ಏಪ್ರಿಲ್ 2ಕ್ಕೆ ಸ್ವಾಮಿ ನಿತ್ಯಾನಂದ ಶರಣಾಗತಿ?

Nithyananda
ಹರಿದ್ವಾರ, ಮಾ. 15 : ರಾಸಲೀಲೆಯ ವಿಡಿಯೋ ಪ್ರಕರಣದಿಂದ ಮುಜುಗರಕ್ಕೊಳಗಾಗಿರುವ ಪರಮಹಂಸ ನಿತ್ಯಾನಂದ ಸ್ವಾಮಿ ಹರಿದ್ವಾರದ ಫೈವ್ ಸ್ಟಾರ್ ಹೊಟೇಲೊಂದರಲ್ಲಿ ಕಾಣಿಸಿಕೊಂಡಿದ್ದಾನೆ.

ವಿವಾದದ ನಂತರ ಪ್ರಥಮ ಬಾರಿಗೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ನಿತ್ಯಾನಂದ, ನನ್ನ ಬಗ್ಗೆ ಮಾಧ್ಯಮಗಳು ಕೆಟ್ಟದಾಗಿ ವರದಿ ಮಾಡಿರುವುದರಿಂದ ಬಹಳಷ್ಟು ನೋವನ್ನು ಅನುಭವಿಸಿದ್ದೇನೆ. ಹಲವು ಜನರಿಂದ ನನಗಾಗಿರುವ ನೋವನ್ನು ಕಡಿಮೆ ಮಾಡಲು ನಾನು ಧ್ಯಾನದ ಮೊರೆ ಹೋಗುತ್ತಿದ್ದೇನೆ ಎಂದು ನಿತ್ಯಾನಂದ ಸ್ವಾಮಿ ಈ ಸಂದರ್ಭದಲ್ಲಿ ಮಾಧ್ಯಮಗಳಿಗೆ ತಿಳಿಸಿದ್ದಾನೆ.

ಆರಂಭದಲ್ಲಿ ಮಾಧ್ಯಮದವರೊಡನೆ ಮಾತನಾಡಲು ನಿರಾಕರಿಸಿದ ನಿತ್ಯಾನಂದ ಒತ್ತಡಕ್ಕೆ ಮಣಿದು ತನ್ನ ನಿಲುವನ್ನು ಹಂಚಿಕೊಂಡಿದ್ದಾನೆ. ಹೊಟೇಲಿನಲ್ಲಿ ಬೇರೆಯವರು ಹೆಸರಿನಲ್ಲಿ ನಿತ್ಯಾನಂದ ತಂಗಿದ್ದ ಎಂದು ತಿಳಿದುಬಂದಿದೆ.

ದಯವಿಟ್ಟು ಯಾರೂ ಆತುರದ ನಿರ್ಧಾರಕ್ಕೆ ಬರಬೇಡಿ. ಮಾಧ್ಯಮಗಳು ಪ್ರಸಾರ ಮಾಡಿರುವ ವಿಡಿಯೋ ಸಂಪೂರ್ಣವಾಗಿ ನಿಜವಾದುದಲ್ಲ. ಇದರಲ್ಲಿ ಪಿತೂರಿಯಿದೆ. ಸಾಕಷ್ಟು ಬದಲಾವಣೆ ಮಾಡಲಾಗಿದೆ. ತಾಳ್ಮೆಯಿಂದ ಕಾಯಿರಿ, ಸತ್ಯ ಹೊರಗೆ ಬರುತ್ತದೆ ಎಂದು ಸ್ವಾಮಿ ತಿಳಿಸಿದ್ದಾನೆ. ಏಪ್ರಿಲ್ 2ರಂದು ಶ್ರೀಪೆರಂಬದೂರು ನ್ಯಾಯಾಲಯಕ್ಕೆ ನಿತ್ಯಾನಂದನ ಶರಣಾಗತನಾಗುವ ಸಾಧ್ಯತೆಯಿದೆ ಎನ್ನಲಾಗಿದೆ.

ನಿತ್ಯಾನಂದನನ್ನು ಬಂಧಿಸುವಂತೆ ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ. ಆದರೆ, ಆತನ ವಿರುದ್ಧ ಸೂಕ್ತ ಸಾಕ್ಷ್ಯಾಧಾರಗಳಿಲ್ಲ. ವೀಡಿಯೋ ಟೇಪ್ ಪ್ರಕರಣದಲ್ಲಿ ಕಾಣಿಸಿಕೊಂಡಿರುವ ಮಹಿಳೆ ದೂರು ಕೊಡದ ಹೊರತು ಸ್ವಾಮಿ ವಿರುದ್ಧ ಕ್ರಮ ಸಾಧ್ಯವಿಲ್ಲ. ಕೇವಲ ಧಾರ್ಮಿಕ ಭಾವನೆಗಳಿಗೆ ಧಕ್ಕೆಯೆಸಗಿದ ಪ್ರಕರಣದಲ್ಲಿ ಬಂಧಿಸುವುದು ಸಾಧ್ಯವಿಲ್ಲ. ಬಿಡದಿಯಲ್ಲಿನ ಆಶ್ರಮವನ್ನು ವಶಪಡಿಸಿಕೊಳ್ಳುವುದು ಕೂಡ ಸಾಧ್ಯವಾಗದ ಮಾತುಗಳು ಕೇಳಿ ಬರುತ್ತಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+