ಬಿಡದಿ ಆಶ್ರಮದಲ್ಲಿ ತುರ್ತು ಸುದ್ದಿಗೋಷ್ಠಿ

ಉದ್ದೇಶಿತ ಮಾಧ್ಯಮ ಗೋಷ್ಠಿ ಸೋಮವಾರ ಮಧ್ಯಾನ್ಹ 2 ಗಂಟೆಗೆ ನಡೆಯಲಿದ್ದು ದಟ್ಸ್ ಕನ್ನಡ ಗೋಷ್ಠಿಯ ವರದಿಯನ್ನು ಪ್ರಕಟಿಸಲಿದೆ. ನಿತ್ಯಾನಂದ ಸಾರ್ವಜನಿಕ ಹೇಳಿಕೆ ;ವಿಡಿಯೋ
ಮಾಧ್ಯಮ ಗೋಷ್ಠಿಯನ್ನು ಉದ್ದೇಶಿಸಿ ಆಶ್ರಮದ ಅಂತರ ರಾಷ್ಟ್ರೀಯ ಸಂಯೋಜಕ ಮತ್ತು ವಕ್ತಾರ ಸ್ವಾಮಿ ನಿತ್ಯ ಸಚ್ಚಿದಾನಂದ ಅವರು ಮಾತನಾಡಲಿದ್ದಾರೆ. ಗೋಷ್ಠಿಯಲ್ಲಿ ಅವರೊಂದಿಗೆ ನಿತ್ಯ ಜ್ಞಾನಾನಂದ ಮಹಾಚಾರ್ಯ, ನಿತ್ಯ ಪ್ರಾಣಾನಂದ ಅವರುಗಳು ಉಪಸ್ಥಿತರಿರುತ್ತಾರೆ.
ಆಧ್ಯಾತ್ಮಿಕ ಗುರು ನಿತ್ಯಾನಂದ ಸ್ವಾಮಿಯ ಸೆಕ್ಸ್ ವಿಡಿಯೋ ಪ್ರಕರಣ ಅವರ ವಿರುದ್ಧ ಮಾಡಲಾಗಿರುವ ಒಂದು ದುರುದ್ದೇಶದ ಹುನ್ನಾರವಾಗಿದ್ದು ತನ್ಮೂಲಕ ಆಶ್ರಮ ಮತ್ತು ಸ್ವಾಮಿಗಳಿಗೆ ಕೆಟ್ಟ ಹೆಸರು ತರುವ ಪ್ರಯತ್ನದ್ದಾಗಿದೆ ಎಂದು ಪತ್ರಿಕಾಗೋಷ್ಠಿ ಆಮಂತ್ರಣ ಪತ್ರಿಕೆಯಲ್ಲಿ ತಿಳಿಸಲಾಗಿದೆ.
ತಮಿಳು ಚಿತ್ರ ನಟಿ ರಂಜಿತಾ ಅವರೊಂದಿಗೆ ನಿತ್ಯಾನಂದ ಸ್ವಾಮಿಗಳು ಕಾಮಕೇಳಿ ಮಾಡಿದರೆನ್ನಲಾದ ವಿಡಿಯೋ ಚಿತ್ರಗಳು ಈಗ ಜಗಜ್ಜಾಹೀರಾಗಿರುವುದನ್ನು ಇಲ್ಲಿ ಸ್ಮರಿಸಬಹುದಾಗಿದೆ. ಅದರಿಂದ ಉಟಾಗಿರುವ ಕೋಲಾಹಲ ಮತ್ತು ನಿತ್ಯಾನಂದರ ವಿರುದ್ಧ ಮಾಡಲಾಗಿರುವ ಎಲ್ಲ ಆರೋಪಗಳೂ ಸುಳ್ಳು ಎಂದು ವಿವರಿಸುವುದೇ ಸುದ್ದಿಗೋಷ್ಠಿಯ ಉದ್ದೇಶವಾಗಿರುತ್ತದೆ.












Click it and Unblock the Notifications