ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಫೀಜ್ ನನ್ನು ಭಾರತಕ್ಕೆ ಹಸ್ತಾಂತರಿಸಿ, ರಾವ್

By India Asks Pakistan To Arrest 26/11 Mastermind Hafiz Saeed
|
Google Oneindia Kannada News

NIrupama Rao and Bashir
ನವದೆಹಲಿ, ಫೆ. 25 : ಮುಂಬೈ ಭಯೋತ್ಪಾದನೆ ಪ್ರಮುಖ ಕಾರಣಿಕರ್ತವಾಗಿರುವ ಜಮಾತ್ ಉದ್ ದವಾ ಹಾಗೂ ಲಷ್ಕರ್ ಇ ತೊಯ್ಬಾ ಸಂಘಟನೆಯ ಮುಖ್ಯಸ್ಥ ಸಯೀದ್ ಹಫೀಜ್ ನನ್ನು ಹಸ್ತಾಂತರಿಸುವಂತೆ ಭಾರತ ಬಲವಾಗಿ ಪ್ರತಿಪಾದಿಸಿದೆ.

ಇಲ್ಲಿನ ಹೈದರಾಬಾದ್ ಭವನದಲ್ಲಿ ಆರಂಭವಾಗಿರುವ ಭಾರತ ಪಾಕಿಸ್ತಾನದ ವಿದೇಶಾಂಗ ಕಾರ್ಯದರ್ಶಿಗಳ ಮಹತ್ವದ ಮಾತುಕತೆಯಲ್ಲಿ ಭಾರತ ತನ್ನ ಬಹುಮುಖ್ಯ ಬೇಡಿಕೆಯನ್ನು ಮುಂದಿಟ್ಟಿದೆ. ಭಾರತದ ವಿದೇಶಾಂಗ ಕಾರ್ಯದರ್ಶಿ ನಿರುಪಮಾ ರಾವ್ ಮತ್ತು ಪಾಕಿಸ್ತಾನದ ವಿದೇಶಾಂಗ ಕಾರ್ಯದರ್ಶಿ ಸಲ್ಮಾನ್ ಬಶೀರ್ ನಡುವೆ ಮಾತುಕತೆ ಆರಂಭವಾಗಿದ್ದು, ಭಾರತದಲ್ಲಿ ಭಯೋತ್ಪಾದನೆ ಕೃತ್ಯ ನಡೆಸಿ ಪಾಕಿಸ್ತಾನದಲ್ಲಿರುವ ಭಯೋತ್ಪಾದಕರನ್ನು ಭಾರತಕ್ಕೆ ಹಸ್ತಾಂತರಿಸುವಂತೆ ನಿರುಪಮಾ ರಾವ್ ಪಾಕಿಸ್ತಾನವನ್ನು ಒತ್ತಾಯಿಸಿದ್ದಾರೆ.

ಆದರೆ, ಪಾಕಿಸ್ತಾನದ ಹಫೀಜ್ ವಿರುದ್ಧ ಕಠಿಣ ಜರುಗಿಸಲು ಪಾಕ್ ಸರಕಾರ ಸಿದ್ಧವಿದೆ. ಆದರೆ, ಆರೋಪಿ ಎದುರು ಸೂಕ್ತ ಸಾಕ್ಷ್ಯಾಧಾರಗಳ ಕೊರತೆ ಇದೆ ಎಂದು ಹೇಳಿದ್ದಾರೆ ಎನ್ನಲಾಗಿದೆ. ಪಾಕಿಸ್ತಾನದ ವಿದೇಶಾಂಗ ಕಾರ್ಯದರ್ಶಿ ಸಲ್ಮಾನ್ ಬಶೀರ್, ಹಿರಿಯ ಅಧಿಕಾರಿಗಳಾದ ಅಫ್ರಾಸಿಯಾಬ್, ಶಾಹೀದ್ ಮಲೀಕ್, ಪಾಕ್ ರಾಯಭಾರಿ ಅಬ್ದುಲ್ ಬಸಿತ್ ಸೇರಿದಂತೆ ಐದು ಹಿರಿಯ ಅಧಿಕಾರಗಳ ಮಾತುಕತೆಯಲ್ಲಿ ಭಾಗವಹಿಸಿದೆ.

ಸಂಜೆ ನಿರುಪಮಾ ರಾವ್ ಅವರು ಪಾಕಿಸ್ತಾನದ ನಿಯೋಗ ಭೋಜನಕೂಟ ವ್ಯನಸ್ಥೆ ಮಾಡಿದ್ದಾರೆ. ಸಂಜೆ ಈ ನಿಯೋಗ ಭಾರತದ ರಕ್ಷಣಾ ಸಲಹೆಗಾರ ಶಿವಶಂಕರ್ ಮೆನನ್ ಹಾಗೂ ವಿದೇಶಾಂಗ ಸಚಿವ ಎಸ್ ಎಂ ಕೃಷ್ಣ ಅವರನ್ನು ಭೇಟಿ ಮಾಡುವ ಸಾಧ್ಯತೆ ಇದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X