ಹಂಪಿ ವಿವಿ ಭೂ ಹಸ್ತಾಂತರ ಇಲ್ಲ
ಬೆಂಗಳೂರು,
ಮಾ. 11 : ತೀವ್ರ ವಿವಾದಕ್ಕೆ ಕಾರಣವಾಗಿದ್ದ ಹಂಪಿ ಕನ್ನಡ ವಿಶ್ವವಿದ್ಯಾಲಯ ಭೂಮಿ ಹಸ್ತಾಂತರವನ್ನು ಕೈ ಬಿಟ್ಟಿರುವುದಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಗುರುವಾರ ವಿಧಾನ ಪರಿಷತ್ ನಲ್ಲಿ ಸ್ಪಷ್ಟಪಡಿಸಿದ್ದಾರೆ. id="toptextpromo"> ವಿರೋಧ ಪಕ್ಷದ ನಾಯಕಿ ಕಾಂಗ್ರೆಸ್‌ನ ಮೋಟಮ್ಮ, ವಿಜಯನಗರ ಪುನಶ್ಚೇತನ ಟ್ರಸ್ಟ್‌ಗೆ ಹಂಪಿ ಕನ್ನಡ ವಿವಿಯ ಭೂಮಿಯನ್ನು ಹಸ್ತಾಂತರ ಮಾಡುವ ಸರ್ಕಾರ ನಿರ್ಧಾರಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಇದಕ್ಕೆ ಪ್ರತಿಪಕ್ಷದ ಹಲವು ಮುಖಂಡರು ಕೂಡ ಧ್ವನಿಗೂಡಿಸಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿ, ರಾಜ್ಯಪಾಲರ ಸಲಹೆ ಮೇರೆಗೆ ಹಂಪಿ ವಿವಿಯ ಒಂದಿಂಚೂ ಭೂಮಿಯನ್ನು ಪರಭಾರೆ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಆದರೆ ವಿಜಯನಗರ ಟ್ರಸ್‌ಗೆ ಪ್ರವಾಸೋದ್ಯಮ ಇಲಾಖೆಯ ಭೂಮಿಯನ್ನು ನೀಡಲು ನಿರ್ಧರಿಸಲಾಗಿದೆ ಎಂದು ಹೇಳಿದರು. id='are-slot-1' class='oiad oi-axt oiadv'> id='top-searched-articles'> ಹಂಪಿ ಕನ್ನಡ ವಿವಿಯ ಭೂಮಿಯನ್ನು ವಿಜಯನಗರ ಟ್ರಸ್‌ಗೆ ಸರ್ಕಾರ ಪರಭಾರೆ ಮಾಡಲು ಹೊರಟಿರುವ ಕ್ರಮವನ್ನು ಖಂಡಿಸಿ ವಿವಿಯ ಕೆಲವು ಮುಖ್ಯಸ್ಥರು ರಾಜೀನಾಮೆ ಸಲ್ಲಿಸಿದ್ದರು. ರಾಜ್ಯಪಾಲ ಎಚ್ ಆರ್ ಭಾರದ್ವಾಜ್ ಹಂಪಿ ವಿವಿಯ ಭೂಮಿಯನ್ನು ಪರಭಾರೆ ಮಾಡದಂತೆ ಪತ್ರ ಬರೆದಿದ್ದರು. ಹಿರಿಯ ಸಾಹಿತಿಗಳೂ ಕೂಡ ವಿರೋಧ ವ್ಯಕ್ತಪಡಿಸಿದ್ದರು.











Click it and Unblock the Notifications