ಬುಧವಾರ ರಂಗಶಂಕರದಲ್ಲಿ ಜುಗಾರಿ ಕ್ರಾಸ್

ಸಮುದಾಯದ ಇತ್ತೀಚಿನ ಅತಿ ಜನಪ್ರಿಯ ನಾಟಕ " ಜುಗಾರಿ ಕ್ರಾಸ್" ಇದೇ ಮಾರ್ಚಿ 3 ನೇ ತಾರೀಖು ರಂಗ ಶಂಕರದಲ್ಲಿ ಸಂಜೆ 7.30 ಕ್ಕೆ ಪ್ರದರ್ಶನಗೊಳ್ಳುತ್ತಿದೆ. ಬನ್ನಿ ನಾಟಕ ನೋಡುವಿರಂತೆ.
ನಾಟಕದ ಬಗ್ಗೆ :
ಪೂರ್ಣಚಂದ್ರ ತೇಜಸ್ವಿಯವರ ಕಾದಂಬರಿ ಆಧಾರಿತ ಈ ನಾಟಕ ಕೇವಲ 24 ಗಂಟೆಗಳಲ್ಲಿ ನಡೆಯುವ ಒಂದು ರೊಮ್ಯಾಂಟಿಕ್ ಥ್ರಿಲ್ಲರ್. ಜತೆಗೆ, ಇದು ನಿಜವಾಗಿಯೂ ಸಹ್ಯಾದ್ರಿಯ ಕಾಡುಗಳ ತಪ್ಪಲಿನಲ್ಲಿ ನಡೆಯಬಹುದಾದ ವಾಸ್ತವ ನೆಲೆಗಟ್ಟಿನ ಸಾಮಾಜಿಕ ಕಾದಂಬರಿ.
ಕಾಡಿನಲ್ಲಿರುವ ಲಕ್ಷಾಂತರ ಬೆಲೆಬಾಳುವ ಮರಗಳು ಮತ್ತಿತರ ನೈಸರ್ಗಿಕ ಸಂಪತ್ತು ಕಾಳ ದಂಧೆಗಳ ತವರೂರಾಗುವುದು, ಕಾಡಿನಿಂದ ಉತ್ಪತ್ತಿಯಾಗುವ ಕಾಳಧನ ದೇಶದ ರಾಜಕೀಯವನ್ನೇ ನಿಯಂತ್ರಿಸುವುದು, ಈ ಕಾಳ ವ್ಯವಹಾರಗಳ ಜೊತೆಜೊತೆಗೇ ಡ್ರಗ್ಸ್ ಮಾಫಿಯಾ ಜೂಜು ಸೇರಿ, ಅನೇಕ ವೇಳೆ ಇದ್ಯಾವುದಕ್ಕೂ ಸಂಬಂಧಿಸದ ಮುಗ್ಧರನ್ನೂ ಪ್ರಾಣಾಪಾಯದ ಅಂಚಿಗೆ ತಳ್ಳಬಹುದು ಎಂಬುದೇ ಈ ಕಥೆಯ ಹಿನ್ನೆಲೆ.
ಏಲಕ್ಕಿ ಬೆಳೆಗಾರ ಸುರೇಶ ಮತ್ತು ಅವನ ಹೆಂಡತಿ ಗೌರಿ ಏಲಕ್ಕಿ ವ್ಯಾಪಾರಕ್ಕೆಂದು ಪೇಟೆಗೆ ಬಂದವರು, ಅವರಿಗೇ ತಿಳಿಯದೇ ಕಳ್ಳ ದಂಧೆಗೆ ಸಿಕ್ಕಿಕೊಂಡು ಕ್ಷಣ ಕ್ಷಣಕ್ಕೂ ರೋಚಕವಾಗಿ ಸಾಗುವ, ಬೆಚ್ಚಿಬೀಳಿಸುವ ಅಂಡರ್‌ವರ್ಲ್ಡ್‌ನ ಕಥೆಯೊಂದಿಗೆ ಹೆಣೆದುಕೊಂಡಿರುವ ನಾಟಕವೇ ಜುಗಾರಿ ಕ್ರಾಸ್.
* ನಾಟಕ : ಜುಗಾರಿ ಕ್ರಾಸ್
* ರಚನೆ : ಕೆ. ಪೂರ್ಣಚಂದ್ರ ತೇಜಸ್ವಿ
* ನಾಟಕ ರೂಪ ಮತ್ತು ನಿರ್ದೇಶನ : ನಟರಾಜ್ ಹೊನ್ನವಳ್ಳಿ
* ಸಂಗೀತ : ಗಜಾನನ ಟಿ.ನಾಯ್ಕ
* ಸ್ಥಳ : ರಂಗಶಂಕರ
* ದಿನಾಂಕ/ವಾರ : 03.03.2010/ಬುಧವಾರ
* ಸಮಯ : ಸಂಜೆ 7.30
ಟಿಕೆಟ್ ಮತ್ತಿತರ ಮಾಹಿತಿಗಾಗಿ ಸಂಪರ್ಕ : ವೆಂಕಟೇಶ್ ಪ್ರಸಾದ್ : 99001 82400, 98807 31982
-
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಗೆ ಚಾಲನೆ: ಕಾಮಗಾರಿಗೆ 3,348 ಕೋಟಿ ರೂ ಟೆಂಡರ್ ಆಹ್ವಾನ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ -
Dolly Dhananjay: ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು: ನಟ ಡಾಲಿ ಧನಂಜಯ್ -
SSLC Maths Exam: ಎಸ್ಎಸ್ಎಲ್ಸಿ ಗಣಿತ ಪರೀಕ್ಷೆಯಲ್ಲಿ ಪಠ್ಯದ ಹೊರತಾದ ಪ್ರಶ್ನೆಗಳ ಆರೋಪ, ಕೃಪಾಂಕಕ್ಕಾಗಿ ಹೆಚ್ಚಿದ ಒತ್ತಾಯ -
ಪರಮಾತ್ಮ ಹೇಳಿದ್ರೂ ಹಿಂದೆ ಸರಿಯಲ್ಲ ಎಂದಿದ್ದ ಕಾಂಗ್ರೆಸ್ನ ಸಾದಿಕ್ ಪೈಲ್ವಾನ್ ನಾಮಪತ್ರ ಹಿಂಪಡೆಯಲು ಇದೆ ಹಲವು ಕಾರಣ -
Tamil Nadu Election: ತನ್ನ ಡ್ರೈವರ್ ಮಗನಿಗೆ MLA ಟಿಕೆಟ್ ಘೋಷಿಸಿದ ನಟ ದಳಪತಿ ವಿಜಯ್, ಭಾವುಕ ಕ್ಷಣದ ವಿಡಿಯೋ ವೈರಲ್ -
ವಿರಾಟ್ ಅಸಲಿ ಆಟ ಇನ್ನೂ ಬಾಕಿಯಿದೆ; ಕಿಂಗ್ ಕೊಹ್ಲಿಗೆ ವಿಶೇಷ ಮನವಿ ಮಾಡಿಕೊಂಡ ಅಂಬಟಿ ರಾಯುಡು, ಭಾರೀ ವೈರಲ್ -
Bengaluru Weather: ನಗರಕ್ಕೆ ಇಂದು ಸೋಮವಾರವು ಗುಡುಗು ಸಹಿತ ಮಳೆ ಎಚ್ಚರಿಕೆ, ಸವಾರರೇ ಗಮನಿಸಿ -
Prakash Raj Mother passed Away: ನಟ ಪ್ರಕಾಶ್ ರಾಜ್ ತಾಯಿ ಸ್ವರ್ಣಲತಾ ನಿಧನ, ಚಿತ್ರರಂಗದ ಗಣ್ಯರಿಂದ ಸಂತಾಪ












Click it and Unblock the Notifications