ನಮ್ಮ ಬೆಂಗಳೂರು ಪ್ರಶಸ್ತಿ ಯಾರಿಗೆ ಸಂದಲಿದೆ?

ಅರಮನೆ ಮೈದಾನದಲ್ಲಿ ಸಂಜೆ ಏಳು ಗಂಟೆಗೆ ನಡೆಯಲಿರುವ ವರ್ಣರಂಜಿತ ಸಮಾರಂಭದಲ್ಲಿ ರಾಜ್ಯಪಾಲ ಎಚ್ಆರ್ ಭಾರದ್ವಾಜ್ ಮತ್ತು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಭಾಗವಹಿಸಲಿದ್ದಾರೆ. ಈ ಪ್ರಶಸ್ತಿ ನಮ್ಮ ಬೆಂಗಳೂರು ಫೌಂಡೇಶನ್ ಆಯೋಜಿಸಿದ್ದು, ಇದು ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಅವರ ಕಲ್ಪನೆಯ ಕೂಸು.
ಪ್ರಶಸ್ತಿಗೆ ಪಾತ್ರರಾಗುವ ಸಾಮಾನ್ಯರ ಆಯ್ಕೆಯನ್ನು ಬೆಂಗಳೂರಿನ ನಾಗರಿಕರಿಗೇ ನೀಡಲಾಗಿತ್ತು. ಅಂತರ್ಜಾಲದ ಮುಖಾಂತರ ನಡೆಸಿದ ಆಯ್ಕೆ ಪ್ರಕ್ರಿಯೆಯಲ್ಲಿ ಒಟ್ಟು 4000ಕ್ಕೂ ಹೆಚ್ಚಿನ ನಾಮನಿರ್ದೇಶನ ಬಂದಿತ್ತು. ಅದರಲ್ಲಿ 26 ಅರ್ಹ ಜನರನ್ನು ಅಂತಿಮ ಪಟ್ಟಿಯಲ್ಲಿ ಉಳಿಸಿಕೊಳ್ಳಲಾಗಿದೆ. ಅವರಲ್ಲಿ 14 ಶ್ರೀಸಾಮಾನ್ಯರು ನಮ್ಮ ಬೆಂಗಳೂರು ಪ್ರಶಸ್ತಿ ಪಡೆಯಲಿದ್ದಾರೆ.
ಬಹುಮಾನ ಗೆಲ್ಲಿ : ಅಂತಿಮ ಪಟ್ಟಿಯಲ್ಲಿರುವ 26 ಜನರಲ್ಲಿ ಪ್ರಶಸ್ತಿಗೆ ಪಾತ್ರರಾಗುವ ಅರ್ಹರು ಯಾರೆಂದು ಅಂದಾಜಿಸಿದವರಿಗೆ 1 ಲಕ್ಷ ರು. ಬಹುಮಾನವನ್ನು ನೀಡಲಾಗಿದೆ. ನಿಮ್ಮ ಆಯ್ಕೆಯನ್ನು ತಿಳಿಸಲು ಇಲ್ಲಿ ಕ್ಲಿಕ್ಕಿಸಿ.
ಲೋಕಾಯುಕ್ತ ಸಂತೋಷ್ ಹೆಗಡೆ, ಚಿತ್ರನಟಿ ರಮ್ಯಾ, ಮಾಜಿ ಕ್ರಿಕೆಟಿಗ ಜಾವಗಲ್ ಶ್ರೀನಾಥ್, ಸಾಹಿತಿ ಚಿದಾನಂದ ಮೂರ್ತಿ, ಪರಿಸರತಜ್ಞ ಯಲ್ಲಪ್ಪ ರೆಡ್ಡಿ, ರಂಗಕರ್ಮಿಗಳಾದ ಅರುಂಧತಿ ನಾಗ್, ಪ್ರಕಾಶ್ ಬೆಳವಾಡಿ, ಉದ್ಯಮಿ ಆರ್ ಕೆ ಮಿಶ್ರಾ ಸೇರಿದಂತೆ 20 ಗಣ್ಯರು ಜ್ಯೂರಿಯಾಗಿ ಕಾರ್ಯ ನಿರ್ವಹಿಸಿದ್ದಾರೆ.












Click it and Unblock the Notifications