ. ಈತ ಪಾಕಿಸ್ತಾನದ ನಿವಾಸಿ ಎನ್ನುವ ಏಕೈಕ ಕಾರಣಕ್ಕೆ ಈ ಪ್ರಕರಣದಲ್ಲಿ ಸಿಲುಕಿಸಲಾಗಿದೆ. ಮುಂಬೈ ದಾಳಿ ನಡೆಸಿದ್ದರಲ್ಲ ಕಸಬ್ ಪಾತ್ರ ಏನೂ ಇಲ್ಲ ಎಂದು ಪವಾರ್ ವಿಶೇಷ ನ್ಯಾಯಾಲಯದ ನ್ಯಾಯಮೂರ್ತಿ ಎಂ ಎಲ್ ತೆಹಿಲಿಯಾನಿ ಅವರ ಮುಂದೆ ಬಲವಾಗಿ ಮಂಡಿಸಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಮುಂಬೈ
ದಾಳಿಗೆ ಸಂಬಂಧಿಸಿದಂತೆ ನಿಜವಾದ ಆರೋಪಿಗಳನ್ನು ಬಂಧಿಸುವುದನ್ನು ಬಿಟ್ಟಿರುವ ಪೊಲೀಸರು, ಅಮಾಯಕ ಕಸಬ್ ನ್ನು ಬಂಧಿಸಿದೆ. ಅಲ್ಲದೇ ಸಿಸಿಟಿವಿಯಲ್ಲಿ ಚಿತ್ರೀಕರಣದಲ್ಲಿರುವ ಕಸಬ್ ಅಲ್ಲ ಹಾಗೂ ಡಿಎನ್ಎ ಪರೀಕ್ಷೆಯಲ್ಲಿ ಕೂಡ ಪೊಲೀಸರ ಕೈವಾಡವಿದೆ. ಕಸಬ್ ತಪ್ಪೊಪ್ಪಿಕೊಂಡಿರುವುದು ಪೊಲೀಸರು ನೀಡುತ್ತಿರುವ ಕಿರುಕುಳದಿಂದ ಎಂದು ಪವಾರ್ ಆರೋಪಿಸಿದ್ದಾರೆ.











Click it and Unblock the Notifications