ಮಾ.22ರಂದು ವಿಶ್ವ ಜಲದಿನ ಮರೆಯಬೇಡಿ!
ಬೆಂಗಳೂರು,
ಮಾ.21: ವಿಶ್ವ ಜಲದಿನದ ಅಂಗವಾಗಿ ಬೆಂಗಳೂರು ಜಲಮಂಡಳಿಯಲ್ಲಿ ಮಾ.22ರಂದು ಬೆಂಗಳೂರಿನಲ್ಲಿ ನಾನಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ದಿ ಕ್ಯಾಪಿಟಲ್ ಹೋಟೆಲ್‌ನಲ್ಲಿ ಬೆಳಗ್ಗೆ 10 ಗಂಟೆಗೆ ರಾಜ್ಯ ಉಚ್ಚ ನ್ಯಾಯಾಲಯದ ನ್ಯಾಯಾಧೀಶ ವಿ. ಗೋಪಾಲಗೌಡ 'ವಿಶ್ವ ಜಲ ದಿನ' ಕಾರ್ಯಕ್ರಮವನ್ನು ಉದ್ಘಾಟಿಸುವರು. ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿ ಶಂಭು ದಯಾಲ್ ಮೀನ ಅಧ್ಯಕ್ಷತೆ ವಹಿಸುವರು. id="toptextpromo">ವಿಜಯ
ಕರ್ನಾಟಕದ ಪತ್ರಕರ್ತ ರಾಧಾಕೃಷ್ಣ ಭಡ್ತಿ ಸ್ಮರಣ ಸಂಚಿಕೆ ಬಿಡುಗಡೆ ಮಾಡುವರು ಎಂದು ಬೆಂಗಳೂರು ಜಲಮಂಡಳಿ ಪ್ರಕಟಣೆ ತಿಳಿಸಿದೆ. ಬಿಬಿಎಂಪಿ ಆಯುಕ್ತ ಭರತ್‌ಲಾಲ್ ಮೀನ, ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ವ್ಯವಸ್ಥಾಪಕ ನಿರ್ದೇಶಕ ಸಂದೀಪ್ ದವೇ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ಸಿದ್ದಯ್ಯ, ಕರ್ನಾಟಕ ನಗರ ಮೂಲ ಸೌಲಭ್ಯಗಳ ಹಣಕಾಸು ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಅರವಿಂದ ಶ್ರೀವಾತ್ಸವ ಮತ್ತಿತರರು ಭಾಗವಹಿಸುವರು. id='are-slot-1' class='oiad oi-axt oiadv'> id='top-searched-articles'>ವಿಜ್ಞಾನಿ
ಡಾ. ಪಾನ್ ಲಬೇಸ್ತವನ್ ಅವರು ವಿಶ್ವ ಜಲ ದಿನ ಕುರಿತಂತೆ ಪ್ರಮುಖ ಭಾಷಣ ಮಾಡುವರು. 'ಶುದ್ಧ ನೀರು' ಕುರಿತಂತೆ ಎರಡು ತಾಂತ್ರಿಕ ಗೋಷ್ಠಿ, ದುಂಡುಮೇಜಿನ ಸಭೆ ನಡೆಯಲಿದೆ. ವ್ಯಕ್ತವಾಗುವ ಅಭಿಪ್ರಾಯಗಳನ್ನು ಕ್ರೋಢೀಕರಿಸಿ ಅವುಗಳನ್ನು ಅನುಷ್ಠಾನಗೊಳಿಸಲು ಸರ್ಕಾರಕ್ಕೆ ಶಿಫಾರಸು ಮಾಡಲಾಗುವುದು ಎಂದು ಮಂಡಳಿ ತಿಳಿಸಿದೆ.ವಿಶ್ವ
ಜಲದಿನದ
ಮಾಹಿತಿಗಾಗಿ
ಇಲ್ಲಿ
ಕ್ಲಿಕ್ಕಿಸಿ












Click it and Unblock the Notifications