ಜಾರ್ಜ್ ಅಪಹರಣ ಕೇವಲ ವದಂತಿ ; ಪತ್ನಿ

George Fernandes
ನವದೆಹಲಿ, ಫೆ. 20 : ಸಮತಾಪಕ್ಷದ ನಾಯಕ ಮತ್ತು ಮಾಜಿ ರಕ್ಷಣಾ ಸಚಿವ 79 ವರ್ಷ ವಯಸ್ಸಿನ ಜಾರ್ಜ್ ಫರ್ನಾಂಡಿಸ್ ಅತ್ಯಂತ ಸುರಕ್ಷಿತವಾಗಿದ್ದಾರೆ ಎಂದು ಅವರ ಮಡದಿ ಕಬೀರ್ ಮತ್ತು ಮಗ ಸೀನ್ ಫರ್ನಾಂಡಿಸ್ ಹೇಳಿದ್ದಾರೆ.

ಮರೆವಿನ ರೋಗದಿಂದ ಬಳಲುತ್ತಿರುವ ಜಾರ್ಜ್ ಫರ್ನಾಂಡಿಸ್ ಅವರನ್ನು ದೆಹಲಿ ನಿವಾಸದಿಂದ ಅಪಹರಿಸಲಾಗಿದೆ ಮತ್ತು ಇದರಲ್ಲಿ ಅವರ ಹೆಂಡತಿ ಮತ್ತು ಮಗನ ಕೈವಾಡವಿದೆ ಎಂದು ಆರೋಪಿಸಲಾಗಿತ್ತು. ಫರ್ನಾಂಡಿಸ್ ಅವರ ಸಹೋದರ ನ್ಯಾಯಾಲಯದ ಮೊರೆ ಹೋಗುವುದಾಗಿ ಹೇಳಿದ್ದರು. ಅವರ ಸ್ನೇಹಿತ ಮತ್ತು ಸುಪ್ರೀಂ ಕೋರ್ಟಿನ ಮಾಜಿ ನ್ಯಾಯಮೂರ್ತಿ ಎಂಎನ್ ವೆಂಕಟಾಚಲಯ್ಯ ಅವರು ಜಾರ್ಜ್ ಅವರ ಇರುವಿನ ಮಾಹಿತಿ ನೀಡಬೇಕೆಂದು ಆಗ್ರಹಿಸುತ್ತಿದ್ದರು.

ಈ ಎಲ್ಲ ಆರೋಪಗಳನ್ನು ಕಬೀರ್ ಮತ್ ಸೀನ್ ತಳ್ಳಿಹಾಕಿದ್ದಾರೆ. "ಅವರನ್ನು ಬಚ್ಚಿಡಲಾಗಿಲ್ಲ, ಅವರು ನಮ್ಮೊಂದಿಗೇ ಇದ್ದಾರೆ. ಹರಿದ್ವಾರದಲ್ಲಿರುವ ಪತಂಜಲಿ ಯೋಗಪೀಠದಲ್ಲಿ ಆಯುರ್ವೇದ ಚಿಕಿತ್ಸೆಗಾಗಿ ಕರೆದೊಯ್ಯಲಾಗಿತ್ತು" ಎಂದು ಕಬೀರಿ ಖಾಸಗಿ ಟಿವಿ ಚಾನಲ್ಲಿಗೆ ತಿಳಿಸಿದ್ದಾರೆ. ಆದರೆ, ಆಯುರ್ವೇದದ ಚಿಕಿತ್ಸೆ ನೀಡುವ ನೆಪದಲ್ಲಿ ಅವರನ್ನು ಅಪಹರಿಸಲಾಗಿದೆ ಎಂದು ಜಾರ್ಜ್ ಅವರ ಸಹೋದರ ಮೈಕೆಲ್ ಫರ್ನಾಂಡಿಸ್ ಆರೋಪಿಸಿದ್ದರು.

ಜಾರ್ಜ್ ಫರ್ನಾಂಡಿಸ್ ಅವರಿಗೆ ಸೇರಿರುವ 25 ಕೋಟಿ ರು. ಆಸ್ತಿಗಾಗಿ ಕುಟುಂಬದಲ್ಲಿಯೇ ಭಾರೀ ಪೈಪೋಟಿ ಏರ್ಪಟ್ಟಿದೆ. 20 ವರ್ಷಗಳ ಹಿಂದೆ ಜಾರ್ಜ್ ಅವರನ್ನು ತೊರೆದಿದ್ದ ಹೆಂಡತಿ ಮತ್ತು ಮಗ, ಜಾರ್ಜ್ ಅವರ ಸಹೋದರರು ಆಸ್ತಿಯನ್ನು ಕಬಳಿಸಲು ಪ್ರಯತ್ನಿಸುತ್ತಿದ್ದಾರೆಂದು ಆರೋಪಿಸಿ, ಜಾರ್ಜ್ ಅವರನ್ನು ಮತ್ತೆ ಕೂಡಿಕೊಂಡಿದ್ದಾರೆ. ಇದನ್ನು ಜಾರ್ಜ್ ಸಹೋದರರು ತಳ್ಳಿಹಾಕಿದ್ದು, ನಮಗೆ ಅವರ ಯಾವ ಆಸ್ತಿಯೂ ಬೇಡ, ಅವರೊಬ್ಬರಿದ್ದರೆ ಸಾಕು ಎಂದು ಹೇಳಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+