ಬೆಂಗಳೂರು ಚುನಾವಣೆಗೆ ಬಿಜೆಪಿ ಪ್ರಣಾಳಿಕೆ

ಪಕ್ಷದ ರಾಜ್ಯಾಧ್ಯಕ್ಷ ಕೆ ಎಸ್ ಈಶ್ವರಪ್ಪ,ಬೆಂಗಳೂರು ಉಸ್ತುವಾರಿ ಸಚಿವ ಹಾಗೂ ಸಾರಿಗೆ ಸಚಿವ ಆರ್ ಅಶೋಕ್ ಹಾಗೂ ಸಂಸದ ಆನಂತಕುಮಾರ್ ಪಕ್ಷದ ಕಚೇರಿಯಲ್ಲಿ ಸೋಮವಾರ ಪ್ರಣಾಳಿಕೆ ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅಶೋಕ್, ಜೆಡಿಎಸ್ ವಿರುದ್ದ ತೀವ್ರ ವಾಗ್ದಾಳಿ ನಡೆಸಿದರು. ಬೆಂಗಳೂರು ಅಭಿವೃದ್ಧಿಗೆ ಸಂಬಂಧಿಸಿದಂತೆ ಜೆಡಿಎಸ್ ಎಂದಿನಿಂದಲೂ ವಿರೋಧಿಸುತ್ತಲೇ ಬಂದಿದೆ. ಪ್ರತಿ ಯೋಜನೆ ಜಾರಿ ಬರಬೇಕೆನ್ನುವಷ್ಟರಲ್ಲಿ ದೇವೇಗೌಡ ಮತ್ತವರ ಕುಟುಂಬ ಬೆಂಗಳೂರು ಅಭಿವೃದ್ದಿಗೆ ಕಂಟಕವಾಗಿದೆ ಎಂದು ಅಶೋಕ್ ಜರಿದರು.
ಬಿಜೆಪಿ ಪ್ರಣಾಳಿಕೆ ಮುಖ್ಯಾಂಶಗಳು:
*ಬಿಐಎಎಲ್ ಗೆ ಕೆಂಪೇಗೌಡರ ಹೆಸರು.
*ಕೆಂಪೇಗೌಡರ ಜನ್ಮದಿನದಂದು ಬೆಂಗಳೂರು ಹಬ್ಬ ಆಚರಣೆ.
*ಪ್ರತಿ ವಾರ್ಡ್ ನಲ್ಲೂ ಆಟದ ಮೈದಾನ.
*ಮೋನೋ ರೈಲು ಜಾರಿಗೆ ಕ್ರಮ.
*ಅರ್ಕಾವತಿ ನದಿ ಪುನರುಜ್ಜೀವನ.
*ವೃಷಭಾವತಿ ನದಿ ಶುದ್ಧೀಕರಣ.
*ಬಿಡದಿ ಬಳಿ 1,400 ಮೆಗಾ ವ್ಯಾಟ್ ವಿದ್ಯುತ್ ಕೇಂದ್ರ ಸ್ಥಾಪನೆ.
*ಅಕ್ರಮ ಸಕ್ರಮ ಯೋಜನೆ ಜಾರಿ.
*ಬಿಬಿಎಂಪಿ ಸೇವಾ ಕೇಂದ್ರಗಳು ಆರಂಭ.
*ಆನ್ ಲೈನ್ ಮೂಲಕ ದಾಖಲೆಗಳ ಪೂರೈಕೆ.
*ಬಿಬಿಎಂಪಿ ಶಾಲೆಗಳ ಅಭಿವೃದ್ಧಿಗೆ ಕ್ರಮ.
*ಕೊಳಚೆ ನಿವಾಸಿಗಳಿಗೆ 50ಸಾವಿರ ಮನೆಗಳ ನಿರ್ಮಾಣ.
*ಕೆಎಚ್ ಬಿಯಿಂದ 50 ಮನೆಗಳ ನಿರ್ಮಾಣ.
*ನಗರದ 4 ಕಡೆಯಲ್ಲಿ ಸ್ಯಾಟ್ ಲೈಟ್ ನಿಲ್ದಾಣ ನಿರ್ಮಾಣ.
*ಡಿಸೆಂಬರ್ ಹೊತ್ತಿಗೆ ಮೆಟ್ರೋ ರೈಲು ಆರಂಭ.
*ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಕ್ರಮ.
*ಕೊಳಚೆ ನಿವಾಸಿಗಳಿಗೆ ಹಕ್ಕು ಪತ್ರ.
*ಆರೋಗ್ಯ ಸುರಕ್ಷಾ ಕವಚ ವಿಸ್ತರಣೆ
*10 ವರ್ಷಗಳಲ್ಲಿ ಬೆಂಗಳೂರನ್ನು ಸ್ಲಂ ಮುಕ್ತ ನಗರವಾಗಿಸಲು ಕ್ರಮ.
*ಅಗ್ನಿ ಆಕಸ್ಮಿಕಗಳಿಗೆ ಬಿಗಿ ಕ್ರಮ.
*ಪರ್ಯಾಯ ಡಂಪಿಂಗ್ ಯಾರ್ಡ್ ಗಳ ನಿರ್ಮಾಣ.











Click it and Unblock the Notifications