ವಿಶ್ವಕಪ್ ಟೂರ್ನಿ:ಭಾರತ ಬಹುತೇಕ ಹೊರಕ್ಕೆ
ನವದೆಹಲಿ,
ಮಾ 5 : ಧ್ಯಾನ್ ಚಂದ್ ಕ್ರೀಡಾಂಗಣದಲ್ಲಿ ಗುರುವಾರ (ಮಾ 4 ) ನಡೆದ ನಿರ್ಣಾಯಕ ಪಂದ್ಯದಲ್ಲಿ ಭಾರತ ಸ್ಪೇನ್ ತಂಡಕ್ಕೆ 2 -5 ಗೋಲುಗಳಿಂದ ಶರಣಾಗುವ ಮೂಲಕ ಸೆಮಿಫೈನಲ್ ಹಾದಿಯಿಂದ ಹೊರ ಬೀಳುವುದು ಬಹುತೇಕ ಖಚಿತವಾದಂತಾಯಿತು. id="toptextpromo">ಪಂದ್ಯದ
ಮೊದಲಾರ್ಧದಲ್ಲಿ ಸ್ಪೇನ್ ಆಟಗಾರರು ಪ್ರಾಬಲ್ಯ ಮೆರೆದು ಆಕ್ರಮಣಕಾರಿ ದಾಳಿಗೆ ಮುಂದಾದರು. ವಿರಾಮದ ವೇಳೆ 2 -0 ಗೋಲುಗಳ ಮಹತ್ವದ ಮುನ್ನಡೆ ಸಾಧಿಸುವ ಮೂಲಕ ಪಂದ್ಯದ ಮೇಲೆ ಹಿಡಿತ ಸಾಧಿಸಿದರು. ಉತ್ತರಾರ್ಧದ ಆಟ ಆರಂಭವಾಗುತ್ತಿದ್ದಂತೆ ಭಾರತದ ಆಟಗಾರರು ಸಹ ಎದುರಾಳಿ ಮೇಲೆ ಮುಗಿಬಿದ್ದರು. ಆದರೆ ಸ್ಪೇನ್ ತನ್ನ ದಾಳಿಯನ್ನು ಮತ್ತಷ್ಟು ಚುರುಕುಗೊಳಿಸಿ ಮತ್ತೆ ಮೂರು ಗೋಲುಗಳನ್ನು ದಾಖಲಿಸಿತು. ಸ್ಪೇನ್ ಪರ ಕ್ಯುಮಾಡೋ ಎರಡು,ಅಲ್ಬರ್ಟ್ ಸಲಾ, ಪೋಲ್ ಅಮಾಟ್ ಮತ್ತು ರಾಮೋನ್ ಅಲೆಗ್ರ ತಲಾ ಒಂದು ಗೋಲು ಹೊಡೆದರೆ, ಭಾರತದ ಪರ ಸಂದೀಪ್ ಸಿಂಗ್ ಮತ್ತು ಗುರ್ವಿಂದರ್ ಸಿಂಗ್ ಚಾಂಡಿ ಒಂದೊಂದುಗೋಲು ದಾಖಲಿಸಿದರು. id='are-slot-1' class='oiad oi-axt oiadv'> id='top-searched-articles'>ನಿನ್ನೆ
ನಡೆದ ಇತರ ಎರಡು ಪಂದ್ಯದಲ್ಲಿ ಫೇವರೆಟ್ ಆಸ್ಟ್ರೇಲಿಯಾ, ಎದುರಾಳಿ ದಕ್ಷಿಣಆಫ್ರಿಕಾ ತಂಡವನ್ನು ದಾಖಲೆಯ 12 -3 ಗೋಲುಗಳಿಂದ ಸದೆ ಬಡಿದಿದ್ದರೆ, ಇಂಗ್ಲೆಂಡ್ ತಂದ ಪಾಕಿಸ್ತಾನ ತಂಡವನ್ನು 5 -2 ಗೋಲುಗಳಿಂದ ಸೋಲಿಸಿತು. ಭಾರತ ಅಂಕ ಪಟ್ಟಿಯಲ್ಲಿ ಇಂಗ್ಲೆಂಡ್, ಆಸ್ಟ್ರೇಲಿಯಾ, ಸ್ಪೇನ್ ನಂತರದ ಸ್ಥಾನದಲ್ಲಿದೆ.











Click it and Unblock the Notifications