ವೆಬ್ ಸೈಟ್ ನಲ್ಲಿ ಪ್ರತ್ಯಕ್ಷನಾದ ಸ್ವಾಮಿ ನಿತ್ಯಾನಂದ

Hunt for Nithyananda Swamy in Mysore
ಮೈಸೂರು, ಮಾ.7: ಪರಮಹಂಸ ನಿತ್ಯಾನಂದ ಸ್ವಾಮೀಜಿಗಾಗಿ ಪೊಲೀಸರು ತೀವ್ರ ಹುಡುಕಾಟ ಆರಂಭಿಸಿದ್ದಾರೆ. ನಟಿ ಜೊತೆಗಿನ ರಾಸಲೀಲೆ ಪ್ರಕರಣ ಬಯಲಾಗುತ್ತಿದ್ದಂತೆ ನಿತ್ಯಾನಂದ ಸ್ವಾಮಿ ನಾಪತ್ತೆಯಾಗಿದ್ದರು. ಇದೀಗ ಪೊಲೀಸರು ಸ್ವಾಮಿ ನಿತ್ಯಾನಂದನಿಗಾಗಿ ವ್ಯಾಪಕ ಜಾಲ ಬೀಸಿದ್ದಾರೆ.

ಆದರೆ ಸ್ವಾಮಿ ನಿತ್ಯಾನಂದ ಮಾತ್ರ ಅವರ ಆಶ್ರದ ವೈಬ್ ಸೈಟ್ ಧ್ಯಾನಪೀಠಂನಲ್ಲಿ ಪ್ರತ್ಯಕ್ಷನಾಗಿದ್ದಾನೆ. ನಾನು ಯಾವ ಅಪರಾಧವನ್ನು ಮಾಡಿಲ್ಲ. ಇದೆಲ್ಲಾ ನನ್ನ ವಿರುದ್ಧ ನಡೆದಿರುವ ಷಡ್ಯಂತ್ರ. ನನ್ನ ಬೆಂಬಲಕ್ಕೆ ಹಲವಾರು ಇ ಮೇಲ್ ಗಳು ಬರುತ್ತಿವೆ ಎಂದು ಆಶ್ರಮದ ವೆಬ್ ಸೈಟ್ ನಲ್ಲಿ ನಿತ್ಯಾನಂದರು ಹೇಳಿಕೊಂಡಿದ್ದಾರೆ.

ಅವರು ಎಲ್ಲಿದ್ದಾರೆ? ಹೇಗಿದ್ದಾರೆ? ವೆಬ್ ಸೈಟನ್ನು ಎಲ್ಲಿಂದ ಅಪ್ ಡೇಟ್ ಮಾಡಲಾಗಿದೆ ಎಂಬ ವಿವರಗಳನ್ನು ಬಹಿರಂಗಪಡಿಸಿಲ್ಲ. ಒಟ್ಟಿನಲ್ಲಿ ನಿತ್ಯಾನಂದ ಸ್ವಾಮೀಜಿಗಳು ಭಾರತದಲ್ಲೇ ಇದ್ದಾರೆ. ಅವರು ದೇಶಬಿಟ್ಟು ಎಲ್ಲೂ ಹೋಗಿಲ್ಲ. ಶೀಘ್ರದಲ್ಲೇ ಅವರು ಹಿಂತಿರುಗಲಿದ್ದಾರೆ ಎಂದು ಅವರ ಪರ ವಕೀಲರು ತಿಳಿಸಿದ್ದಾರೆ.

ನಿತ್ಯಾನಂದ ಲೈಂಗಿಕ ಪ್ರಕರಣದ ವಿಡಿಯೋವನ್ನು ಬಿಡಿದಿ ಆಶ್ರದಲ್ಲೇ ಚಿತ್ರೀಕರಿಸಲಾಗಿದೆ.ಅಷ್ಟೇ ಅಲ್ಲದೆ ಲೈಂಗಿಕ ತೃಷೆ ತೀರಿಸಿಕೊಳ್ಳಲು ಮಹಿಳೆಯರನ್ನು ಬಳಸಿಕೊಳ್ಳುತ್ತಿದ್ದ, ಇದಕ್ಕಾಗಿಯೇ ಆತನ ಲೈಂಗಿಕ ವಿಡಿಯೋವನ್ನು ಚಿತ್ರೀಕರಿಸಿದ್ದಾಗಿ ನಿತ್ಯಾನಂದ ಸ್ವಾಮಿಯ ಕಾರು ಚಾಲಕ ನಿತ್ಯಧರ್ಮಾನಂದ ಅಲಿಯಾಸ್ ಲೆನಿನ್ ಚೆನ್ನೈ ಪೊಲೀಸರೊಂದಿಗೆ ಹೇಳಿಕೊಂಡಿದ್ದ.

ಇದೀಗ ಆತನನ್ನು ಕರ್ನಾಟಕ ಪೊಲೀಸರ ವಶಕ್ಕೆ ಒಪ್ಪಿಸಲಾಗುತ್ತಿದ್ದು, ಚೆನ್ನೈ ಪೊಲೀಸರು ಭಾನುವಾರ ರಾತ್ರಿ ಬೆಂಗಳೂರಿಗೆ ಆಗಮಿಸುವ ಸಾಧ್ಯತೆಯಿದೆ. ಏತನ್ಮಧ್ಯೆ ನಿತ್ಯಾನಂದ ಮೈಸೂರಿನಲ್ಲಿ ಅಡಗಿದ್ದಾನೆ ಎಂಬ ವದಂತಿಗಳ ಹಿನ್ನೆಲೆಯಲ್ಲಿ ಪೊಲೀಸರು ನಿತ್ಯಾನಂದನಿಗಾಗಿ ತೀವ್ರ ಹುಡುಕಾಟ ಆರಂಭಿಸಿದ್ದಾರೆ. ವಿವಿಧ ಆಶ್ರಮಗಳು, ಹೋಟೆಲ್ ಗಳು ಮತ್ತು ಕೆಲವು ಮನೆಗಳಲ್ಲಿ ಹುಡುಕಾಟ ನಡೆಸಿದ್ದಾಗಿ ತಿಳಿದುಬಂದಿದೆ.

ಆದರೆ ಈ ಸುದ್ದಿಯನ್ನು ಮೈಸೂರಿನ ಡಿಸಿಪಿ (ಅಪರಾಧ ಮತ್ತು ಸಂಚಾರ) ಪಿ ರಾಜೇಂದ್ರ ಪ್ರಸಾದ್ ಅಲ್ಲಗಳೆದಿದ್ದಾರೆ. ಸ್ವಾಮೀಜಿಗಾಗಿ ಮೈಸೂರಿನಲ್ಲಿ ಹುಡುಕಾಟ ನಡೆದಿಲ್ಲ. ಆದರೆ ಈ ಸಂಬಂಧ ಸಾರ್ವಜನಿಕರಿಂದ ನಮಗೆ ವಿವಿಧ ಕಡೆಗಳಿಂದ ದೂರವಾಣಿ ಕರೆಗಳು ಬರುತ್ತಿರುವುದು ನಿಜ ಎಂದು ಅವರು ತಿಳಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+