ಕನ್ನಡ ನಾಟಕ ರಚನಾ ಸ್ಪರ್ಧೆಗೆ ಅರ್ಜಿ ಆಹ್ವಾನ
ಬೆಂಗಳೂರು,
ಫೆ. 25 : ಕರ್ನಾಟಕ ನಾಟಕ ಅಕಾಡೆಮಿ ವತಿಯಿಂದ ಮುದೇನೂರು ಸಂಗಣ್ಣ ಸ್ಮಾರಕ ಪೂರ್ಣಾವಧಿ (ಕನಿಷ್ಠ 90 ನಿಮಿಷಗಳ ಅವಧಿಯ) ಕನ್ನಡ ನಾಟಕ ರಚನಾ ಸ್ಪರ್ಧೆಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ. id="toptextpromo">ಆಸಕ್ತ
ನಾಟಕ ರಚನಕಾರರು ತಮ್ಮ ರಂಗಾಸಕ್ತಿ, ನಾಟಕ ರಚನಾನುಭವ, ಹಾಗೂ ಇತರೆ ವೈಯಕ್ತಿಕ ವಿವರಗಳನ್ನೊಳಗೊಂಡ ಅರ್ಜಿಯನ್ನು ಮಾರ್ಚ್ 5ರೊಳಗಾಗಿ ರಿಜಿಸ್ಟ್ರಾರ್, ಕರ್ನಾಟಕ ನಾಟಕ ಅಕಾಡೆಮಿ, ಚಾಲುಕ್ಯ ವಿಭಾಗ, ಕನ್ನಡ ಭವನ, ಜೆ.ಸಿ. ರಸ್ತೆ, ಬೆಂಗಳೂರು ವಿಳಾಸಕ್ಕೆ ಕಳಿಹಿಸಬೇಕು. ದೂರವಾಣಿ ಸಂಖ್ಯೆ 2223 7484 ಕರೆಮಾಡಿ ಹೆಚ್ಚಿನ ವಿವರ ತಿಳಿದುಕೊಳ್ಳಬಹುದು. id='are-slot-1' class='oiad oi-axt oiadv'> id='top-searched-articles'>ಶಿಬಿರದ
ಅವಧಿ ಒಟ್ಟು ಆರು ದಿನಗಳಾಗಿದ್ದು, ಮೂರು ಕಂತುಗಳಲ್ಲಿ ಇದನ್ನು ಶನಿವಾರ ಮತ್ತು ಭಾನುವಾರಗಳಂದು ನಡೆಸಲಾಗುವುದು. ಮೊದಲ ಕಂತಿನ ಶಿಬಿರವು, 2010ರ ಮಾರ್ಚ್ 20 ಹಾಗೂ 21ರ ಶನಿವಾರ, ಭಾನುವಾರಗಳಂದು ಹಾಗೂ ಮುಂದಿನ ಶಿಬಿರವು ಮಾರ್ಚ್ 27 ಹಾಗೂ 28ರಂದು ಬರುವ ಶನಿವಾರ ಭಾನುವಾರಗಳಂದು ನಡೆಯಲಿದೆ ಎಂದು ಕರ್ನಾಟಕ ನಾಟಕ ಅಕಾಡೆಮಿಯ ಪ್ರಕಟಣೆ ತಿಳಿಸಿದೆ.











Click it and Unblock the Notifications