ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಶ್ವಕಪ್ ಹಾಕಿ: ಭಾರತ-ಪಾಕ್ ಸಮರಕ್ಕೆ ಸಜ್ಜು

By Mahesh
|
Google Oneindia Kannada News

WC hockey
ನವದೆಹಲಿ, ಫೆ. 27: ಗೊಂದಲದ ಗೂಡಾಗಿರುವ ಹಾಕಿ ಇಂಡಿಯಾ ತನ್ನೆಲ್ಲಾ ಕಹಿಗಳನ್ನು ಮರೆತು ಒಗ್ಗೂಡ ಬಲಿಷ್ಠ ಎದುರಾಳಿ ಪಾಕಿಸ್ತಾನವನ್ನು ಎದುರಿಸಲು ಸಜ್ಜಾಗಿದೆ. ಇಲ್ಲಿನ ಧ್ಯಾನ್ ಚಂದ್ ಕ್ರೀಡಾಂಗಣದಲ್ಲಿ ವಿಶ್ವಕಪ್ ಹಾಕಿ ಪಂದ್ಯಾವಳಿಗಳು ನಾಳೆಯಿಂದ ಆರಂಭಗೊಳ್ಳಲಿದೆ. ಇಂಟರ್ ನ್ಯಾಷನಲ್ ಹಾಕಿ ಫೆಡರೇಷನ್(FIH) ಆಯೋಜನೆಯ ವಿಶ್ವಕಪ್ ಹಾಕಿ ಪಂದ್ಯಾವಳಿಗಳು ಫೆ. 28 ರಿಂದ ಮಾ.13ರವರೆಗೆ ನಡೆಯಲಿದ್ದು, 12ದೇಶಗಳು ಕಪ್ ಗಾಗಿ ಸೆಣಸಲಿವೆ.

ಎಂಟು ಒಲಿಂಪಿಕ್ ಚಿನ್ನ ಗೆದ್ದು, 1975ರಲ್ಲಿ ವಿಶ್ವಕಪ್ ಎತ್ತಿರುವ ಹಾಕಿ ಇಂಡಿಯಾಗೆ ರಾಜ್‌ಪಾಲ್ ಸಿಂಗ್ ನಾಯಕತ್ವದಲ್ಲಿ ಯಶ ಲಭಿಸುವುದೇ ಎಂದು ಕಾದು ನೋಡಬೇಕು. ಗುರ್ಬಾಜ್ ಸಿಂಗ್, ಸರದಾರ್ ಸಿಂಗ್, ಭರತ್, ಅರ್ಜುನ್ ಹಾಲಪ್ಪ, ದಾನಿಶ್ ಮುಜ್ತಾಬಾ, ವಿಕ್ರಂ ಪಿಳ್ಳೆ ಮಿಡ್ ಫೀಲ್ಡ್ ನಲ್ಲಿ ನೀಡುವ ಪಾಸ್ ಗಳನ್ನು ಗೋಲ್ ಪೋಸ್ಟ್ ಗೆ ತಳ್ಳುವ ಚಾಕಚಕ್ಯತೆಯನ್ನು ಮೆರೆಯಲು ರಾಜ್‌ಪಾಲ್ ಸಿಂಗ್, ಶಿವೇಂದ್ರ ಸಿಂಗ್, ತುಷಾರ್ ಖಾಂಡೇಕರ್, ಪ್ರಭ್ಜೋತ್ ಸಿಂಗ್, ಸರ್ವನ್‌ಜಿತ್ ಸಿಂಗ್, ದೀಪಕ್ ಠಾಕುರ್, ಗುರ್ವಿಂದರ್ ಸಿಂಗ್ ಚಾಂದಿ ಸಿದ್ಧರಾಗಿದ್ದಾರೆ.

ಅಭ್ಯಾಸ ಪಂದ್ಯದಲ್ಲಿ ಹಾಲೆಂಡ್ ಹಾಗೂ ಅರ್ಜೇಂಟಿನಾವನ್ನು ಸೋಲಿಸಿರುವ ಭಾರತ ಸಹಜವಾಗಿ ಗೆಲ್ಲುವ ಹುಮ್ಮಸಿನಿಂದ ಆಡಲು ಸಜ್ಜ್ಜಾಗಿದೆ. ಆದರೆ, ಪೆನಾಲ್ಟಿ ತಜ್ಞರ ಪಡೆಯನ್ನೇ ಹೊಂದಿರುವ ಪಾಕ್ ತಂಡ, ಭಾರತಕ್ಕೆ ಕಬ್ಬಿಣದ ಕಡಲೆ ಆದರೆ ಅಚ್ಚರಿಯೇನಿಲ್ಲ. ಪಾಕಿಗಳ ದಾಳಿಯನ್ನು ತಡೆಯಲು ಭಾರತದ ಗೋಲಿಗಳಾದ ಆಡ್ರಿಯನ್ ಡಿಸೋಜಾ ಅಥವಾ ಪಿ.ಆರ್.ಶ್ರೀಜಿಶ್ ಜೊತೆಗೆ ಸಂದೀಪ್ ಸಿಂಗ್, ಧನಂಜಯ್ ಮಹಾಧಿಕ್, ದಿವಾಕರ್ ರಾಮ್ ತಡೆಗೋಡೆ ನಿರ್ಮಿಸಿ ಕಾಯುವುದಂತೂ ಸತ್ಯ. ಜರ್ಮನಿ, ಆಸ್ಟೇಲಿಯಾ ಹಾಗೂ ಹಾಲೆಂಡ್ ತಂಡಗಳು ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡಗಳಾಗಿ ಕಣಕ್ಕಿಳಿಯಲಿವೆ. ಅದರಲ್ಲೂ ಒಲಿಂಪಿಕ್ ಚಾಂಪಿಯನ್ನರಾದ ಜರ್ಮನಿ ತಂಡ, ವಿಶ್ವಕಪ್ ಹ್ಯಾಟ್ರಿಕ್ ಸಾಧನೆಯ ಕನಸು ಕಾಣುತ್ತಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X