ಉಗ್ರರ ದಾಳಿ ಭೀತಿ; ಕೊಚ್ಚಿಯಲ್ಲಿ ಕಟ್ಟೆಚ್ಚರ
ಕೊಚ್ಚಿ,
ಮಾ.13: ಲಷ್ಕರ್ ಇ ತೋಯ್ಬಾ ಉಗ್ರರು ಬಂದರು ನಗರ ಕೊಚ್ಚಿ ಮೇಲೆ ದಾಳಿ ಮಾಡುವ ಸಾಧ್ಯತೆಯಿದೆ ಎಂದು ಗುಪ್ತಚರ ಇಲಾಖೆ ಮುನ್ನೆಚ್ಚರಿಕೆ ನೀಡಿರುವ ಹಿನ್ನೆಲೆಯಲ್ಲಿ ನಗರದಾದ್ಯಂತ ಬಿಗಿ ಕಟ್ಟೆಚ್ಚರ ವಹಿಸಲಾಗಿದೆ. ಉಗ್ರರ ದಾಳಿಯ ಬಗ್ಗೆ ಶುಕ್ರವಾರ(ಮಾ.12) ಕೇರಳ ಸರಕಾರಕ್ಕೆ ಕೇಂದ್ರ ಎಚ್ಚರಿಕೆ ಸಂದೇಶ ರವಾನಿಸಿತ್ತು. id="toptextpromo">ಜನ
ಜಂಗುಳಿ ಅಧಿಕವಾಗಿರುವ ಹಾಗೂ ಬಂದರು ಪ್ರದೇಶದಲ್ಲಿ ಕಟ್ಟೆಚ್ಚರ ವಹಿಸುವಂತೆ ನಗರ ಪೊಲೀಸ್ ಆಯುಕ್ತರಿಗೆ ಕೇಂದ್ರ ಗೃಹ ಕಾರ್ಯದರ್ಶಿ ಜಿ ಕೆ ಪಿಳ್ಳೈ ಸೂಚಿಸಿದ್ದಾರೆ. ಕೊಚ್ಚಿ ಕೇರಳದ ಪ್ರಮುಖ ವಾಣಿಜ್ಯ ಹಾಗೂ ಪ್ರವಾಸಿ ಕೇಂದ್ರ. ಉಗ್ರರ ಬೆದರಿಕೆ ಹಿನ್ನೆಲೆಯಲ್ಲಿ ಕೊಚ್ಚಿಯ ಬಂದರು ಪ್ರದೇಶ ಹಾಗೂ ನಗರದಲ್ಲಿ ಬಿಗಿ ಪೊಲೀಸ್ ಭದ್ರತೆ ಒದಗಿಸಲಾಗಿದೆ. id='are-slot-1' class='oiad oi-axt oiadv'> id='top-searched-articles'>ಗುಜರಾತ್
ನ ಸೋಮನಾಥ ದೇವಾಲಯಕ್ಕೂ ಉಗ್ರರು ಬೆದರಿಕೆಯೊಡ್ಡಿರುವ ಹಿನ್ನೆಲೆಯಲ್ಲಿ ಅಲ್ಲೂ ಬಿಗಿ ಭದ್ರತೆ ಒದಗಿಸಲಾಗಿದೆ. ಇಂಡಿಯನ್ ಮುಜಾಹಿದ್ದೀನ್ ಸಂಘಟನೆಯ ಬಂಧಿತ ಉಗ್ರ ಸಲ್ಮಾನ್ ಈ ದಾಳಿಯ ಬಗ್ಗೆ ಬಾಯ್ಬಿಟ್ಟಿದ್ದ. ಹಾಗೆಯೆ ಈ ಉಗ್ರ ಸಂಘಟನೆ ದಕ್ಷಿಣ ಭಾರತದಲ್ಲಿ ಹೊಸ ಜಿಹಾದಿಗಳನ್ನು ನೇಮಕ ಮಾಡಿಕೊಳ್ಳುತ್ತಿರುವುದಾಗಿಯೂ ಸಲ್ಮಾನ್ ತಿಳಿಸಿದ್ದಾನೆ.











Click it and Unblock the Notifications