ದೆಹಲಿಗೆ ಹೊರಟ ರೈತರ ರೈಲಿಗೆ ಕಲ್ಲುತೂರಾಟ
ನಾಗ್ಪುರ,ಮಾ.9
: ನೈಸ್ ಯೋಜನೆ ವಿರುದ್ಧ ಸಮರ ಸಾರಿ ದೆಹಲಿಗೆ ಹೊರಟಿರುವ ರೈತ ಮುಖಂಡರ ವಿಶೇಷ ರೈಲಿನ ಮೇಲೆ ಮಹಾರಾಷ್ಟ್ರದ ನಾಗ್ಪುರದ ಬಳಿಕೆ ಕಿಡಿಗೇಡಿಗಳು ಕಲ್ಲು ಮತ್ತು ಬಾಟಲು ತೂರಾಡಿದ ಘಟನೆ ನಡೆದಿದೆ. ಘಟನೆಯಲ್ಲಿ ನೈಸ್ ವಿರುದ್ಧ ರೈತ ಹೋರಾಟ ಸಮಿತಿ ಅಧ್ಯಕ್ಷ ಪಂಚಲಿಂಗಯ್ಯ ಮತ್ತು ಪ್ರಧಾನ ಕಾರ್ಯದರ್ಶಿ ರಘು ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. id="toptextpromo">ಸೋಮವಾರ
( ಮಾ.8 ) ರಾತ್ರಿ ಈ ರೈಲು ನಾಗ್ಪುರದ ಬಳಿ 15 ನಿಮಿಷ ನಿಂತು ಮುಂದಕ್ಕೆ ಚಲಿಸುತ್ತಿದ್ದಂತೆ ದುಷ್ಕರ್ಮಿಗಳು ಕಲ್ಲು ಮತ್ತು ಬಾಟಲಿಗಳನ್ನು ಕಿಟಕಿ ಮೂಲಕ ಎಸೆದು ಪರಾರಿಯಾಗಿದ್ದಾರೆ. ನೈಸ್ ಯೋಜನೆ ವಿರುದ್ಧ ತಮ್ಮ ಹೋರಾಟವನ್ನು ತೀವ್ರಗೊಳಿಸಲು ಸುಮಾರು 1200 ರೈತರು ದೆಹಲಿಗೆ ತೆರಳಿದ್ದರು. id='are-slot-1' class='oiad oi-axt oiadv'> id='top-searched-articles'> ಜೆಡಿಎಸ್ ಮುಖಂಡ ಮತ್ತು ಮಾಜಿ ಪ್ರಧಾನಿ ದೇವೇಗೌಡ ಮಾರ್ಗದರ್ಶನದಲ್ಲಿ ಭಾನುವಾರ (ಮಾ.7 ) ರಂದು ಬೆಂಗಳೂರಿನಿಂದ ವಿಶೇಷ ರೈಲಿನಲ್ಲಿ ರೈತರು ದೆಹಲಿಗೆ ಹೊರಟಿದ್ದರು. ಮಾಜಿ ಪ್ರಧಾನಿ ದೇವೇಗೌಡ ಘಟನೆಯನ್ನು ತೀವ್ರವಾಗಿ ಖಂಡಿಸಿ ಇದು ನೈಸ್ ಮಾಲೀಕ ಅಶೋಕ್ ಖೇಣಿ ಬೆಂಬಲಿಗರ ಕೃತ್ಯ ಎಂದು ಆರೋಪಿಸಿದ್ದಾರೆ. ರೈಲಿಗೆ ಈಗ ಹೆಚ್ಚಿನ ಭದ್ರತೆ ಒದಗಿಸಲಾಗಿದೆ.











Click it and Unblock the Notifications