ಇಸ್ಲಾಂ ಅಣಕಿಸಿ ಕತಾರ್ ಪೌರತ್ವ ಉಳಿಸಿಕೊಳ್ಳಿ
ಬೆಂಗಳೂರು,
ಮಾ. 9 : ಇಸ್ಲಾಂ ಧರ್ಮದ ದೇವರನ್ನು ಬೆತ್ತಲೆಗೊಳಿಸುವಂತ ಚಿತ್ರ ಬಿಡಿಸಿ ಕತಾರ್ ಪೌರತ್ವ ಉಳಿಸಿಕೊಳ್ಳಲು ಎಂ ಎಫ್ ಹುಸೇನ್ ಅವರಿಗೆ ಸಾಧ್ಯವಿದೆಯೇ ಆರ್ಟ್ ಆಫ್ ಲಿವಿಂಗ್ ನ ರವಿಶಂಕರ ಗುರೂಜಿ ಪ್ರಶ್ನಿಸಿದ್ದಾರೆ. id="toptextpromo">ಮಾಧ್ಯಮ
ಪ್ರತಿನಿಧಿಗಳೊಂದಿಗೆ ಮಾತನಾಡುತ್ತಿದ್ದ ಅವರು, ಕಲಾವಿದನ ಕ್ರಿಯೇಟಿವಿಟಿ ಇನ್ನೊಂದು ಧರ್ಮವನ್ನು ಅವಹೇಳನ ಮಾಡುವಂತೆ ಇರಬಾರದು. ಕೋಟ್ಯಂತರ ಹಿಂದೂ ಪ್ರೀತಿಸಿ ಆರಾಧಿಸುವ ರಾಮ ಸೀತೆಯನ್ನು ಬೆತ್ತಲೆಗೊಳಿಸುವ ಚಿತ್ರ ಬಿಡಿಸುವ ಕ್ರಿಯೇಟಿವಿಟಿ, ಕುಚೇಷ್ಟೆ. ಧರ್ಮ ದರ್ಮಗಳ ಮಧ್ಯೆ ಕಿಡಿ ಹೊತ್ತಿಸುವ ಕಲಾವಿದನ ಅವಶ್ಯಕತೆ ಭಾರತಕ್ಕೆ ಇಲ್ಲ ಎಂದು ಗುರೂಜಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. id='are-slot-1' class='oiad oi-axt oiadv'> id='top-searched-articles'>ಕಲಾವಿದನಿಗೆ
ಖ್ಯಾತ ಮತ್ತು ಜನಪ್ರಿಯತೆ ಹೆಚ್ಚಬೇಕಾದರೆ, ಆತನಲ್ಲಿ ಕ್ರಿಯೇಟಿವಿಟಿ ಅಗತ್ಯ. ಆದರೆ, ಆ ಕ್ರಿಯೇಟಿವಿಟಿಯನ್ನು ಒಂದು ಧರ್ಮ ವಿರುದ್ದ ಬಳಸುವುದು ಅತ್ಯಂತ ಖಂಡನೀಯ. ಹುಸೇನ್ ಕ್ರಿಯೇಟಿವಿಟಿ ಕಲಾವಿದರು, ಅದರಲ್ಲಿ ಎರಡು ಮಾತಿಲ್ಲ. ಆದರೆ, ಹಿಂದೂಗಳು ಆರಾಧಿಸುವ ದೇವರುಗಳು ಮೇಲೆ ಬೆತ್ತಲೆ ಚಿತ್ರ ತೆಗೆಯುವ ಮೂಲಕ ಪ್ರಯೋಗ ನಡೆಸಿರುವುದನ್ನು ಒಪ್ಪಲು ಸಾದ್ಯವೇ ಇಲ್ಲ. ಭಾರತ ಪೌರತ್ವ ತೊರೆದು ಕತಾರ್ ಪೌರತ್ವ ಪಡೆದುಕೊಂಡಿರುವ ಹುಸೇನ್ ಅವರಿಗೆ ಒಳ್ಳೆಯದಾಗಲಿ, ಅವರಲ್ಲಿ ಕ್ರಿಯೇಟಿವಿಟಿ ಇದ್ದರೆ, ಇಸ್ಲಾಂ ಧರ್ಮವನ್ನು ಬೆತ್ತಲೆಗೊಳಿಸಿ ನೋಡೋಣ ಎಂದು ರವಿಶಂಕರ ಗುರೂಜಿ ಸವಾಲು ಹಾಕಿದ್ದಾರೆ.











Click it and Unblock the Notifications