ಶಿವಮೊಗ್ಗದಲ್ಲಿ ಅಪ್ಪ-ಮಗನ ಪಕ್ಷವಾಗಿರುವ ಬಿಜೆಪಿ

ಎಂ.ಎ.ಡಿ.ಬಿ ಅದ್ಯಕ್ಷ ಪದ್ದಣ್ಣ ಸೇರಿದಂತೆ ಹಲವು ಮುಖಂಡರಿಗೆ ಆಂತರಿಕ ಸ್ವಾತಂತ್ರವಿಲ್ಲದಂತಾಗಿದೆ. ಈ ಬಗ್ಗೆ ಹಲವು ಬಾರಿ ಆಂತರಿಕವಾಗಿ ಪ್ರತಿಭಟಿಸಿ ತೀರಾ ಬೇಸತ್ತು ಪಕ್ಷದಲ್ಲಿದ್ದು ಸರಿಪಡಿಸಲು ಸಾದ್ಯವಿಲ್ಲ ಎಂದರಿತು ಬಿಜೆಪಿಯಿಂದ ದೂರವಾಗುತ್ತಿರುವುದಾಗಿ ತಿಳಿಸಿದ ಅವರು ಕಾಂಗ್ರೆಸ್ ಸೇರುವ ಆಲೋಚನೆಯಿದ್ದು ಮುಖಂಡರಿಂದ ಸೂಕ್ತ ಆಹ್ವಾನ ಬಂದಲ್ಲಿ ತೀರ್ಮಾನಿಸುವುದಾಗಿ ತಿಳಿಸಿದರು.
ಮುಖ್ಯಮಂತ್ರಿ ಹಾಗೂ ಸಂಸದರು ವಿವಿಧ ರೀತಿಯಲ್ಲಿ ಅಕ್ರಮವಾಗಿ ಹಣಗಳಿಸಿ ತಾಲೂಕಿನ ಜನತೆಗೆ ನೀಡಿ ವ್ಯವಸ್ಥೆ ಹಾಗೂ ನೈತಿಕತೆಯನ್ನು ಹಾಳು ಮಾಡಿದ್ದಾರೆ ಎಂದು ಆರೋಪಿಸಿದರು. ಪಕ್ಷ ತೊರೆಯದಂತೆ ತೋರಿಸಿದ ಅಧಿಕಾರ, ಆಸೆ, ಆಮಿಷ ತಿರಸ್ಕರಿಸಿರುವುದಾಗಿ ತಿಳಿಸಿದರು.
ಸರ್ಕಾರಿ ಕಚೇರಿಗಳಲ್ಲಿ ಭ್ರಷ್ಟಾಚಾರವು ವ್ಯಾಪಕವಾಗಿದ್ದು, ಭ್ರಷ್ಟಾಚಾರ ನಿರ್ಮೂಲನೆಗೆ ಜನರೊಂದಿಗೆ ಯಾವಾಗಲೂ ಸಿದ್ಧರಿರುವುದಾಗಿ ಹೇಳಿದರು. ಪಟ್ಟಣದ ಕೃಷಿ ಭೂಮಿ ಉಳಿಸಿ ಹೋರಾಟ ಸಮಿತಿ, ಭಾರತ ಸಂವಿಧಾನ ರಕ್ಷಣಾ ವೇದಿಕೆ ಮತ್ತಿತರರ ಹಲವು ಸಮಿತಿಯ ಕಾರ್ಯಕರ್ತರು, ಮುಖಂಡರು ಬೇಟಿ ಮಾಡಿ ತಾಲೂಕಿನಲ್ಲಿನ ಅನ್ಯಾಯ ಅಕ್ರಮದ ವಿರುದ್ದದ ಹೋರಾಟದ ನೇತೃತ್ವವನ್ನು ವಹಿಸಿಕೊಳ್ಳುವಂತೆ ಮಾಡಿದ ಮನವಿಗೆ ಸ್ಪಂದಿಸಿ ಅವರು ಮಾತನಾಡಿದರು.
ಕೃಷಿ ಭೂಮಿ ಉಳಿಸಿ ಹೋರಾಟ ಸಮಿತಿಯ ಅದ್ಯಕ್ಷ ಡಿ.ಎಸ್.ಈಶ್ವರಪ್ಪ ಮಾತನಾಡಿ, ತಾಲೂಕಿನಲ್ಲಿ ಬಿಜೆಪಿಯ ಬೆಳವಣಿಗೆಗಾಗಿ ಹೋರಾಡಿದ ಫಲವಾಗಿ ಹಲವರು ಇಂದಿಗೂ ಸಮಸ್ಯೆಯ ಸುಳಿಯಲ್ಲಿದ್ದಾರೆ. ಆದರೆ ದೂಷಿಸುತ್ತಿದ್ದವರು ಅಧಿಕಾರವನ್ನು ಅನುಭವಿಸುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.
ಈ ಸಂದರ್ಭದಲ್ಲಿ ಪುರಸಭಾ ಉಪಾದ್ಯಕ್ಷ ನಾಗರಾಜಗೌಡ, ಸದಸ್ಯ ರೇವಣಸಿದ್ದಪ್ಪ, ಪಿ.ವೈ.ರವಿ, ಎಸ್.ಎಂ.ರಮೇಶ, ವಿಜಯಕುಮಾರ, ಭವಾನಿ ಗಬ್ಬೂರು ಮತ್ತಿತರರು ಉಪಸ್ಥಿತರಿದ್ದರು.












Click it and Unblock the Notifications