ಸರಕಾರ ರೋಗಗ್ರಸ್ತವಾಗಿದೆ, ದತ್ತಾ
ಬೆಂಗಳೂರು,
ಮಾ. 12 : ಬರೀ ಪೊಳ್ಳು ಆಶ್ವಾಸನೆಗಳ, ಕಾರ್ಯಕ್ರಮ ಅನುಷ್ಠಾನ ಮಾಡಲಾಗದೆ ಬರೀ ಭಾಷಣ ಮಾಡುವ, ಮಲಬದ್ದತೆಯಿಂದ ಮತ್ತು ರಕ್ತಹೀನತೆಯಿಂದ ಬಳಲುತ್ತಿರುವ ರೋಗಗ್ರಸ್ತ ಬಿಜೆಪಿ ಸರಕಾರ. ಈ ಸರಕಾರಕ್ಕೆ ತುರ್ತಾಗಿ ಒಳ್ಳೆ ವೈದ್ಯರಿಂದ ಚಿಕತ್ಸೆ ಕೊಡಿಸಬೇಕಾಗಿದೆ ಎಂದು ಜೆಡಿಎಸ್ ನಾಯಕ ವೈ ಎಸ್ ವಿ ದತ್ತಾ ಸರಕಾರವನ್ನು ಲೇವಡಿ ಮಾಡಿದ್ದಾರೆ. id="toptextpromo"> ವಿಧಾನಪರಿಷತ್ ನಲ್ಲಿ ಬಜೆಟ್ ಮೇಲಿನ ಚರ್ಚೆಯಲ್ಲಿ ಮಾತನಾಡುತ್ತಿದ್ದ ದತ್ತಾ, ಶ್ರೀಮಂತರನ್ನು ಮತ್ತು ಗಣಿಧಣಿಗಳನ್ನು ಮುಟ್ಟುವ ಧೈರ್ಯವನ್ನು ಮುಖ್ಯಮಂತ್ರಿಗಳು ಮಾಡಿಲ್ಲ. ನಂಜನಗೂಡು ಹಲ್ಲುಪುಡಿ ಉಜ್ಜುವ ಶ್ರೀಸಾಮಾನ್ಯನ ಮೇಲೆ ತೆರಿಗೆ ಹಾಕಿದ್ದಾರೆ. ಕರ್ನಾಟಕ ಅಂದರೆ ಬರೀ ಶಿವಮೊಗ್ಗ ಬಳ್ಳಾರಿ ಅಲ್ಲ, ಒಂದು ಕಣ್ಣಿಗೆ ಬೆಣ್ಣೆ ಇನ್ನೊಂದು ಕಣ್ಣಿಗೆ ಸುಣ್ಣ ಈ ತಾರತಮ್ಯ ಸರಿಯಲ್ಲ ಎಂದು ದತ್ತಾ ಸರಕಾರವನ್ನು ಟೀಕಿಸಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಇಂಧನ
ಕ್ಷೇತ್ರಕ್ಕೆ ಈ ವರ್ಷ 3348 ಕೋಟಿ ರೂಪಾಯಿ ಎತ್ತಿಡಲಾಗಿದೆ. ಆದರೆ ಬೇಸಿಗೆಯಲ್ಲಿ ವಿದ್ಯುತ್ ಖರೀದಿಗೆ ಅಂದಾಜು ಐದು ಸಾವಿರ ಕೋಟಿ ರೂಪಾಯಿ ಬೇಕು. ಎಸ್ಕಾಂ ಗಳಿಗೆ ಪಾವತಿಸಲು ಸರಕಾರ ಎಲ್ಲಿಂದ ಹಣ ತರುತ್ತದೆ? ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಮಾರ್ಚ್ ಒಳಗೆ ಸಂದಾಯವಾಗಬೇಕಿದ್ದ ಹಣ ನೀಡಲೂ ಸರಕಾರದ ಬಳಿ ಕಾಸಿಲ್ಲ. ಈ ಸರಕಾರ ದಿವಾಳಿಯಾಗಿದೆ, ಆರ್ಥಿಕ ಸ್ಥಿತಿಗತಿ ಕುರಿತು ಶ್ವೇತಪತ್ರ ಹೊರಡಿಸಬೇಕು ಎಂದು ದತ್ತಾ ಆಗ್ರಹಿಸಿದ್ದಾರೆ.











Click it and Unblock the Notifications