ಆಕಸ್ಮಿಕ ಸ್ಫೋಟಕ್ಕೆ ಇಬ್ಬರು ಬಲಿ

ಬೈಕಿನಲ್ಲಿ ಸ್ಫೋಟಕ ಒಯ್ಯುತ್ತಿದ್ದ ಯುವಕರು ಮೂಲತಃ ತಮಿಳುನಾಡಿನವರು. ಕೈಗಾರಿಕಾ ಉಪಯೋಗಕ್ಕೆ ಬಳಸಲು ಜಿಲೆಟಿನ್ ಕಡ್ಡಿಗಳನ್ನು ಸಾಗಿಸುತ್ತಿದ್ದರು ಎಂದು ತಿಳಿದುಬಂದಿದೆ. ಮೃತರನ್ನು ಏಳುಮಲೈ (35) ಮತ್ತು ಅರುಣ್ ಕುಮಾರ್ ಎಂದು ಗುರುತಿಸಲಾಗಿದೆ. ಇಬ್ಬರ ದೇಹ ಗುರುತು ಹಿಡಿಯಲಾಗದಷ್ಟು ಕರಕಲಾಗಿತ್ತು. ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಾವರೆಕೆರೆ ಪೊಲೀಸರು ತಿಳಿಸಿದ್ದಾರೆ.












Click it and Unblock the Notifications