ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದಕ್ಷಿಣ ಆಫ್ರಿಕಾದತ್ತ ದಾವೂದ್ 'ಡಿ' ಪಡೆ ?

By Mahesh
|
Google Oneindia Kannada News

Dawood Ibrahim
ಮುಂಬೈ, ಮಾ 17 : ತನ್ನ ದೈನಂದಿನ ಚಟುವಟಿಕೆಗಳ ಮೇಲೆ ಐಎಸ್ಐ (Inter Service Intelligence) ಹಸ್ತಕ್ಷೇಪ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಭೂಗತ ದೊರೆ ದಾವೂದ್ ಇಬ್ರಾಹಿಮ್, ಆತನ ಕುಟುಂಬ ಮತ್ತು ಸಹವರ್ತಿಗಳು ಪಾಕಿಸ್ತಾನ ತೊರೆದು ದಕ್ಷಿಣಆಫ್ರಿಕಾದಲ್ಲಿ ನೆಲೆಯೂರಲು ನಿರ್ಧರಿಸಿದ್ದಾರೆಂದು ಡಿಎನ್ಎ ಪತ್ರಿಕೆ ವರದಿ ಮಾಡಿದೆ.

ಭಾರತಕ್ಕೆ ಬೇಕಾಗಿರುವ 'ಮೋಸ್ಟ್ ವಾಂಟೆಡ್ ಭಯೋತ್ಪಾದಕ' ದಾವೂದ್ ಪಾಕ್ ತೊರೆಯಲು ನಿರ್ಧರಿಸಿರುವುದು ನಿಜ ಎಂದು ಆತನ ನಿಕಟವರ್ತಿ ಫಿರೋಜ್ ಅಬ್ದುಲ್ ರಶೀದ್ ಖಾನ್ ಆಲಿಯಾಸ್ 'ಹಂಜಾ' ದೃಢಪಡಿಸಿದ್ದಾರೆ. ಹಂಜಾನನ್ನು ಮುಂಬೈ ಕ್ರೈಂ ಪೊಲೀಸರು ಇತ್ತೀಚೆಗೆ ಬಂಧಿಸಿದ್ದರು. ದಾವೂದ್, ಛೋಟಾ ಶಕೀಲ್, ಅನೀಸ್ ಇಬ್ರಾಹಿಮ್ ಮತ್ತು ಟೈಗರ್ ಮೆಮೊನ್ ತಮ್ಮ ಕುಟುಂಬದ ಸದಸ್ಯರ ರಕ್ಷಣೆಗಾಗಿ ಮತ್ತು ಐಎಸ್ಐ ಬಿಗಿಹಿಡಿತದಿಂದ ತಪ್ಪಿಸಿಕೊಳ್ಳಲು ಪಾಕಿಸ್ತಾನದಿಂದ ಪರಾರಿಯಾಗಲು ನಿರ್ಧರಿಸಿದ್ದಾರೆಂದು ಹಂಜಾ ಹೇಳಿಕೆ ಆಧರಿಸಿ ಮುಂಬೈ ಕ್ರೈಂ ಬ್ರಾಂಚ್ ಅಧಿಕಾರಿಗಳು ಹೇಳಿಕೆ ನೀಡಿದ್ದಾರೆಂದು ಡಿಎನ್ಎ ವರದಿ ಮಾಡಿದೆ.

ಹಂಸಾ ಹೇಳಿಕೆ ಪ್ರಕಾರ ತನ್ನ ವಿರೋಧಿ ಛೋಟಾ ರಾಜನ್ ತಂಡದ ಸದಸ್ಯರ ಅಪಾಯ ಇರುವುದರಿಂದ ದಾವೂದ್ ಪಶ್ಚಿಮ ಏಷ್ಯಾ ರಾಷ್ಟ್ರಗಳಲ್ಲಿ ನೆಲೆಸುವ ಸಾಧ್ಯತೆ ಇಲ್ಲ ಎಂದು ಹೇಳಿಕೆ ನೀಡಿದ್ದಾನೆ. ದಾವೂದ್ ಅತ್ಯಂತ ನಿಕಟವರ್ತಿಯಲ್ಲೊಬ್ಬನಾದ ಹಂಜಾ 1993ರ ಮುಂಬೈ ಸರಣಿ ಸ್ಪೋಟಕ್ಕೆ ಶಸ್ತ್ರಾಸ್ತ್ರ ಪೂರೈಸಿದ್ದು ಫೆಬ್ರವರಿ 2010 ರಲ್ಲಿ ಈತನನ್ನುಮುಂಬೈ ಕ್ರೈಂ ಪೊಲೀಸರು ಬಂಧಿಸಿದ್ದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X