ಗೋಧ್ರಾ ಗಲಭೆ, ಮೋದಿಗೆ ಸಮನ್ಸ್
ಅಹಮದಾಬಾದ್,
ಮಾ.12 : 2002ರ ಗೋಧ್ರಾ ನಂತರದ ದೊಂಬಿ ಸಂಧರ್ಭದಲ್ಲಿ ಕಾಂಗ್ರೆಸ್ ಸಂಸದರಾಗಿದ್ದ ಎಸಾನ್ ಜಾಫ್ರಿ ಜೀವಂತ ದಹನವಾಗಿದ್ದರು. ಈ ಸಂಬಂಧ ಅವರ ಪತ್ನಿ ಜಾಕಿಯಾ ಜಾಫ್ರಿ ಸಲ್ಲಿಸಿದ್ದ ಅರ್ಜಿ ಹಿನ್ನಲೆಯಲ್ಲಿ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರಿಗೆ ತನಿಖಾ ಮಂಡಳಿ ಸಮನ್ಸ್ ಜಾರಿ ಮಾಡಿದೆ. ಇದನ್ನು ಮುಂದಿಟ್ಟು ಕೊಂಡು ಮೋದಿ ರಾಜಿನಾಮೆಗೆ ಕಾಂಗ್ರೆಸ್ ಒತ್ತಾಯಿಸಿದೆ. id="toptextpromo">ಮಾರ್ಚ್
21ರಂದು ವಿಚಾರಣೆಗೆ ಹಾಜರಾಗುವಂತೆ ಮೋದಿ ಅವರಿಗೆ ಸುಪ್ರೀಂಕೋರ್ಟ್ ನಿಯೋಜಿಸಿರುವ ವಿಶೇಷ ತನಿಖಾ ತಂಡ (SIT) ಗುರುವಾರ (ಮಾ.11 ) ಸಮನ್ಸ್ ಜಾರಿ ಮಾಡಿದೆ. ಸಂಸದ ಜಾಫ್ರಿ ಕೊಲೆಗೆ ಸಂಬಂಧಿಸಿದಂತೆ ಮಾತ್ರ ಮೋದಿ ಅವರಿಗೆ ಸಮನ್ಸ್ ಜಾರಿ ಮಾಡಲಾಗಿದೆ. ಇದುವರೆಗೆ ಸಂಗ್ರಹಿಸಿರುವ ಸಾಕ್ಷ್ಯಾಧಾರಗಳನ್ನು ಆಧರಿಸಿ ಅವರನ್ನು ವಿಚಾರಣೆಗೆ ಒಳಪಡಿಸಲಾಗುವುದು ಎಂದು ತನಿಖಾ ತಂಡದ ಮುಖ್ಯಸ್ಥ ರಾಘವನ್ ಹೇಳಿಕೆ ನೀಡಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಅಂದಿನ
ಗುಜರಾತ್ ಹಿಂಸಾಚಾರವನ್ನು ನೆನೆಪಿಸಿಕೊಂಡಿರುವ ಕಾಂಗ್ರೆಸ್ ವಕ್ತಾರ ಮನೀಶ್ ತಿವಾರಿ, ದೇಶ ಸ್ವಾಂತಂತ್ರ್ಯಕಂಡ ನಂತರ ಇಂಥ ಹಿಂಸಾಚಾರವನ್ನು ಎಂದೂ ಕಂಡಿರಲಿಲ್ಲ. ಅಂದಿನ ಹಿಂಸಾಚಾರದಲ್ಲಿ ಗುಜರಾತ್ ಸರಕಾರದ ನೇರ ಪಾತ್ರವಿದೆ. ಮೋದಿ ರಾಜಿನಾಮೆ ನೀಡಬೇಕೆಂದು ತಿವಾರಿ ಆಗ್ರಹಿಸಿದ್ದಾರೆ.











Click it and Unblock the Notifications