ಕೇಂದ್ರ ಬಜೆಟ್: ಇಂಧನ, ಕಾರು, ಸಿಗರೇಟ್ ಹೆಚ್ಚಳ

ಇದರ ಜೊತೆಗೆ ಕಾರು, ಸಿಮೆಂಟ್ ಹಾಗೂ ಸಿಗರೇಟ್ ಬೆಲೆಗಳು ಏರಿಕೆ. ಕಂಪನಿಗಳ ಮೇಲಿನ ತೆರಿಗೆ ಹೆಚ್ಚಳ ಹಾಗೂ 1.60 ಲಕ್ಷ ರುಪಾಯಿವರೆಗೆ ಯಾವುದೇ ತೆರಿಗೆ ಇಲ್ಲ ಎಂದು ಅವರು ತಿಳಿಸಿದ್ದಾರೆ. ಈ ಮಧ್ಯೆ ತೈಲ ಸುಂಕ ಹೆಚ್ಚಳ ವಿರೋಧಿಸಿ ಬಿಜೆಪಿ ಮತ್ತು ಅಂಗ ಪಕ್ಷಗಳು ಪ್ರತಿಭಟನೆ ನಡೆಸಿದವು. ಆಗ ಕೆಲ ಕಾಲ ಲೋಕಸಭೆಯಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಯಿತು.
ಬಜೆಟ್ ನ ಮುಖ್ಯಾಂಶಗಳು:
*ಪೆಟ್ರೋಲ್,ಡಿಸೇಲ್ ಬೆಲೆಗಳು ಹೆಚ್ಚಳ ಸಂಭವ
*ಆದಾಯ ತೆರಿಗೆ ರಿಟರ್ಸ್ ಸಲ್ಲಿಸಲು ಸರಳ್ 2 ಅರ್ಜಿ ನಮೂನೆ.
*ಆದಾಯ ತೆರಿಗೆ ವಿನಾಯಿತಿ ಮಿತಿ ಬದಲಿಲ್ಲ.
*1.6 ಲಕ್ಷ ರುಪಾಯಿವರೆಗೆ ತೆರಿಗೆ ಇಲ್ಲ. ತೆರಿಗೆ ಸ್ಲಾಬ್ ವಿಸ್ತರಣೆ.
*1.6 ಲಕ್ಷ ದಿಂದ 5 ಲಕ್ಷ ರುಪಾಯಿವರೆಗೆ ಶೇ. 10 ತೆರಿಗೆ.
*5 ಲಕ್ಷ ದಿಂದ 8 ಲಕ್ಷ ರುಪಾಯಿವರೆಗೆ ಶೇ. 20 ತೆರಿಗೆ.
*8 ಲಕ್ಷಕ್ಕಿಂತ ಅಧಿಕ ಆದಾಯಕ್ಕೆ ಶೇ. 30 ತೆರಿಗೆ.
*7.46 ಲಕ್ಷ ಕೋಟಿ ತೆರಿಗೆ ಸಂಗ್ರಹ ಗುರಿ.
*2010-1 ರಲ್ಲಿ ವಿತ್ತೀಯ ಕೊರತೆ 5.5 ನಿರೀಕ್ಷೆ.
*ನಕ್ಸಲ್ ಪೀಡಿತಜಿಲ್ಲೆಗಳ ಅಭಿವೃದ್ದಿಗೆ ಕ್ರಮ.
*ಈ ವರ್ಷಾಂತ್ಯಕ್ಕೆ ಗುರುತಿನ ಚೀಟಿ ವಿತರಣೆ ಆರಂಭ
*ಕಂಪನಿಗಳ ಮೇಲೆ ವಿಧಿಸುವ ಸರ್ಚಾರ್ಜ್ ಶೇ. 10 ರಿಂದ ಶೇ. 7ಕ್ಕೆ ಇಳಿಕೆ.
*ಕಂಪನಿಗಳ ಮೇಲೆ ವಿಧಿಸುವ ತೆರಿಗೆ ಶೇ. 15 ರಿಂದ 18ಕ್ಕೆ ಏರಿಕೆ.
*ರಕ್ಷಣಾ ಇಲಾಖೆಗೆ 1,47,000ಕೋಟಿ ರುಪಾಯಿ.
*ಮಹಿಳಾ ಕೃಷಿನಿಧಿ ಯೋಜನೆ 100 ಕೋಟಿ ರುಪಾಯಿ.
*ರಾಷ್ಟ್ರೀಯ ನ್ಯಾಯದಾನ ಮಿಷನ್ ಸ್ಥಾಪನೆ.
*ಅಬಕಾರಿ ಸುಂಕ ಶೇ. 8ರಿಂದ 10 ಕ್ಕೆ ಏರಿಕೆ.
*ಸಿಗರೇಟು ಮತ್ತಷ್ಟುತುಟ್ಟಿ.
*ತೈಲಕ್ಕೆ ಅಬಕಾರಿ ಸುಂಕ ಶೇ.1 ಹೆಚ್ಚಳ.
*ದೊಡ್ಡ ಕಾರು, ಸಿಮೆಂಟ್ ಮತ್ತಷ್ಟು ದುಬಾರಿ.
*2000 ಜನಸಂಖ್ಯೆ ಇರುವ ಎಲ್ಲ ಹಳ್ಳಿಗಳಿಗೂ ಬ್ಯಾಂಕ್ ಸ್ಥಾಪನೆ.
*ಅಸಂಘಟಿತ ವಲಯ ಜನರ ಸುರಕ್ಷಿತೆಗೆ ಸಂಧ್ಯಾಸುರಕ್ಷಾ ಯೋಜನೆಗೆ 1000 ಕೋಟಿ ರುಪಾಯಿ.
*ಆರೋಗ್ಯ ಇಲಾಖೆಗೆ 22, 300 ಕೋಟಿ ರುಪಾಯಿ.
*10 ಲಕ್ಷ ರುಪಾಯಿ ಗೃಹ ಸಾಲಕ್ಕೆ ಶೇ. 1 ಬಡ್ಡಿ ಸಬ್ಸಿಡಿ.
*ನೂತನ ಪಿಂಚಣಿ ಸೇರುವ ಪ್ರತಿ ಕಾರ್ಮಿಕನಿಗೆ ಖಾತೆ 1000 ಸೇರ್ಪಡೆ.
*ಇಂದಿರಾ ಆವಾಸ್ ಯೋಜನೆಗೆ 1000 ಕೋಟಿ ರುಪಾಯಿ.
*ಅಸಂಘಟಿತ ಕಾರ್ಮಿಕ ಪಿಂಚಣಿ ಮೂರು ವರ್ಷಕ್ಕೆ ವಿಸ್ತರಣೆ.
*ರಾಜೀವ ಆವಾಸ್ ಯೋಜನೆಗೆ 1,270 ಕೋಟಿ ರುಪಾಯಿ.
*ಜವಳಿ ವಲಯದಲ್ಲಿ 30 ಜನರಿಗೆ ಕೌಶಾಲಾಭಿವೃದ್ದಿ ತರಬೇತಿ.
*ರಾಷ್ಟ್ರೀಯ ಗುರುತಿನ ಚೀಟಿ ಯೋಜನೆಗೆ1900 ಕೋಟಿ ರುಪಾಯಿ.
*2010ರಲ್ಲಿ 2000 ಸಿಆರ್ ಪಿಎಫ್ ಯೋಧರ ನೇಮಕ.












Click it and Unblock the Notifications