ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಾನು ಭಾರತಕ್ಕೆ ಬೇಕಿಲ್ಲ, ಹುಸೇನ್

By Mrutyunjaya Kalmat
|
Google Oneindia Kannada News

MF Hussain
ಬೆಂಗಳೂರು, ಮಾ. 3 : ನಾನು ಈಗಲೂ ಭಾರತವನ್ನು ತುಂಬಾ ಪ್ರೀತಿಸುತ್ತೇನೆ. ಭಾರತ ನನ್ನ ಮಾತೃಭೂಮಿ. ಆದರೆ, ಭಾರತಕ್ಕೆ ನಾನು ಬೇಕಾಗಿಲ್ಲ ಎಂಬುದೇ ನೋವಿನ ಸಂಗತಿಯಾಗಿದೆ ಎಂದು ಕತಾರ್ ಪೌರತ್ವ ಪಡೆದಿರುವ ಹೆಸರಾಂತ ಕಲಾವಿದ ಎಂ ಎಫ್ ಹುಸೇನ್ ಹೇಳಿದ್ದಾರೆ.

ಹಿಂದೂ ದೇವತೆಗಳ ಅವಹೇಳನ ಮಾಡಿರುವ ಹಲವಾರು ದೂರುಗಳು ದೇಶಾದ್ಯಂತ ದಾಖಲಾಗಿರುವ ನಂತರ 2006ರಲ್ಲಿಯೇ ಭಾರತ ತೊರೆದಿರುವ 95ರ ಪ್ರಾಯದ ಅವರು, ಮಲಯಾಳಿ ದಿನಪತ್ರಿಕೆ ಮಾಧ್ಯಮ್ ದೋಹಾ ಆವೃತ್ತಿಗೆ ನೀಡಿದ ಸಂದರ್ಶನದಲ್ಲಿ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದ್ದಾರೆ, ಸಂಘ ಪರಿವಾರ ನನ್ನ ವಿರುದ್ಧ ದಾಳಿ ಆರಂಭಿಸಿದಾಗ ರಾಜಕಾರಣಿಗಳು, ಕಲಾವಿದರು, ಬುದ್ಧಿಜೀವಿಗಳೂ ಸೇರಿದಂತೆ ಯಾರೊಬ್ಬರೂ ನನ್ನ ನೆರವಿಗೆ ಬರಲಿಲ್ಲ ಎಂದು ಹುಸೇನ್ ಬೇಸರ ವ್ಯಕ್ತಪಡಿಸಿದ್ದಾರೆ.

ತಮ್ಮ ವಿರುದ್ಧ ದಾಖಲಾಗಿರುವ ಪ್ರಕರಣಗಳೆಲ್ಲವನ್ನು ಕಲಾವಿದನ ಅಭಿವೃಕ್ತಿ ಸ್ವಾತಂತ್ರ್ಯದ ವಿರುದ್ದ ದಾಖಲಾದ ಪ್ರಕರಣಗಳು ಎಂದು ಪ್ರತಿಪಾದಿಸಿದ ಅವರು, ಕಲೆಯ ಭಾಷೆ ಎನ್ನುವುದು ಸಾರ್ವತ್ರಿಕವಾದದ್ದು, ಈ ಭಾಷೆಯ ಮೂಲಕ ನಾನು ಯಾರನ್ನೂ ನೋಯಿಸುವ ಕೆಲಸ ಮಾಡಿಲ್ಲ. ಕೇವಲ ನನ್ನ ಆತ್ಮದ ಸೃಜನಶೀಲತೆ ವ್ಯಕ್ತಪಡಿಸಿದ್ದೇನೆ ಎಂದು ಸ್ಪಷ್ಟಪಡಿಸಿದ್ದಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X