ನಿತ್ಯಾನಂದನ ಲೀಲೆಗಳ ಪ್ರಸಾರ ಬೇಡ, ಕರುಣಾನಿಧಿ
ಚೆನ್ನೈ,
ಮಾ. 4 : ಯುವಜನಾಂಗದ ಮೇಲೆ ಪರಿಣಾಮ ಬೀರುತ್ತಿರುವುದರಿಂದ ನಿತ್ಯಾನಂದ ಸ್ವಾಮಿಯ ರಾಸಲೀಲೆಯಲ್ಲಿ ವಿಡಿಯೋಗಳನ್ನು ಪದೆಪದೇ ಟಿವಿಗಳಲ್ಲಿ ಪ್ರಸಾರ ಮಾಡುವುದಾಗಲಿ, ಪತ್ರಿಕೆಗಳಲ್ಲಿ ಮುದ್ರಿಸುವುದಾಗಲಿ ಮಾಡಬಾರದು ಎಂದು ತಮಿಳುನಾಡು ಮುಖ್ಯಮಂತ್ರಿ ಎಂ ಕರುಣಾನಿಧಿ ಮಾಧ್ಯಮಗಳಿಗೆ ಮನವಿ ಮಾಡಿಕೊಂಡಿದ್ದಾರೆ. id="toptextpromo"> ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಿದ್ದ ಅವರು, ನಿತ್ಯಾನಂದನ ವಿರುದ್ಧ ಸಾಕ್ಷ್ಯಾಧಾರಗಳು ಲಭ್ಯವಿದ್ದರೆ ಪೊಲೀಸ್ ಠಾಣೆಗೆ ತಲುಪಿಸಿ ಎಂದು ಹೇಳಿದ್ದಾರೆ. ನಿತ್ಯಾನಂದನ ವಿರುದ್ಧ ಈಗಾಗಲೇ ಅನೇಕ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಅಧ್ಯಾತ್ಮಿಕ ಹೆಸರಿನಲ್ಲಿ ಸ್ವಾಮಿ ಸೋಗು ಹಾಕಿಕೊಂಡು ಸಾವಿರಾರು ಮಂದಿಗೆ ಮೋಸ ಮಾಡಿರುವ ಆರೋಪಿಯ ಬಗ್ಗೆ ಕಣ್ಣಿಡಲಾಗಿದೆ. ಈ ಪ್ರಕರಣವನ್ನು ಸರಕಾರ ಗಂಭೀರವಾಗಿ ಪರಿಗಣಿಸಿದ್ದು, ಕಾನೂನು ಪ್ರಕಾರ ಆತನ ವಿರುದ್ಧ ಕ್ರಮ ಕೈಗೊಳ್ಳಲು ಸರಕಾರ ಸಿದ್ಧವಿದೆ ಎಂದು ಕರುಣಾನಿಧಿ ಹೇಳಿದ್ದಾರೆ. id='are-slot-1' class='oiad oi-axt oiadv'> id='top-searched-articles'> ನಿತ್ಯಾನಂದನ ಈ ನೀಚ ಕೆಲಸವನ್ನು ಮಾಧ್ಯಮಗಳು ಪ್ರಸಾರ ಮಾಡುವ ಅವಶ್ಯಕತೆ ಇಲ್ಲ. ಅಲ್ಲದೇ ಪದೆಪದೇ ಪ್ರಸಾರ ಮಾಡುವುದರಿಂದ ಯುವಜನಾಂಗದ ಮೇಲೆ ಭಾರಿ ಪರಿಣಾಣ ಬೀರಲಿದೆ. ಹೀಗಾಗಿ, ಮುಂದಿನ ದಿನಗಳಲ್ಲಿ ನಿತ್ಯಾನಂದನ ಪ್ರಕರಣದ ವಿಡಿಯೋವನ್ನು ಪ್ರಸಾರ ಮಾಡುವುದನ್ನು ಕೈಬಿಡುವುದು ಸೂಕ್ತ. ಆತನ ಸೂಕ್ತ ಸಾಕ್ಷ್ಯಾಧಾರಗಳಿದ್ದರೆ ಸರಕಾರಕ್ಕೆ ಸಲ್ಲಿಸಿ ಎಂದು ಮುಖ್ಯಮಂತ್ರಿ ಹೇಳಿದ್ದಾರೆ.











Click it and Unblock the Notifications