ಬೆಂಗಳೂರು ಚುನಾವಣೆಗೆ ಜನತೆಯ ಪ್ರಣಾಳಿಕೆ

ಸ್ಥಳೀಯ ಸಂಸ್ಥೆಯೊಂದಿಗಿನ ನಾಗರೀಕರ ಸಂಬಂಧಗಳನ್ನು ಪುನರ್ ಸ್ಥಾಪನೆ ಮಾಡುವುದಕ್ಕೆ ಈ ಚುನಾವಣೆ ನೆರವಾಗುತ್ತದೆ. ನಮ್ಮ ನಗರವನ್ನು ಮುನ್ನೆಡೆಸುವ ಮತ್ತು ಪುನರ್ ಸಂಘಟಿಸುವ ಅವಕಾಶವು ಇದೀಗ ಎಲ್ಲರಿಗೆ ಬಂದಿದೆ. ನಾವು ಸರಿಯಾದ ಅಭ್ಯರ್ಥಿಯನ್ನು ಆಯ್ಕೆ ಮಾಡದೇ ಇದ್ದಲ್ಲಿ, ಅದರ ಅಡ್ಡ ಪರಿಣಾಮಗಳಿಗೆ ನಾವೇ ಹೊಣೆ ಆಗುತ್ತೇವೆ. ಹಾಗಾಗಿ ಜನರ ನಿಜವಾದ ಅಗತ್ಯ ವಿಷಯಗಳ ಬಗ್ಗೆ ಅಭ್ಯರ್ಥಿಗಳಿಂದ ಸರಿಯಾದ ಸಮ್ಮತಿ ಪಡೆದು ಚುನಾಯಿಸಿದರೆ, ಅವರ ಅಧಿಕಾರದ ಅವಧಿಯಲ್ಲಿ ಚುನಾವಣೆಯ ಆಶ್ವಾಸನೆಗಳನ್ನು ಪೂರೈಸುವ ಸಾಧ್ಯತೆ ಇರುತ್ತದೆ.
ಈ ನಿಟ್ಟಿನಲ್ಲಿ, ನಗರದ ಹಲವಾರು ಸಮುದಾಯಗಳೊಡನೆ ನಗರಕ್ಕೆ ಸಂಭಂದಿಸಿದ ವಿಷಯಗಳನ್ನು ಚರ್ಚಿಸಿ, ಜನ ಪ್ರಣಾಳಿಕೆಯನ್ನು ರೂಪಿಸಲು ನಗರದ ಅನೇಕ ಸಂಘ ಸಂಸ್ಥೆಗಳು ಹಲವಾರು ಸುತ್ತಿನ ಸಭೆಗಳಲ್ಲಿ ಚರ್ಚೆಗಳನ್ನು ನಡೆಸಿದ ಆಧಾರದ ಮೇಲೆ ಈ ಪ್ರಣಾಳಿಕೆ ಸಿದ್ದಪಡಿಸಲಾಗಿದೆ. ಬೆಂಗಳೂರಿನ ಜನರಿಗೆ ಹಕ್ಕಾಗಿ ದೊರೆಯಬೇಕಾದ ಹಲವಾರು ಪ್ರಗತಿಪರ ಕಾರ್ಯನೀತಿಗಳು ಕ್ರಮಗಳ ಸಾರವೇ ಈ ಪ್ರಣಾಳಿಕೆ.
BBMP ಚುನಾವಣೆಯಲ್ಲಿ ಭಾಗವಹಿಸುವಾಗ ಸಾಧ್ಯವಾದಷ್ಟು ಸರಿಯಾದ ಆಯ್ಕೆಯನ್ನು ಮಾಡುವುದಕ್ಕೋಸ್ಕರ ತಾವೆಲ್ಲ ಮತದಾರರಾಗಿ, ಅಭ್ಯರ್ಥಿಯಾಗಿ, ಸಾಮಾಜಿಕ ಕಾರ್ಯಕರ್ತರಾಗಿ ಈ ಪ್ರಣಾಳಿಕೆಯನ್ನು ಬಳಸಬೇಕೆಂದು ಆಶಿಸಲಾಗಿದೆ.
ಜನತೆಯ ಪ್ರಣಾಳಿಕೆಯಲ್ಲಿ ಏನು ಹೇಳಲಾಗಿದೆ? ಓದಿ, ನೋಡಿ, ಬಳಸಿ. http://janaravedike.wordpress.com/












Click it and Unblock the Notifications