ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಸಿಎಂ ಸ್ಥಿಮಿತ ಕಳೆದು ಕೊಂಡಿದ್ದಾರೆ, ಎಚ್ಡಿಕೆ
ಚನ್ನರಾಯಪಟ್ಟಣ, ಮಾ 5 : ರಾಜ್ಯದಲ್ಲಿನ ಬಿಜೆಪಿ ಸರಕಾರವನ್ನು ಅತಂತ್ರಗೊಳಿಸುವ ಯಾವುದೇ ಉದ್ದೇಶ ಜೆಡಿಎಸ್ ಪಕ್ಷಕ್ಕಿಲ್ಲ, ಕಲ್ಲಿದ್ದಲು ವಿಚಾರದಲ್ಲಿ ಹಿಂದಿನ ಸರಕಾರ ಸಾವಿರಾರು ಕೋಟಿ ದುರುಪಯೋಗ ಮಾಡಿಕೊಂಡಿದೆ ಎನ್ನುವ ಮುಖ್ಯಮಂತ್ರಿಗಳ ಹೇಳಿಕೆಯಲ್ಲಿ ಯಾವುದೇ ಹುರುಳಿಲ್ಲ, ಅವರು ಮಾನಸಿಕ ಸ್ಥಿಮಿತ ಕಳೆದುಕೊಂಡು ಮಾತನಾಡುತ್ತಿದ್ದಾರೆಂದು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಆರೋಪಿಸಿದರು.
ಪಟ್ಟಣದಲ್ಲಿ ನೂತನ ಕಲ್ಯಾಣ ಮಂಟಪ ಉದ್ಘಾಟಿಸಿ ಮಾತನಾಡುತ್ತಿದ್ದ ಕುಮಾರಸ್ವಾಮಿ, ಕಲ್ಲಿದ್ದಲು ಅವ್ಯವಹಾರದಲ್ಲಿ ನಮ್ಮ ಸರಕಾರ ಭಾಗಿಯಾಗಿದ್ದರೆ ಯಡಿಯೂರಪ್ಪನವರು ತನಿಖೆ ನಡೆಸಲಿ, ಅದು ಬಿಟ್ಟು ಬೇಕಾಬಿಟ್ಟಿ ಹೇಳಿಕೆ ನೀಡಿದರೆ ಅವರ ಸ್ಥಾನಕ್ಕೆ ಚ್ಯುತಿ ತರುವುದಿಲ್ಲ. ನೈಸ್ ವಿಚಾರದಲ್ಲಿ ದೇವೇಗೌಡರು ದೆಹಲಿಯಲ್ಲಿ ಇದೇ ತಿಂಗಳು ಹಮ್ಮಿಕೊಂಡಿರುವ ಪ್ರತಿಭಟನೆಯ ಹಿಂದೆ ಯಾವುದೇ ರಾಜಕೀಯ ದುರುದ್ದೇಶವಿಲ್ಲ. ಕೇಂದ್ರಕ್ಕೆ ನೈಸ್ ಅವ್ಯವಹಾರ ಮನವರಿಕೆ ಮಾಡುವ ಉದ್ದೇಶ ಅಷ್ಟೇ ಎಂದು ಕುಮಾರಸ್ವಾಮಿ ಸಮರ್ಥಿಸಿ ಕೊಂಡಿದ್ದಾರೆ.
ಕೇಂದ್ರ ಸರಕಾರ ರಾಜ್ಯಗಳಿಗೆ ನೀಡುವ ಸ್ಥಾನಮಾನಗಳ ಕುರಿತು ಶೀಘ್ರದಲ್ಲೇ ವರದಿ ಬರಲಿದೆ, ನಂತರ ನಮ್ಮ ರಾಜ್ಯ ಯಾವ ಸ್ಥಾನದಲ್ಲಿದೆ ಎಂದು ತಿಳಿಯುತ್ತದೆ. ಪ್ರವಾಸೋದ್ಯಮದಲ್ಲಿ ಆಂಧ್ರ ಮಂಚೂಣಿಯಲ್ಲಿದ್ದರೆ ನಮ್ಮ ಸರಕಾರ ಜಾಹೀರಾತು ನೀಡುವುದರಲ್ಲಿ ಪ್ರಥಮ ಸ್ಥಾನ ಉಳಿಸಿಕೊಂಡಿದೆ ಎಂದು ಕುಮಾರಸ್ವಾಮಿ ವ್ಯಂಗ್ಯವಾಡಿದರು.