ಬೆಂಗಳೂರು, ಮಾ.19: ಸಮುದಾಯದ ಇತ್ತೀಚಿನ ಅತಿ ಜನಪ್ರಿಯ ನಾಟಕ "ಜುಗಾರಿ ಕ್ರಾಸ್" ಇದೇ ಮಾರ್ಚಿ 20 ನೇ ತಾರೀಖು ರಂಗ ಶಂಕರದಲ್ಲಿ ಸಂಜೆ 7.30 ಕ್ಕೆ ಮತ್ತೆ ಪ್ರದರ್ಶನಗೊಳ್ಳುತ್ತಿದೆ. ಪೂರ್ಣಚಂದ್ರ ತೇಜಸ್ವಿಯವರ ಕಾದಂಬರಿ ಆಧಾರಿತ ಈ ನಾಟಕ ಕೇವಲ 24 ಘಂಟೆಗಳಲ್ಲಿ ನಡೆಯುವ ಒಂದು ರೊಮ್ಯಾಂಟಿಕ್ ಥ್ರಿಲ್ಲರ್, ಜೊತೆಗೆ ಇದು ನಿಜವಾಗಿಯೂ ಮಲೆನಾಡಿನ ಸಹ್ಯಾದ್ರಿಯ ಕಾಡುಗಳ ತಪ್ಪಲಿನಲ್ಲಿ ನಡೆಯಬಹುದಾದ ವಾಸ್ತವ ನೆಲೆಗಟ್ಟಿನ ಸಾಮಾಜಿಕ ಕಾದಂಬರಿ.
ನಾಳೆ ಮಾರ್ಚ್ 20ರ ಶನಿವಾರ ಸಂಜೆ 7.30 ಕ್ಕೆ ರಂಗಶಂಕರದಲ್ಲಿ. ನಾಟಕ ರೂಪ ಮತ್ತು ನಿರ್ದೇಶನ: ನಟರಾಜ್ ಹೊನ್ನವಳ್ಳಿ. ನೋಡಲು ಮರೆಯದಿರಿ, ಮರೆತು ನಿರಾಶರಾಗದಿರಿ! ವಿವರಗಳಿಗೆ ಕರೆ ಮಾಡಿ : 99001 82400