ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಬಿಎಂಪಿ ಸಮರ : ಬಹಿರಂಗ ಪ್ರಚಾರಕ್ಕೆ ತೆರೆ

By Mrutyunjaya Kalmat
|
Google Oneindia Kannada News

Yeddyurappa
ಬೆಂಗಳೂರು, ಮಾ. 26 : ಬಿಬಿಎಂಪಿ ಚುನಾವಣೆ ಬಹಿರಂಗ ಪ್ರಚಾರಕ್ಕೆ ತೆರೆಬಿದ್ದಿದ್ದು, ಇನ್ನೇನಿದ್ದರೂ ಮನೆ ಮನೆಗೆ ತೆರಳಿ ಪ್ರಚಾರದ ಮಾಡುವುದರ ಜೊತೆಗೆ ಮತದಾರರ ಕೃಪೆ ಗಿಟ್ಟಿಸಲು ಫೈನಲ್ ಗೇಮ್ ನ ಕೌಂಟ್ ಡೌನ್ ಆರಂಭವಾಗಿದೆ. ಚುನಾವಣೆ ಹಿನ್ನೆಲೆಯಲ್ಲಿ 30 ಸಾವಿರ ಪೊಲೀಸ್ ಸಿಬ್ಬಂದಿಯನ್ನು ಬಂದೋಬಸ್ತ್ ಗೆ ನಿಯೋಜಿಸಲಾಗಿದೆ.

ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಎಂ ಆರ್ ಪೂಜಾರ್ ಭದ್ರತೆಯ ಉಸ್ತುವಾರಿ ವಹಿಸಿದ್ದು, ಅಪರಾಧ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಹಾಗೂ ಸಿಎಆರ್ ನ ಜಂಟಿ ಪೊಲೀಸ್ ಆಯುಕ್ತ ಬಂದೋಬಸ್ತ್ ನೇತೃತ್ವ ವಹಿಸಿಕೊಂಡಿದ್ದಾರೆ. 12 ಡಿಸಿಪಿಗಳು, ಎಲ್ಲ ವಿಭಾಗದ ಎಸಿಪಿಗಳು, ಇನ್ಸ್ ಪೆಕ್ಟರ್ ಗಳು ಆಯಾ ವಿಭಾಗದಲ್ಲಿ ಬಂದೋಬಸ್ತ್ ನೋಡಿಕೊಳ್ಳಲಿದ್ದಾರೆ.

ಕೆಎಸ್ಆರ್ ಸಿ, ಸಿಎಆರ್ ಸೇರಿ 85 ಪ್ಲಟೂನ್ ಗಳು, 3,500 ಜಿಲ್ಲಾ ಪೊಲೀಸರು, 600 ಮೊಬೈಲ್ ಸಂಚಾರ ಪಡೆಗಳು, 6,500 ಗೃಹರಕ್ಷಕದಳದ ಸಿಬ್ಬಂದಿ ಸೇರಿದಂತೆ 30 ಸಾವಿರ ಮಂದಿಯನ್ನು ಬಂದೋಬಸ್ತ್ ಗೆ ನಿಯೋಜಿಸಲಾಗಿದೆ ಎಂದು ಶಂಕರಿ ಬಿದರಿ ವಿವರಿಸಿದರು. ನಗರ ಹಾಗೂ ಹೊರವಲಯದಲ್ಲಿ 6,278 ಮತಗಟ್ಟೆ ತೆರೆಯಲಾಗಿದೆ. ಈ ಪೈಕಿ ಶೇ.25 ರಷ್ಟು ಸೂಕ್ಷ್ಮ, ಅತೀ ಸೂಕ್ಷ್ಮ ಮತಗಟ್ಟೆಗಳೆಂದು ಗುರುತಿಸಲಾಗಿದೆ. ಮಾ. 26ರ ಸಂಜೆಯಿಂದ ಮಾ.28ರ ಮಧ್ಯರಾತ್ರಿವರೆಗೆ ನಿಷೇಧಾಜ್ಞೆ ಜಾರಿಗೊಳಿಸಲಾಗಿದ್ದು, ಮಧ್ಯ ಮಾರಾಟ ನಿಷೇಧಿಸಲಾಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X